Bike Price Reduction After GST: ತಂತ್ರಜ್ಞಾನದ ಹೊಸ ಹೊಸ ಅಪ್ಡೇಟ್ಗಳನ್ನು ನೋಡಿದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಅದರಲ್ಲೂ ಆ್ಯಪಲ್ ಐಫೋನ್ ಹೊಸ ಸೀರಿಸ್ ಮಾರುಕಟ್ಟೆಗೆ ಬಂತೆಂದರೆ ಸಾಕು, ನಮ್ಮ ಯುವ ಮನಸ್ಸು ಒಂದು ಕ್ಷಣ ಅಲ್ಲಿಯೇ ನಿಂತುಬಿಡುತ್ತದೆ. ‘ಈ ಸೀರೀಸ್ನ ಹೊಸ ಫೋನ್ ಹೇಗಾದರೂ ಮಾಡಿ ನನ್ನದಾಗಿಸಿಕೊಳ್ಳಬೇಕು’ ಎಂಬ ಹಠ ನಮ್ಮಲ್ಲಿ ಹಲವರಿಗಿರುತ್ತದೆ. (iPhone 17 Pro Max Price in India)
ಆದರೆ, ಒಂದು ಸತ್ಯ ಹೇಳಲಾ? ಈ iphone ಫೋನ್ ಟಾಪ್ ಎಂಡ್ ಮಾದರಿ (2TB ಸ್ಟೋರೇಜ್) ಬೆಲೆ ಎಷ್ಟಿದ ಗೊತ್ತಾ? ಬರೋಬ್ಬರಿ ₹ 2,29,900! ಹೌದು, ಸುಮಾರು ₹ 2.30 ಲಕ್ಷ! ಒಂದು ಮೊಬೈಲ್ಗಾಗಿ ಇಷ್ಟೊಂದು ಹಣವನ್ನು ಖರ್ಚು ಮಾಡುವ ಮೊದಲು, ಈ ಹಣದಿಂದ ನೀವು ನಿಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸುಗಮಗೊಳಿಸುವ ಮತ್ತು ನಿಮಗೆ ಹೆಚ್ಚು ಸ್ವಾತಂತ್ರ ನೀಡುವಂತಹ ಐಷಾರಾಮಿ ಬೈಕ್ಗಳನ್ನು ಖರೀದಿಸಬಹುದು ಎಂಬ ಸತ್ಯವನ್ನು ಒಮ್ಮೆ ಯೋಚಿಸಿ ನೋಡಿ.
ಜಿಎಸ್ಟಿ ಕಡಿತ, ಬಂಪರ್ ಕೊಡುಗೆ!
ಈಗ ಮೋಟಾರು ಮಾರುಕಟ್ಟೆಯಲ್ಲಿ ಅದ್ಭುತ ಪರಿಸ್ಥಿತಿ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಜಿಎಸ್ಟಿ ದರಗಳನ್ನು ಕಡಿತಗೊಳಿಸಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, 350cc ಗಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳ ಮೇಲಿನ ತೆರಿಗೆ ದರವು ಶೇ. 28 ರಿಂದ ಶೇ. 18ಕ್ಕೆ ಇಳಿದಿದೆ! ಇದರ ಪರಿಣಾಮವಾಗಿ ನೀವು ಕನಸು ಕಂಡಿದ್ದ ಪವರ್ಫುಲ್ ಬೈಕ್ಗಳು ಈಗ ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿವೆ.(iPhone 17 Pro Max Price in India)
ಹಾಗಿದ್ದರೆ, ನಿಮ್ಮ ₹ 2.30 ಲಕ್ಷದ ಬಜೆಟ್ನಲ್ಲಿ ಐಫೋನ್ ಬದಲು ನೀವು ಖರೀದಿಸಬಹುದಾದ ಐದು ಅದ್ಭುತ ಬೈಕ್ಗಳ ಪಟ್ಟಿ ಇಲ್ಲಿದೆ.
