ಗೀತಾಸಾರ
ಗೀತಾಸಾರ: ಕೆಲವೊಮ್ಮೆ ನಮ್ಮ ಸಮಸ್ಯೆಗಳು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಅನಿಸುತ್ತದೆಯಲ್ಲವೇ. ಅರ್ಜುನನು ಕೂಡ ಯುದ್ಧ ಭೂಮಿಯಲ್ಲಿ ಇದೆ ಭಾವನೆಯನ್ನು ಅನುಭವಿಸಿದ್ದ. ಆತನಿಗೆ ಶ್ರೀಕೃಷ್ಣನು(Shree Krishna) ನೀಡಿದ ಸಲಹೆಗಳು ಕೇವಲ ಅರ್ಜುನನಿಗೆ ಮಾತ್ರ ಸೀಮಿತವಾಗಿಲ್ಲ ಅದು ಎಲ್ಲಾ ಕಾಲದ ಮಾನವರಿಗೂ ಅನ್ವಯಿಸುತ್ತದೆ. ಒತ್ತಡ ರಹಿತ ಜೀವನ ನಡೆಸಲು ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಮತ್ತು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಭಗವದ್ಗೀತೆಯ(Bhagavad Gita) ಒಂದು ಕೈಪಿಡಿ ಅಂತ ಕಾರ್ಯನಿರ್ವಹಿಸುತ್ತದೆ. ಬನ್ನಿ ಈ ಅಮೂಲ್ಯ ಜ್ಞಾನದ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.
ಇದನ್ನೂ ಓದಿ: ಈತನ ರಾಮಭಕ್ತಿಯ ಕಂಡು ಆಂಜನೇಯನೆ ಮಾರುಹೋಗಿದ್ದ!
ಒತ್ತಡ ರಹಿತ ಜೀವನ
ಭಗವದ್ಗೀತೆಯ(Bhagavad Gita) ಆರಂಭದಲ್ಲಿ ಅರ್ಜುನನ ಮನಸ್ಸು ಹೇಗೆ ಆತಂಕದಿಂದ ಕೂಡಿತ್ತು ನಮ್ಮ ಒತ್ತಡ ಕೋರಿದ ಜೀವನ ಅದೇ ರೀತಿ ಇರುತ್ತದೆ. ಶ್ರೀಕೃಷ್ಣರು ಅರ್ಜುನನಿಗೆ ಒತ್ತಡವಿಲ್ಲದ ಜೀವನವನ್ನು ನಡೆಸಲು ಕೆಲವು ತತ್ವಗಳು ಅಭ್ಯಾಸಗಳು ಮತ್ತು ತಂತ್ರಗಳನ್ನು ಕಲಿಸುತ್ತಾರೆ.
ನಮ್ಮ ಕಾರ್ಯಗಳ ಫಲಿತಾಂಶಗಳ ಮೇಲೆ ನಾವು ಇಟ್ಟುಕೊಂಡಿರುವ ಅತಿಯಾದ ಆಸೆಯೇ ಒತ್ತಡಕ್ಕೆ ಮುಖ್ಯ ಕಾರಣ ಎಂದು ಅವರು ವಿವರಿಸುತ್ತಾರೆ. ಇದೇ ಕಾರಣಕ್ಕೆ ಒಬ್ಬ ಸರ್ಜನ್ ತನ್ನದೇ ಹೆಂಡತಿಗೆ ಸರ್ಜರಿ ಮಾಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ನಮ್ಮ ಮಕ್ಕಳು ಹೇಗಾಗುತ್ತಾರೆ ಎಂಬ ಆತಂಕದಿಂದ ಪೋಷಕರು ಒತ್ತಡಕೊಳ್ಳಲಾಗುತ್ತಾರೆ ನಮ್ಮ ಕೆಲಸದಲ್ಲಿ ಪ್ರತಿಫಲದ ಮೇಲೆ ಮಾತ್ರ ಗಮನವಿಟ್ಟಾಗ ನಾವು ಬೇಗ ದಣಿಯುತ್ತೇವೆ.
