Bengaluru Bulls winningPro Kabaddi League 2018–19
Pro Kabaddi League: ಪ್ರೊ ಕಬಡ್ಡಿ ಎಂಬ ದೇಶಿ ಕ್ರೀಡೆ ಭಾರತದಲ್ಲಿ ಕ್ರಿಕೆಟ್ ನಂತರ ಅತಿಹೆಚ್ಚು ಆದಾಯ ತರುವ ಕ್ರೀಡಾ ಲೀಗ್ ಆಗಿದೆ. ಕಬಡ್ಡಿ ಎಂದರೆ ಮೂಗೂ ಮುರಿಯುವ ಕಾಲದಲ್ಲಿ ಭಾರತದ ಉದ್ಯಮ ದೈತ್ಯ ಮಹೀಂದ್ರಾ ಸಮೂಹದ ಆನಂದ್ ಮಹೀಂದ್ರಾ ಮತ್ತು ಕ್ರೀಡಾ ವಿಶ್ಲೇಷಕ ಚಾರು ಶರ್ಮಾ ಸೇರಿ 2014ರಲ್ಲಿ ಆರಂಭವಾದ ಈ ಕನಸಿನ ಕೂಸು ಮುಂದೆ ಹೆಮ್ಮರವಾಗಿ ಬೆಳೆದು ಅನೇಕ ಪ್ರತಿಭೆಗಳ ಉದಯಕ್ಕೆ ಮತ್ತು ಹಣದ ಹರಿವಿಗೆ ಕಾರಣವಾಯಿತು.
ಇದನ್ನೂ ಓದಿ: GST ದರಗಳಲ್ಲಿ ಭಾರೀ ಕಡಿತ: ಶೇ.12 ಮತ್ತು ಶೇ.28ರ ತೆರಿಗೆ ರದ್ದು
2014ರಲ್ಲಿ ಸ್ಟಾರ್ ಇಂಡಿಯಾ 74% ಪಾಲುದಾರಿಕೆ ಪಡೆದುಕೊಂಡಿತು ಮತ್ತು ಇಂಟರ್ನ್ಯಾಷನಲ್ ಕಬಡ್ಡಿ ಫೆಡರೇಷನ್ (IKF) 10 ವರ್ಷ ಲೀಗ್ (Pro Kabaddi League) ನಡೆಸುವ ಹಕ್ಕು ಪಡೆದುಕೊಂಡಿತು. 2014ರಲ್ಲಿ ಪ್ರಾರಂಭವಾದ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ತಂಡಗಳು ಇಂತಿವೆ.
• ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers)
• ಯೂ ಮುಂಬಾ (U Mumba)
• ಬೆಂಗಳೂರು ಬುಲ್ಸ್ (Bengaluru Bulls)
• ತೇಲುಗು ಟೈಟಾನ್ಸ್ (Telugu Titans)
• ದಬಾಂಗ್ ಡೆಲ್ಲಿ (Dabang Delhi)
• ಪಾಟ್ನಾ ಪೈರೇಟ್ಸ್ (Patna Pirates)
• ಬೆಂಗಾಲ್ ವಾರಿಯರ್ಸ್ (Bengal Warriors)
• ಪುಣೇರಿ ಪಲ್ಟಾನ್ಸ್ (Puneri Paltan)
ಪ್ರೊ ಕಬಡ್ಡಿ ಲೀಗ್ ಪ್ರಮುಖ ಮೈಲಿಗಲ್ಲು
• 2014ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಗೆಲ್ಲುವುದರೊಂದಿಗೆ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ ಪಿಂಕ್ ಪಂಥರ್ಸ್ ಟೂರ್ನಿ(Pro Kabaddi League) ಗೆದ್ದ ಮೊದಲ ತಂಡವೆಂಬ ಕೀರ್ತಿಗೆ ಪಾತ್ರವಾಯಿತು.
• 2016ರಲ್ಲಿ ಮೊದಲ ಬಾರಿಗೆ ಒಂದೇ ವರ್ಷ 2 ಬಾರಿ ಟೂರ್ನಿ ನಡೆಯಿತು ಮತ್ತು 2 ಬಾರಿ ಪಾಟ್ನಾ ಪೈರೇಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು ಮತ್ತು ಟೂರ್ನಿಯಲ್ಲಿ(Pro Kabaddi League) ಮೊದಲ ಬಾರಿಗೆ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
• ಸೀಸನ್ 5ರಲ್ಲಿ ಮತ್ತೆ 12 ತಂಡಗಳನ್ನ ಒಳಗೊಂಡ ಟೂರ್ನಿ(Pro Kabaddi League) 2017ರಲ್ಲಿ ಆರಂಭವಾಯಿತು. ಈ ಬಾರಿ ಮತ್ತೆ ಪಾಟ್ನಾ ಗೆಲ್ಲುವುದರೊಂದಿಗೆ ಹ್ಯಾಟ್ರಿಕ್ ಸಾಧಿಸಿ, ಸತತ ಮೂರು ಬಾರಿ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
• 2018ರ ಟೂರ್ನಿಯಲ್ಲಿ(Pro Kabaddi League) ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡ ಟ್ರೋಫಿ ಗೆದ್ದು ಸೀಸನ್ 6ರ ಚಾಂಪಿಯನ್ ಆಯಿತು ಮತ್ತು ಕನ್ನಡಿಗರ ಕಪ್ ಗೆಲ್ಲುವ ಆಸೆಯನ್ನು ಈಡೇರಿಸಿತು.
