ನೀಲಿ ಆಧಾರ್
ಭಾರತೀಯ ನಾಗರಿಕರಿಗೆ ಗುರುತಿನ ಚೀಟಿಯಾಗಿ(Identiti Card) ಆಧಾರ್ ಕಾರ್ಡ್(Aadhar card) ಪ್ರಮುಖ ದಾಖಲೆಯಾಗಿದೆ. ಇದು ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿದೆ. ಆದರೆ ನವಜಾತ ಶಿಶುಗಳು ಮತ್ತು 5 ವರ್ಷದೊಳಗಿನ ಮಕ್ಕಳಿಗೆ ವಿಶೇಷವಾಗಿ ರೂಪಿಸಲಾಗಿರುವ ನೀಲಿ ಆಧಾರ್(Blue Aadhar) ಅಥವಾ ಬಾಲ್ ಆಧಾರ್ ಕಾರ್ಡ್ ಮಹತ್ವ ಹಲವಾರು ಜನರಿಗೆ ತಿಳಿದಿಲ್ಲ. ಈ ನೀಲಿ ಆಧಾರ್ ನ(Blue Aadhar) ಉದ್ದೇಶ ಪ್ರಯೋಜನಗಳು ಮತ್ತು ಅದನ್ನು ಪಡೆಯುವ ವಿಧಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೇಕೆ ಸಾಕಿ, ಸಬ್ಸಿಡಿ ಪಡೆಯಿರಿ!: ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರದಿಂದ ₹2.5 ಲಕ್ಷದವರೆಗೆ ಸಾಲ ಸೌಲಭ್ಯ
ಏನಿದು ನೀಲಿ ಆಧಾರ್? ಇದರ ವಿಶೇಷವೇನು?
ಬಣ್ಣವೇ ಇದರ ಗುರುತು: ಇದರಲ್ಲಿರುವ ಅಕ್ಷರಗಳು ನೀಲಿ ಬಣ್ಣದಲ್ಲಿ ಇರುವುದರಿಂದ ಇದಕ್ಕೆ ನೀಲಿ ಆಧಾರ್ ಎಂದು ಹೆಸರು ಬಂದಿದೆ
ಬಯೋಮೆಟ್ರಿಕ್ ಅಗತ್ಯವಿಲ್ಲ: ಐದು ವರ್ಷದೊಳಗಿನ ಮಕ್ಕಳ ಬೆರಳಚ್ಚು ಅಥವಾ ಕಣ್ಣಿನ ಅಗತ್ಯವಿಲ್ಲ ಕೇವಲ ಮಗುವಿನ ಫೋಟೋ ಮತ್ತು ಪಾಲಕರ ಆಧಾರ್ ಕಾರ್ಡ್ ಮಾಹಿತಿಯ ಮೇಲೆ ಇದನ್ನು ನೀಡಲಾಗುತ್ತದೆ.
ಬದಲಾವಣೆ ಕಡ್ಡಾಯ: ಮಗುವಿಗೆ ಐದು ಮತ್ತು 15 ವರ್ಷ ತುಂಬಿದಾಗ ಅವರ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯ ಇಲ್ಲವಾದರೆ ಕಾರ್ಡ್ ರದ್ದಾಗುತ್ತದೆ.
ಇದನ್ನೂ ಓದಿ: Movie Review: ಹರೆಯದ ಮನಸ್ಸುಗಳ ತುಡಿತವನ್ನು ಅರಿತಿರುವ ‘ಗಂಟುಮೂಟೆ’
ಯಾಕೆ ನೀಲಿ ಆಧಾರ್ ಮುಖ್ಯ?
- ಇದು ಕೇವಲ ಒಂದು ದಾಖಲೆ ಅಲ್ಲ ಮಕ್ಕಳ ಭದ್ರತೆಗೆ ಇದು ಅತಿ ದೊಡ್ಡ ಕೊಡುಗೆ.
- ದೌರ್ಜನ್ಯ ಮತ್ತು ಶೋಷಣೆ ತಡೆಗೆ: ಮಕ್ಕಳ ಕಳ್ಳ ಸಾಗಣೆ ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹಂತಹ ಅಪರಾಧಗಳನ್ನು ತಡೆಯಲು ಇದು ಸಹಾಯಕವಾಗಿದೆ.
- ಭವಿಷ್ಯಕ್ಕೆ ದಾರಿ: ಮಗುವಿನ ಶಾಲಾ ಪ್ರವೇಶದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವಿಕೆ ಮತ್ತು ಪಾಸ್ಪೋರ್ಟ್ ಪಡೆಯುವವರೆಗೂ ಇದು ಅಗತ್ಯಗತ್ಯ ದಾಖಲೆ.
- ಸರ್ಕಾರದ ಅನುಕೂಲಗಳು: ವಿದ್ಯಾರ್ಥಿ ವೇತನ ಆರೋಗ್ಯ ವಿಮೆ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇದು ಸಹಾಯಕ.
ನೀಲಿ ಆಧಾರ್ ಮಾಡಿಸುವುದು ಹೇಗೆ?
ನಿಮ್ಮ ಮಗುವಿಗೆ ನೀಲಿ ಆಧಾರ್(Blue Aadhar) ಮಾಡಿಸಲು ಎರಡು ಸುಲಭ ವಿಧಾನಗಳಿವೆ.
ಆಫ್ಲೈನ್ ನೊಂದಣಿ: ನಿಮ್ಮ ಸಮೀಪದ ಆಧಾರ್ ಸೇವಾ ಕೇಂದ್ರ ಕೆ ಮಗುವಿನ ಜನನ ಪ್ರಮಾಣ ಪತ್ರ ಪಾಲಕರ ಆಧಾರ್ ಕಾರ್ಡ್ ಹಾಗೂ ವಿಳಾಸದಾಪುರೊಂದಿಗೆ ಭೇಟಿ ನೀಡಿ.
ಆನ್ಲೈನ್ ನೊಂದಣಿ: UIDAI ವೆಬ್ ಸೈಟ್ ಗೆ ಹೋಗಿ ಅಪಾಯಿಂಟ್ಮೆಂಟ್ ಬುಕ್ ಮಾಡಿ, ನಂತರ ನಿಗದಿತ ದಿನದಂದು ದಾಖಲೆಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ.
ನೀಲಿ ಆಧಾರ್(Blue Aadhar) ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ನಂತರ 60 ದಿನಗಳಲ್ಲಿ ನಿಮಗೆ ಕಾರ್ಡ್ ತಲುಪಲಿದೆ ನಿಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿಸಲು ಇದು ಮೊದಲ ಹೆಜ್ಜೆ. ತಡ ಮಾಡದೆ ಹಿಂದೆ ಮಾಡಿಸಿ.
