GST Reforms 2025: ಮನೆ ಕಟ್ಟುವ ಕನಸು ಕಂಡವರಿಗೆ ಹಬ್ಬದ ಬಂಪರ್ ಆಫರ್! ಕೇಂದ್ರ ಸರ್ಕಾರ(Central Government) ಕೈಗೊಂಡಿರುವ ಮಹತ್ವದ ನಿರ್ಧಾರದಿಂದ ಇನ್ನು ಮುಂದೆ ಮನೆ ನಿರ್ಮಾಣದ ವೆಚ್ಚ ಕಡಿಮೆಯಾಗಲಿದೆ. ಹಾಗಾದರೆ ಯಾವೆಲ್ಲಾ ವಸ್ತುಗಳ ಮೇಲೆ ಜಿಎಸ್ಟಿ ಇಳಿಕೆಯಾಗಿದೆ? ಈ ಹೊಸ ನಿಯಮಗಳು ಗ್ರಾಹಕರ ಜೇಬಿ ಹೇಗೆ ಲಾಭ ತರುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿ: New OTT Movies: OTT ಹೊಸ ಸಿನಿಮಾಗಳ ಸಂಭ್ರಮ, Netflix, Prime, Z5, jio hotstar ನಲ್ಲಿ ಈ ಹೊಸ ಚಿತ್ರಗಳು ಲಭ್ಯ!
ಈ ಬಾರಿಯ ದೀಪಾವಳಿ(Deepavali) ಹಬ್ಬ ಮೊದಲೇ ಬಂದಿದೆ ಎನ್ನಬಹುದು. ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಜಿಎಸ್ಟಿ ಸುಧಾರಣೆಗಳನ್ನು(GST Reforms) ಘೋಷಿಸಿದ್ದು, ಹಲವಾರು ದಿನಬಳಕೆ ವಸ್ತುಗಳ(Daily Using Item) ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಈ ನಿರ್ಧಾರದಿಂದ ಮನೆ ಕಟ್ಟುವ ಅಥವಾ ಹೊಸ ಮನೆ ಖರೀದಿಸುವವರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಅದು ಹೇಗೆ ಎಂದು ನೋಡೋಣ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸಿಮೆಂಟ್ ಮೇಲಿನ ಜಿಎಸ್ಟಿ(GST) ದರವನ್ನು ಶೇ. 28ರಿಂದ ಶೇ. 18ಕ್ಕೆ ಇಳಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ನಿರ್ಧಾರದಿಂದ ಸಿಮೆಂಟ್ ಖರೀದಿ(Cement Purchase) ವೆಚ್ಚ ಕಡಿಮೆಯಾಗಿ, ಒಟ್ಟಾರೆ ಮನೆ ನಿರ್ಮಾಣದ ವೆಚ್ಚವೂ ಇಳಿಯುತ್ತದೆ. ಸಿಮೆಂಟ್ ಜೊತೆಗೆ, ಮಾರ್ಬಲ್ ಮತ್ತು ಗ್ರಾನೈಟ್ನಂತಹ ವಸ್ತುಗಳ ಮೇಲಿನ ಜಿಎಸ್ಟಿ ಕೂಡ ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಸೆಪ್ಟಂಬರ್ 22ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ: ಇದನ್ನೂ ಓದಿ: Gold Rate: ಚಿನ್ನದ ಬೆಲೆ ಇಳಿಕೆಯತ್ತ, ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಓಟಕ್ಕೆ ಬ್ರೇಕ್
ಈ ನಿರ್ಧಾರದಿಂದ ದೇಶದಲ್ಲಿ ನಿರ್ಮಾಣ ವಲಯಕ್ಕೆ ಉತ್ತೇಜನ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮನೆ ಕಟ್ಟುವವರು, ರಿಯಲ್ ಎಸ್ಟೇಟ್ ಕಂಪನಿಗಳು(Real Estate Company) ಮತ್ತು ಮನೆ ಖರೀದಿಸುವವರಿಗೆ ಇದು ಲಾಭ ತರಲಿದೆ. ಸಿಮೆಂಟ್ ಮೇಲೆ ತೆರಿಗೆ ಕಡಿಮೆ ಆಗಿರುವುದರಿಂದ, ದೇಶದ ಮೂಲಸೌಕರ್ಯ ಯೋಜನೆಗಳು ಮತ್ತು ಹೊಸ ವಸತಿ ಯೋಜನೆಗಳು ವೇಗ ಪಡೆಯಬಹುದು. ಇದರಿಂದಾಗಿ ಮನೆಗಳು ಮತ್ತು ಫ್ಲಾಟ್ಗಳ ಬೆಲೆ ಕೂಡ ಇಳಿಕೆಯಾಗುವ ನಿರೀಕ್ಷೆ ಇದೆ.
ಒಟ್ಟು ನಿರ್ಮಾಣ ವೆಚ್ಚದಲ್ಲಿ ಶೇ. 10ರಷ್ಟು ಸಿಮೆಂಟ್ ವೆಚ್ಚವೇ ಇರುತ್ತದೆ. ಹಾಗಾಗಿ ಈ ಬದಲಾವಣೆಯಿಂದ ಒಟ್ಟಾರೆ ನಿರ್ಮಾಣ ವೆಚ್ಚದಲ್ಲಿ ಶೇ. 3ರಿಂದ 5ರಷ್ಟು ಇಳಿಕೆ ಆಗಲಿದೆ ಎಂದು ಅನರಾಕ್ ಗ್ರೂಪ್ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ. ಇದು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ದೇಶದ ಆರ್ಥಿಕ ಪುಗತಿಗೂ ಸಹಾಯ ಮಾಡಲಿದೆ ಎಂದು ಅಡಾನಿ ಸಿಮೆಂಟ್ ಸಂಸ್ಥೆಯು ತಿಳಿಸಿದೆ.