• 2023ರಲ್ಲಿ ಲೀಗ್(Pro Kabaddi League) ತನ್ನ 1000ನೇ ಪಂದ್ಯ ನಡೆಯಿತು ಮತ್ತು ಟೂರ್ನಿಯ ಯಶಸ್ಸಿಗೆ ಕಾರಣವಾದ ಅನೇಕ ಆಟಗಾರರನ್ನು ಕಾಣಿಕೆಗಳನ್ನು ನೀಡುವ ಮೂಲಕ ಗೌರವಿಸಿತು.
• ಇಲ್ಲಿಯವರೆಗೆ ನಡೆದ ಟೂರ್ನಿಯ ಯಶಸ್ವಿ ರೈಡರ್ ಪ್ರದೀಪ್ ನರ್ವಾಲ್ ಒಟ್ಟು 1500ಕ್ಕೂ ಹೆಚ್ಚು ಪಾಯಿಂಟ್ಸ್ ಪಡೆದಿದ್ದಾರೆ.
ಪ್ರದೀಪ್ ನರ್ವಾಲ್ ಸಾಧನೆ
ಟೂರ್ನಿಯಲ್ಲಿ 1500 ಅಂಕಗಳಿಸಿದ ಮೊದಲ ಆಟಗಾರ ಮತ್ತು ಒಂದೇ ರೈಡ್ ನಲ್ಲಿ ಒಟ್ಟು 8 ಅಂಕ (ಹರ್ಯಾಣ ಸ್ಟಿಲರ್ಸ್ ವಿರುದ್ಧ) ಗಳಿಸುವ ಮೂಲಕ ಒಂದೇ ರೈಡ್ನಲ್ಲಿ ಇಡೀ ತಂಡವನ್ನೇ (7 ಆಟಗಾರರು ಮತ್ತು 1 ಬೋನಸ್) ಅಲೌಟ್ ಮಾಡಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪ್ರದೀಪ್ ನರ್ವಾಲ್ ಪಾತ್ರರಾಗಿದ್ದಾರೆ.
• ಟೂರ್ನಿಯ ಯಶಸ್ವಿ ಡಿಪೆಂಡರ್ ಫಜಲ್ ಅಟ್ರಾಚಲಿ 400+ ಅಂಕ ಪಡೆದ ಮೊದಲ ಡಿಪೆಂಡರ್ ಇವರು.
• ಟೂರ್ನಿಯ ಇಬ್ಬರು ಯಶಸ್ವಿ ಆಲ್ರೌಂಡರ್ ಗಳು ಮತ್ತು ಇಬ್ಬರು ಭಾರತೀಯರೇ ಮೊದಲು ಬೆಂಗಳೂರು ಬುಲ್ಸ್ ಮಾಜಿ ನಾಯಕ ಮಂಜಿತ್ ಚಿಲ್ಲರ್ ಮತ್ತೊಬ್ಬರು ಯೂ ಮುಂಬಾ ಮಾಜಿ ಆಲ್ರೌಂಡರ್ ಸಂದೀಪ್ ನರ್ವಾಲ್ ಇವರಿಬ್ಬರು ಟೂರ್ನಿಯ ಇತಿಹಾಸದ ಯಶಸ್ವಿ ಆಲ್ರೌಂಡರ್ಗಳು .
ಟೂರ್ನಿಯ 12ನೇ ಆವೃತ್ತಿ 2025ರ ಆಗಸ್ಟ್ 29ರಿಂದ ಶುರುವಾಗುತ್ತಿದ್ದು. ಕನ್ನಡಿಗರ ನೆಚ್ಚಿನ ತಂಡ ಬೆಂಗಳೂರು ಬುಲ್ಸ್ ತಂಡ ಹೊಸ ಕೋಚ್ ಹೊಸ ಆಟಗಾರರು ಮತ್ತು ಹೊಸ ಹುರೂಪಿನೊಂದಿಗೆ ಕಣಕ್ಕಿಳಿಯುತ್ತಿದೆ. ಆಲ್ ದಿ ಬೆಸ್ಟ್ ಬೆಂಗಳೂರು ಬುಲ್ಸ್ ಮತ್ತು ಆಲ್ ದಿ ಬೆಸ್ಟ್ ಪ್ರೊ ಕಬಡ್ಡಿ ಲೀಗ್ ಸೀಸನ್ 12.
