
ನವದೆಹಲಿ: ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ದೇಶದಲ್ಲಿ ಜಿಎಸ್ಸಿ( GST) ಸರಕು ಮತ್ತು ಸೇವಾ ತೆರಿಗೆ ದರಗಳಲ್ಲಿ ಮಹತ್ವದ ಬದಲಾವಣೆ ತರಲು GST ಕೌನ್ಸಿಲ್ ಸಭೆ GOM ಶಿಫಾರಸು ಮಾಡಿದೆ (GST 2.0 reform). ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಹಲವು ಅಗತ್ಯ ವಸ್ತುಗಳು ಇನ್ನಷ್ಟು ಅಗವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ಬೊಮ್ಮಾಯಿ
ಜಿ ಎಸ್ ಟಿ ದರಗಳಲ್ಲಿ ಬಾರಿ ಕಡಿತ ಶೇ. 12 ಮತ್ತು ಶೇ. 28ರ ತೆರಿಗೆ ರದ್ದು
ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ಹಂತದ ಜಿಎಸ್ಟಿ(GST) ವ್ಯವಸ್ಥೆಯನ್ನು (ಶೇಕಡ 5.12 18 ಮತ್ತು 28) ಕೇವಲ ಎರಡು ಹಂತಗಳಿಗೆ ಇಳಿಸಲು ಸಚಿವರ ಸಮಿತಿ ಅನುಮೋದನೆ ನೀಡಿದೆ. ಈ ಹೊಸ ವ್ಯವಸ್ಥೆಯನ್ನು “GST 2.0” ಎಂದು ಕರೆಯಲಾಗುತ್ತಿದ್ದು ಇದು ಜಾರಿಯಾದ ನಂತರ ಶೇ.12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್ಗಳು ಸಂಪೂರ್ಣವಾಗಿ ರದ್ದಾಗಲಿವೆ. ಇದರಿಂದಾಗಿ ಸರಕು ಮತ್ತು ಸೇವೆಗಳಿಗೆ ಇನ್ನು ಮುಂದೆ ಶೇ.5 ಅಥವಾ ಶೇ.18ರಷ್ಟು ಮಾತ್ರ ತೆರಿಗೆ ಅನ್ವಯವಾಗುತ್ತದೆ.
ಈ ಬದಲಾವಣೆಯಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ. ಯಾಕೆಂದರೆ ಹಿಂದೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ. 99% ರಷ್ಟು ವಸ್ತುಗಳ ಮೇಲೆ ಈಗ ಶೇ.5ರಷ್ಟು ಮಾತ್ರ ತೆರಿಗೆ ಇರುತ್ತದೆ ಹಾಗೆಯೇ ಶೇ. 28ರ ತೆರಿಗೆ ವ್ಯಾಪ್ತಿಯಲ್ಲಿದ್ದ ಶೇ. 90ರಷ್ಟು ವಸ್ತುಗಳು ಇನ್ನು ಮುಂದೆ ಶೇ. 18ರ ತೆರಿಗೆ ಸ್ಲ್ಯಾಬ್ಗೆ ಬರಲಿವೆ.
ಇದನ್ನೂ ಓದಿ: ವರ್ಷಿತಾ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ತೀವ್ರ ಆಗ್ರಹ
ಯಾವ ವಸ್ತುಗಳ ಮೇಲೆ ಪರಿಣಾಮ
ಹಲವು ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳು, ಗೃಹ ಉಪಯೋಗಿ ವಸ್ತುಗಳು ಮತ್ತು ಇತರ ಉಪಕರಣಗಳ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಆದರೆ ತಂಬಾಕು ಮತ್ತು ಕೆಲವು ಐಷಾರಾಮಿ ಕಾರುಗಳಂತಹ ವಸ್ತುಗಳ ಮೇಲೆ ಶೇ. 40ರಷ್ಟು ತೆರಿಗೆ ಮುಂದುವರೆಯಲಿದೆ ಇದು ದುಬಾರಿ ವಸ್ತುಗಳ ಮೇಲಿನ ತೆರಿಗೆಯನ್ನು ನಿಯಂತ್ರಿಸಲು ಸರ್ಕಾರದ ಪ್ರಯತ್ನವಾಗಿದೆ.
ಇದಲ್ಲದೆ ಸಭೆಯಲ್ಲಿ ಆರೋಗ್ಯ ಮತ್ತು ಜೀವ ವಿಮೆಗಳಿಗೆ ಜಿಎಸ್ಟಿ(GST) ವಿನಾಯಕ ನೀಡುವ ಕುರಿತು ಚರ್ಚೆ ನಡೆದಿದ್ದು, ಇದಕ್ಕೆ ಅನುಮೋದನೆ ದೊರೆತರೆ ವಿಮಾ ಪಾಲಿಸಿದಾರರು ಇನ್ನು ಮುಂದೆ ತಮ್ಮ ಪ್ರೀಮಿಯಂ ಗಳ ಮೇಲೆ ಜಿಎಸ್ಟಿ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: “ನಾವೆಲ್ಲರೂ ದ್ವಿಲಿಂಗಿಗಳು”: ಸ್ವರಾ ಭಾಸ್ಕರ್ ಹೇಳಿಕೆಯಿಂದ ಹೊಸ ವಿವಾದ
ಕರ್ನಾಟಕದ ಪಾತ್ರ
ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌದರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ, ಕರ್ನಾಟಕದ ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ವಿವಿಧ ರಾಜ್ಯಗಳ ಹಣಕಾಸು ಸಚಿವರು ಭಾಗವಹಿಸಿದ್ದರು. ಈ ನಿರ್ಧಾರಕ್ಕೆ ಕೇಂದ್ರಾ ಹಣಕಾಸು ಸಚಿವಾಲಯದ ವಿವರವಾದ ಪ್ರಸ್ತಾವನೆಗಳು ಕಾರಣವಾಗಿವೆ. ಈ ನಿರ್ಧಾರ ಅಂತಿಮವಾಗಿ ಜಿಎಸ್ಟಿ(GST) ಕೌನ್ಸಿಲ್ನಿಂದ ಅನುಮೋದನೆ ಪಡೆದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ
