ಬೆಂಗಳೂರು: ಕನ್ನಡಿಗರ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು(Mysore Sandal Soap Advertisement) ಮತ್ತು ಪ್ರಚಾರಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಮೈಸೂರು ಸ್ಯಾಂಡಲ್ ಸೋಪ್(Mysore Sandal Soap) ರಾಯಭಾರಿಯಾಗಿರುವ ನಟಿ ತಮನ್ನಾ ಭಾಟಿಯಾಗೆ(Tammana Bhatiya) ಸರ್ಕಾರವು 6.20 ಕೋಟಿ ಪಾವತಿಸಿದೆ.
ಇದನ್ನೂ ಓದಿ: Dharmasthala Case: ಸ್ನೇಹಮಯಿ ಕೃಷ್ಣ ಎಂಟ್ರಿ, ನಾಲ್ವರ ವಿರುದ್ಧ ದೂರು ದಾಖಲು
ವರ್ಷಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಚಾಹಿರಾತು ಮತ್ತು ಪ್ರಚಾರಕ್ಕಾಗಿ ಸರ್ಕಾರ ಖರ್ಚು ಮಾಡಿದ ಹಣವೆಷ್ಟು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಸದನದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸರ್ಕಾರವು ಒಟ್ಟು ಖರ್ಚಾಗಿದೆ ಎಂದು ಮಾಹಿತಿ ನೀಡಿದೆ.
ದೇಶ ಮತ್ತು ವಿದೇಶಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನ(Mysore Sandal Soap Advertisement) ಪ್ರಚಾರಕ್ಕಾಗಿ ಸಂಸ್ಥೆಯು ರಾಯಭಾರಿಗಳನ್ನ ನೇಮಿಸಿದೆ ಅದರ ವಿವರ ಇಲ್ಲಿದೆ.
ಯಾರಿಗೆ ಎಷ್ಟು?
ತಮನ್ನಾ ಭಾಟಿಯಾ 2025 ರಿಂದ 27 – ₹6.20 ಕೋಟಿ
ಐಷಾನಿ ಶೆಟ್ಟಿ 2025 ರಿಂದ 27-15 ಲಕ್ಷ
ಇದಲ್ಲದೇ ಕರ್ನಾಟಕ ಮೂಲದ ಸ್ಥಳೀಯ ನಟಿಯರಾದ ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನಿಯಾ ಅಯ್ಯರ್ ಮತ್ತು ಆರಾಧನಾ ಆರ್ ಅವರನ್ನು ಟಿವಿ ಜಾಹಿರಾತುಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಬಳಸಿಕೊಳ್ಳಲಾಗಿದೆ. ಈ ಕೆಲಸಕ್ಕೆ ಒಟ್ಟು ₹62.87 ಲಕ್ಷ ಖರ್ಚಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: Letters to Daughter: ಮಗಳೇ, ಜಗತ್ತಿನ ಬಹುತೇಕ ಸುಂದರ ಸಂಗತಿಗಳು ಅತ್ಯಂತ ಸುಲಭವಾಗಿಯೇ ಕೈಗೆ ಎಟಕುತ್ತವೆ
ಕನ್ನಡ ಪರ ಹೋರಾಟಗಾರರ ಆಕ್ಷೇಪ
ಈ ಹಿಂದೆ ಕನ್ನಡ ಪರ ಸಂಘಟನೆಗಳು ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮೈಸೂರು ಸ್ಯಾಂಡಲ್ ಸೋಪ್(Mysore Sandal Soap) ಕನ್ನಡಿಗರ ಹೆಮ್ಮೆಯ ಉತ್ಪನ್ನವಾಗಿದ್ದು ಅದಕ್ಕೆ ಕನ್ನಡ ಕಲಾವಿದರೆ ರಾಯಭಾರಿಯಾಗಿ ಆಗಬೇಕು ಎಂದು ಅವರು ಅಗ್ರಹಿಸಿದ್ದರು. ಈ ಹಿಂದೆ ಪುನೀತ್ ರಾಜಕುಮಾರ್(Puneeth Rajkumar) ಅವರು ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿದ್ದಾಗ ಯಾವುದೇ ಸಂಭಾವನೆ ಪಡೆಯದೆ ಅದಕ್ಕೆ ಪ್ರಚಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ನೆಲದ ಬ್ರಾಂಡ್ ಗಳಿಗೆ ಕನ್ನಡ ಕಲಾವಿದರನ್ನೆ ಬಳಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದರು.
ಹಿಂದಿನ ರಾಯಭಾರಿಗಳು
ಕನ್ನಡದ ನಟರ ಹೊರತಾಗಿ ಮೈಸೂರು ಸ್ಯಾಂಡಲ್ ಸೋಪ್(Mysore Sandal Soap)ಗೆ ಈ ಹಿಂದೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರನ್ನು 80 ಲಕ್ಷಕ್ಕೆ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಪ್ರಚಾರ ಕಾರ್ಯಗಳಿಗೆ ಸಮಯ ನೀಡಲು ಸಾಧ್ಯವಾಗದ ಕಾರಣ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು ಮತ್ತು ಈ ಸಂಬಂಧ ಕಾನೂನು ಹೋರಾಟಗಳು ನಡೆದಿದ್ದವು.