| 1. ಟಿವಿಎಸ್ ಅಪಾಚೆ ಆರ್ಟಿಆರ್ 310 | ₹ 2.21 ಲಕ್ಷ | ಟ್ರ್ಯಾಕ್-ಟು-ಟೌನ್: ಸ್ಪೋರ್ಟ್ಸ್ ಬೈಕ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಮಾದರಿ, ಉತ್ತಮ ವೇಗ ಮತ್ತು ತಾಂತ್ರಿಕ ಫೀಚರ್ಗಳನ್ನು ಒಳಗೊಂಡಿದೆ. ಜಿಎಸ್ಟಿ ಕಡಿತದಿಂದ ಇದರ ಬೆಲೆ ಸುಮಾರು ₹ 25,000 ವರೆಗೆ ಕಡಿಮೆಯಾಗಿದೆ. |
| 2. ರಾಯಲ್ ಎನ್ಫೀಲ್ಡ್ ಕ್ಲಾಸಿಕ್350 | ₹ 1.81 ಲಕ್ಷದಿಂದ ₹ 2.16 | ಐತಿಹಾಸಿಕ ಅನುಭವ: ಕ್ಲಾಸಿಕ್ ವಿನ್ಯಾಸ ಮತ್ತು ಆ ಡುಗ್-ಡುಗ್ ಶಬ್ದಕ್ಕೆ ಮನಸೋತವರಿಗೆ ಇದು ಅತ್ಯುತ್ತಮ ಆಯ್ಕೆ. ದೀರ್ಘ ಪ್ರಯಾಣಕ್ಕೆ ಮತ್ತು ಗತ್ತು-ಗೈರತ್ತು ಪ್ರದರ್ಶಿಸಲು ಇದು ಸೂಕ್ತ |
| 3. ರಾಯಲ್ ಎನ್ಫೀಲ್ಡ್ ಹಂಟರ್ 350 | ₹ 1.38 ಲಕ್ಷದಿಂದ ₹ 1.67 ಲಕ್ಷ | ನಗರದ ನಾಯಕ: ರಾಯಲ್ ಎನ್ಫೀಲ್ಡ್ ಬ್ರಾಂಡ್ಗೆ ಎಂಟ್ರಿ ಕೊಡಲು ಇದು ಸುಲಭ ಮಾರ್ಗ. ಹಗುರವಾದ ವಿನ್ಯಾಸ, ನಗರದ ಟ್ರಾಫಿಕ್ಗೆ ಹೊಂದಿಕೊಳ್ಳುವ ಚುರುಕುತನ ಮತ್ತು ಆಕರ್ಷಕ ಬೆಲೆಯಲ್ಲಿ ಲಭ್ಯ. |
| 4. ಕೆಟಿಎಂ 250 ಡ್ಯೂಕ್ | ₹ 2.14 ಲಕ್ಷ | ರ್ಫಾರ್ಮೆನ್ಸ್ ಕಿಂಗ್: ಯುವಕರ ನೆಚ್ಚಿನ ಕೆಟಿಎಂ, ತನ್ನ ಸ್ಫೋರ್ಟಿ ಲುಕ್ ಮತ್ತು ಉತ್ತಮ ಪವರ್ನಿಂದ ಹೆಸರುವಾಸಿಯಾಗಿದೆ. ಜಿಎಸ್ಟಿ ಕಡಿತದಿಂದಾಗಿ ಇದರ ಬೆಲೆ ₹ 17,000 ಕ್ಕಿಂತ ಹೆಚ್ಚು ಕಡಿಮೆಯಾಗಿದೆ. |
| 5. ಹೋಂಡಾ NX200 | ₹ 1.70 ಲಕ್ಷ | ವಿಶ್ವಾಸಾರ್ಹ ಮತ್ತು ಸ್ಪೋರ್ಟಿ: ಹೋಂಡಾದ ವಿಶ್ವಾಸಾರ್ಹತೆ ಮತ್ತು ಜಪಾನೀಸ್ ಎಂಜಿನಿಯರಿಂಗ್ಗೆ ಹೆಸರುವಾಸಿಯಾದ ಈ ಬೈಕ್, ಸ್ಪೋರ್ಟಿ ವಿನ್ಯಾಸ ಮತ್ತು ದೈನಂದಿನ ಬಳಕೆಗೆ ಬೇಕಾದ ದಕ್ಷತೆಯನ್ನು ನೀಡುತ್ತದೆ. |
| 6. ರಾಯಲ್ ಎನ್ಫೀಲ್ಡ್ ಕ್ಲಾಸಿಕ್350 | ₹ 1.81 ಲಕ್ಷದಿಂದ ₹ 2.16 | ಐತಿಹಾಸಿಕ ಅನುಭವ: ಕ್ಲಾಸಿಕ್ ವಿನ್ಯಾಸ ಮತ್ತು ಆ ಡುಗ್-ಡುಗ್ ಶಬ್ದಕ್ಕೆ ಮನಸೋತವರಿಗೆ ಇದು ಅತ್ಯುತ್ತಮ ಆಯ್ಕೆ. ದೀರ್ಘ ಪ್ರಯಾಣಕ್ಕೆ ಮತ್ತು ಗತ್ತು-ಗೈರತ್ತು ಪ್ರದರ್ಶಿಸಲು ಇದು ಸೂಕ್ತ |
ಅಂತಿಮ ತೀರ್ಮಾನ ನಿಮ್ಮದೇ!
ಒಂದು ಮೊಬೈಲ್ ನಿಮ್ಮ ಕೈಯಲ್ಲಿ ಇರುತ್ತದೆ, ಅದನ್ನು ವರ್ಷಕ್ಕೊಮ್ಮೆ ಬದಲಾಯಿಸಬೇಕಾಗುತ್ತದೆ. ಅದೇ ಮೊತ್ತಕ್ಕೆ ನೀವು ಖರೀದಿಸುವ ಈ ಐಷಾರಾಮಿ ಬೈಕ್ ನಿಮ್ಮನ್ನು ಪ್ರತಿದಿನ ಸಾವಿರಾರು ಕಿಲೋಮೀಟರ್ಗಳಷ್ಟು ಕರೆದೊಯ್ಯುತ್ತದೆ. ಇದು ಕೇವಲ ವಾಹನವಲ್ಲ, ನಿಮ್ಮ ಸಾಹಸ ಮತ್ತು ಅಗತ್ಯಗಳನ್ನು ಪೂರೈಸುವ ಸಹಯೋಗಿ. ಆದ್ದರಿಂದ, ಮತ್ತೊಮ್ಮೆ ಯೋಚಿಸಿ, ನಿಮಗೆ ಎರಡು ವರ್ಷದಲ್ಲಿ ಹಳತಾಗುವ ಐಫೋನ್ ಬೇಕೇ? ಅಥವಾ ವರ್ಷಗಳವರೆಗೆ ನಿಮ್ಮ ಪಯಣದ ಸಂಗಾತಿಯಾಗುವ ಈ ಅದ್ಭುತ ಬೈಕ್ಗಳು ಬೇಕೆ ಎಂದು.