ನಮ್ಮ ಜೀವನವನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮವರ ಮೇಲಿದ್ದ ಅತಿಯಾದ ಆಸಕ್ತಿ ನಮ್ಮ ಸಂಬಂಧಗಳನ್ನು ಹಾಳು ಮಾಡಿದೆ. ಮತ್ತು ಅದು ನಮ್ಮ ಆತಂಕಕ್ಕೆ ಮೂಲ ಕಾರಣವಾಗುತ್ತದೆ ಎಂದು ನಮಗೆ ಅರ್ಥವಾದಾಗ ಅದರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತಾ ಸಾಗಬೇಕು.
ಇದನ್ನೂ ಓದಿ: Letters to Daughter: ಮಗಳೇ, ಜಗತ್ತಿನ ಬಹುತೇಕ ಸುಂದರ ಸಂಗತಿಗಳು ಅತ್ಯಂತ ಸುಲಭವಾಗಿಯೇ ಕೈಗೆ ಎಟಕುತ್ತವೆ
ಯಶಸ್ಸು ಗಳಿಸುವುದು
ಭಗವದ್ಗೀತೆ(Bhagavad Gita) ಯಶಸ್ಸಿಗೆ ಒಂದು ಸೂತ್ರವನ್ನು ವಿವರಿಸುತ್ತದೆ. ಜೀವನದಲ್ಲಿ ಯಶಸ್ಸು ಕಾಣಲು ಮೂರು ಮುಖ್ಯ ನಿಯಮಗಳಾದ ಏಕಾಗ್ರತೆ ಸ್ಥಿರತೆ ಮತ್ತು ಸಹಕಾರವನ್ನು ಅದು ಕಲಿಸುತ್ತದೆ ಇದಲ್ಲದೆ ಕರ್ಮ ಯೋಗದ ಅಧ್ಯಾಯವು ನಾವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನ ಸ್ಪಷ್ಟಪಡಿಸುತ್ತದೆ. ಅಂದರೆ ಅಹಂಕಾರವನ್ನು ಬಿಟ್ಟು (ನಾನು ಇದನ್ನು ಮಾಡಿದ್ದೇನೆ) ಫಲಿತಾಂಶಗಳ ಬಗ್ಗೆ ಚಿಂತಿಸಿದೆ, ಕೇವಲ ನಮ್ಮ ಕೆಲಸದ ಮೇಲೆ ಗಮನಹರಿಸಬೇಕು. ನಾವು ಈ ಸಂದೇಶವನ್ನು ಅರ್ಥ ಮಾಡಿಕೊಂಡರೆ ನಮ್ಮ ವೃತ್ತಿ ಜೀವನವನ್ನು ಸಂತೋಷದಿಂದ ಮುಂದುವರಿಸಲು ಸಾಧ್ಯವಾಗುತ್ತದೆ.
ಮನಸ್ಸಿನ ನಿಯಂತ್ರಣ
ನಿಯಂತ್ರಣವಿಲ್ಲದ ಮನಸ್ಸಿನ ಗುಣಗಳು ಮತ್ತು ಅದು ಉಂಟು ಮಾಡುವ ವಿಷಾದ ಬಗ್ಗೆ ಕೃಷ್ಣನು(shree krishna) ವಿವರಿಸುತ್ತಾನೆ. ಹೇಗೆ ವಯಸ್ಕರು ಮಗುವನ್ನು ಒಬ್ಬಂಟಿಯಾಗಿ ಬಿಡದೆ ಮೇಲ್ವಿಚಾರಣೆ ಮಾಡುತ್ತಾರೋ ಹಾಗೆಯೇ ಮನಸ್ಸನ್ನು ನಿಯಂತ್ರಿಸಲು ಬಲವಾದ ಬುದ್ಧಿಶಕ್ತಿ ಬೇಕು. ಅದಕ್ಕಾಗಿ ಪ್ರತಿನಿತ್ಯ ಗೀತೆಯಲ್ಲಿ(Bhagavad Gita) ಹೇಳಲಾದ ಅಂಶಗಳನ್ನು ಅಭ್ಯಾಸ ಮಾಡಬೇಕು. ನಮ್ಮ ಜೀವನದ ಸ್ಥಿತಿಯನ್ನು, ಉತ್ತಮವಾಗಿಟ್ಟುಕೊಳ್ಳಲು ಆತ್ಮ ನಿಯಂತ್ರಣವನ್ನು ರೂಡಿಸಿಕೊಳ್ಳಬೇಕು.
