ಶ್ರೀಕೃಷ್ಣ
ನಿಂದಿಸಿದರೂ ನಗುವನು
ಮುದ್ದಿಸಿದರೂ ನಗುವವನು
ಮುಟ್ಟಲೋದರೆ ಸಿಗದವನು
ಕೋಪಗೊಂಡರೆ ಚುಂಬಿಸಿ ಓಡುವನು
ತಣ್ಣನೆಯ ಬೆಣ್ಣೆಯ ಕಂಡರೆ ಮೆಲ್ಲನೆ ಪುಳಕದಿ ಮೆಲ್ಲುವನು
ಗುಮ್ಮ ಬಂತೆಂದರೆ ಬಾಚಿ ತಬ್ಬುವನು!
ಆದಿಶೇಷನ ಮೇಲೆ ಒರಗಿ ನಿದ್ರಿಸುವನು!!
ಇದನ್ನೂ ಓದಿ: ಗೀತಾಸಾರ: ಒತ್ತಡ ರಹಿತ ಬದುಕು, ಯಶಸ್ವಿ ವೃತ್ತಿ ಜೀವನಕ್ಕೆ ದಾರಿ
ದುಷ್ಟನಾಗಿದ್ದರೆ ಮಾವನನ್ನೂ ಕೊಲ್ಲುವನು
ಪ್ರೇಮವಿದ್ದೊಡೆ ಕುಬ್ಜೆಯನ್ನು ಅಪ್ಪುವನು
ಲೋಕಹಿತಕ್ಕೆ ಗಿರಿಯನ್ನೇ ಎತ್ತುವನು
ದಣಿವಾದ ಅಶ್ವಗಳಿಗೆ ಮೈಯ್ಯ ಸವರುವನು
ಪ್ರೀತಿಯನ್ನು ಕೊಟ್ಟರೆ ಮರಳಿ ಪ್ರೀತಿಯನ್ನೇ ಕೊಡುವನು
ನಡೆಯಲ್ಲಿ ಎಲ್ಲರ ಹೃದಯ ಗೆದ್ದವನು
ಸ್ನೇಹಕ್ಕೆ ಶರಣಾಗಿ ಸಾರಥಿಯಾಗಿ ಸಂದವನು
ಮುರಳಿಯ ನಾದದಿ ಮನೋಹರನಾದವನು
ಇದನ್ನೂ ಓದಿ: ಗೀತಾಸಾರ: ಶ್ರೀ ಕೃಷ್ಣ ಪರಮಾತ್ಮ ಹೇಳಿದ ಜೀವನ ಸೂತ್ರಗಳು
ಉಸಿರ ಬಸಿದು ಉಸಿರ ಪೊರೆದವನು
ಧರ್ಮ ರಕ್ಷಣೆಗೆ ಹತ್ತವತಾರ ಎತ್ತುವನು
ಮಹಾಮಾತೆಯ ಮಾನಕ್ಕೆ ಅಂಗಾರಕನಾದವನು
ಎಲ್ಲರೊಳಗೊಬ್ಬನಂತೆ ನಮ್ಮಲ್ಲಿಯೇ ಇರುವವನು
ಭೇದ-ಭಾವವಿಲ್ಲದ ಶ್ಯಾಮಲ ವರ್ಣದವನು
ಪ್ರೇಮವಿದ್ದರೆ ಭಕ್ತನಿಗೇ ಸೋಲುವನು
ಯಾರಿವನು..? ಯಾರಿವನು …?
ಮೂರ್ಕಾಲ ಮೊಗದಲ್ಲಿ
ಮುಗುಳ್ನಗೆಯ ಸೂಸುವನು..!!.
