ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ(Dharmasthala Case) ಸಂಬಂಧಿಸಿದಂತೆ ಈಗ ಮತ್ತೊಂದು ಹೊಸ ಆಯಾಮ ತೆಗೆದುಕೊಂಡಿದೆ. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ(Snehamaye Krishna) ಅವರು ಧರ್ಮಸ್ಥಳ (Dharmastala) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅವರು ಸುಜಾತ ಭಟ್(Sujata Bhat), ಗಿರೀಶ್ ಮಟ್ಟಣ್ಣನವರ್(Girish Mattanna Naveer), ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi)ಮತ್ತು ಯೂಟ್ಯೂಬರ್ ಎಂ ಡಿ ಸಮೀರ್(MD Sameer) ಮೇಲೆ ದೂರು ದಾಖಲಿಸಿದ್ದಾರೆ.
ದೂರಿನಲ್ಲಿರುವ ಆರೋಪಗಳೇನು?
ಸ್ನೇಹ ಮಯಿ ಕೃಷ್ಣ(Snehamaye Krishna) ಅವರ ದೂರಿನ ಪ್ರಕಾರ ಅನನ್ಯ ಭಟ್ ಎಂಬ ಎಂಬಿಬಿಎಸ್(MBBS) ವಿದ್ಯಾರ್ಥಿನಿಯ ಕೊಲೆ ಧರ್ಮಸ್ಥಳದಲ್ಲಿ(Dharmasthala Case) ನಡೆದಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು. ಸುಜಾತ(Sujatha Bhat) ಅವರಿಗೆ ಅನನ್ಯ ಎಂಬ ಮಗಳೇ ಇಲ್ಲ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಸುಜಾತ ಭಟ್ ಅವರು ತಮ್ಮ ಮಗಳು ಅನನ್ಯ ತನ್ನ ಸ್ನೇಹಿತರ ಜೊತೆ ಧರ್ಮಸ್ಥಳಕ್ಕೆ ಹೋಗಿದ್ದಾಗ ಆಕೆಯನ್ನ ಕೊಲೆ ಮಾಡಲಾಗಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೃಷ್ಣ ಆರೋಪಿಸಿದ್ದಾರೆ.
ಹಳೆಯ ಪ್ರಕರಣಗಳ ಮರುಕಳಿಕೆ
ಈ ನಾಲ್ವರು ವ್ಯಕ್ತಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ(Veerendra Hegde)ಮತ್ತು ಅವರ ಸಹೋದರ ಹರ್ಷೇಂದ್ರ ಹೆಗಡೆ(Harshendra hegde)ಅವರ ಮೇಲೆ ಅನಗತ್ಯವಾಗಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೃಷ್ಣ (Snehamaye Krishna)ತಿಳಿಸಿದ್ದಾರೆ. ಹಿಂದಿನ ಸೌಜನ್ಯ ಮತ್ತು ಸವಿತಾ ಪ್ರಕರಣಗಳನ್ನೇ ಮತ್ತೆ ಪ್ರಸ್ತಾಪಿಸಿ ಅನನ್ಯ ನಾಪತ್ತೆಯಲ್ಲಿ ಹೆಗ್ಗಡೆ ಕುಟುಂಬದ ಪಾತ್ರವಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬುದು ಕೃಷ್ಣ(Snehamaye Krishna) ಅವರ ಮುಖ್ಯ ಆರೋಪ.
ಇದನ್ನೂ ಓದಿ: Pro Kabaddi League: ಕ್ರಿಕೆಟ್ ನಂತರದ ಅತಿದೊಡ್ಡ ಕ್ರೀಡಾ ಕ್ರಾಂತಿ
ಸುಜಾತ ಭಟ್ ಅವರು ಪೊಲೀಸರು ತಮ್ಮ ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದು ಮೂರು ತಿಂಗಳು ಕೋಮದಲ್ಲಿದ್ದೆ ಎಂದು ಗೊಂದಲ ಸೃಷ್ಟಿಸಿದ್ದಾರೆ ಎಂದು ಕೃಷ್ಣ(Snehamaye Krishna) ಹೇಳಿದ್ದಾರೆ. ಈ ರೀತಿ ಸುಳ್ಳುಗಳನ್ನು ಹೇಳುವ ಮೂಲಕ ಜನರ ಮನಸ್ಸಿನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಗೊಂದಲ ಮತ್ತು ಭಯ ಮೂಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾಧ್ಯಮ ವರದಿಗಳು ಏನು ಹೇಳುತ್ತಿವೆ
ಮಾಧ್ಯಮ ವರದಿಗಳ ಪ್ರಕಾರ ಸುಜಾತ ಭಟ್ ಅವರ ಸಹೋದರಿಯ ಪತಿ ಮಹಾಬಲೇಶ್ವರ ರಾವ್ ಅವರು ಸುಜಾತ ಅವಿವಾಹಿತರು ಎಂದು ಹೇಳಿದ್ದಾರೆ. ಕೊಲ್ಕತ್ತಾದಲ್ಲಿ ಸಿಬಿಐ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ ಎಂಬ ಅವರ ಹೇಳಿಕೆಗಳು ಸುಳ್ಳು ಎಂದು ಸಹ ತಿಳಿಸಿದ್ದಾರೆ.
ಈ ಹಿಂದೆ ಸುಜಾತ ಭಟ್ ತಮ್ಮ ವಕೀಲ ಮಂಜುನಾಥ್ ಅವರೊಂದಿಗೆ ವಿಡಿಯೋದಲ್ಲಿ ಅನನ್ಯ ಎಂಬ ಅವರ ಫೋಟೋ ತೋರಿಸಿದರು ಆದರೆ ಖಾಸಗಿ ಕನ್ನಡ ಚಾನೆಲ್ ನ ಒಂದು ವರದಿಯ ಪ್ರಕಾರ ಸುಜಾತ ರಂಗಪ್ರಸಾದ್ ಎಂಬುವವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಅವರಿಗೆ ಶ್ರೀವತ್ಸ ಎಂಬ ಮಗ ಮತ್ತು ವಸಂತಿ ಎಂಬ ಸೊಸೈ ಇದ್ದರು 2007 ರಲ್ಲಿ ವಾಸಂತಿ ನಿಧನರಾಗಿದ್ದರು, ಕಾಲೇಜು ದಿನಗಳಲ್ಲಿ ತೆಗೆದ ವಾಸಂತಿ (vasanti) ಅವರ ಫೋಟೋವನ್ನು ಸುಜಾತ ಮತ್ತು ಇತರರು ಅನನ್ಯ ಅವರದು ಎಂದು ಹೇಳಿ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೃಷ್ಣ (Snehamaye Krishna)ಆರೋಪಿಸಿದ್ದಾರೆ.
ಎಲ್ಲಾ ಸುಳ್ಳು ಆರೋಪಗಳ ಮೂಲಕ ಧರ್ಮಸ್ಥಳದ ಘನತೆ ಗೆದ್ದಕ್ಕೆ ತರುತ್ತಿರುವ ಈ ನಾಲ್ವರನ್ನು ತಕ್ಷಣ ಬಂಧಿಸಬೇಕು ಎಂದು ಸ್ನೇಹಮಯಿ ಕೃಷ್ಣಾ(Snehamaye Krishna) ತಮ್ಮ ದೂರದಲ್ಲಿದ್ದಾರೆ ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
