suddisampada.com ಗೆ ಸ್ವಾಗತ!
ಮಾಹಿತಿ ಎನ್ನುವುದು ಒಂದು ಮಹಾಸಮುದ್ರ. ಅದರಲ್ಲಿ ನಿಮಗೆ ಬೇಕಾದ ಮೌಲ್ಯಯುತ ಸಂಪತ್ತನ್ನು ಹೊರತೆಗೆದು, ನಿಮಗೆ ತಲುಪಿಸುವುದಕ್ಕಾಗಿಯೇ ನಾವಿದ್ದೇವೆ.
ಉತ್ಸಾಹೀ ಪತ್ರಕರ್ತರ ತಂಡವನ್ನು ಹೊಂದಿರುವ ‘ಸುದ್ದಿ ಸಂಪದ’, ಸಾಂಪ್ರದಾಯಿಕ ನ್ಯೂಸ್ ರೂಂ ಮತ್ತು ಪತ್ರಿಕೋದ್ಯಮದ ಕಟ್ಟುಪಾಡುಗಳನ್ನು ಮುರಿದು ಮುನ್ನಡೆದಿದೆ. ‘ಸುದ್ದಿ ಸಂಪದ’,’ ಮುಂದಿನ ಪೀಳಿಗೆಯ ಓದುಗರಿಗಾಗಿ ನಿರ್ಮಿಸಲಾದ ವೇದಿಕೆಯಾಗಿದೆ
ಇದು ಕೇವಲ ಒಂದು ವೆಬ್‌ಸೈಟ್ ಅಲ್ಲ, ನಿಮ್ಮಲ್ಲಿರುವ ಆಸಕ್ತಿಗೆ, ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಒಬ್ಬ ಸ್ನೇಹಿತ. ಕೇವಲ ಸುದ್ದಿಗಳನ್ನು ಯಥಾವತ್ತಾಗಿ ನೀಡದೆ, ಅವುಗಳನ್ನು ಆಳವಾಗಿ ವಿಶ್ಲೇಷಿಸಿ, ಅದರ ಹಿಂದಿರುವ ಅಸಲಿ ಕಾರಣಗಳನ್ನು, ಮರೆಮಾಚಿದ ಸತ್ಯಗಳನ್ನು ನಿಮ್ಮ ಮುಂದೆ ತರುವುದೇ ನಮ್ಮ ಗುರಿ.
ಒಂದು ಚಿಕ್ಕ ಹಳ್ಳಿಯಲ್ಲಿ ನಡೆದ ಆಸಕ್ತಿದಾಯಕ ಘಟನೆಯಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಒಂದು ವಿನೂತನ ಆವಿಷ್ಕಾರದವರೆಗೆ, ಪ್ರತಿಯೊಂದು ಸುದ್ದಿಯ ಹಿಂದಿರುವ ಆಸಕ್ತಿದಾಯಕ ವಿಚಾರಗಳ ಜೊತೆಗೆ, ಮನಸ್ಸನ್ನು ತಟ್ಟುವ ಕಥೆಗಳನ್ನು ನಾವು ನಿಮಗೆ ನೀಡುತ್ತೇವೆ.
ನಮ್ಮ ತಂಡ ಪ್ರತಿದಿನ ಹೊಸ ವಿಷಯಗಳನ್ನು ತಿಳಿದುಕೊಳ್ಳಲು, ಹೊಸ ಆಲೋಚನೆಗಳನ್ನು ಹೊರತರಲು ಶ್ರಮಿಸುತ್ತದೆ. ಏಕೆಂದರೆ, ಪ್ರತಿಯೊಂದು ಲೇಖನದಲ್ಲೂ ಒಂದು ಹೊಸ ಲೋಕವನ್ನು ನಿಮಗೆ ಪರಿಚಯಿಸಬೇಕೆಂಬುದೇ ನಮ್ಮ ಆಶಯ.
ನೀವು ಓದುವ ಪ್ರತಿಯೊಂದು ಅಕ್ಷರ, ನೋಡುವ ಪ್ರತಿಯೊಂದು ಲೇಖನ ನಿಮ್ಮನ್ನು ಯೋಚನೆಗೆ ಹಚ್ಚಬೇಕು, ಹೊಸ ವಿಷಯಗಳನ್ನು ಕಲಿಯುವಂತೆ ಮಾಡಬೇಕು ಎಂದು ನಾವು ಬಯಸುತ್ತೇವೆ. ನಿಮ್ಮ ಸಲಹೆಗಳು, ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಸುದ್ದಿ ಸಂಪದ ಎಂದರೆ ಕೇವಲ ಮಾಹಿತಿ ಅಲ್ಲ, ಅದು ನಿಮ್ಮೊಂದಿಗಿನ ನಮ್ಮ ಭಾಂದವ್ಯ.
ಧನ್ಯವಾದಗಳು
ವರುಣ್ ಜಿ ಜೆ
ಸಂಸ್ಥಾಪಕರು & ಪ್ರಧಾನ ಸಂಪಾದಕರು
ಸುದ್ದಿ ಸಂಪದ
