ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(finance minister Nirmala sitharaman) ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಸಭೆಯಲ್ಲಿ(GST council meeting) ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರದ ಪ್ರಕಾರ ಪ್ರಸ್ತುತ ಇರುವ ನಾಲ್ಕು ತೆರಿಗೆ SLAB ಗಳನ್ನು ರದ್ದುಗೊಳಿಸಿ 5% ಮತ್ತು 18% ಎಂಬ ಎರಡು ಹೊಸ ತೆರಿಗೆ SLAB ಗಳಿಗೆ ಅನುಮೋದನೆ ನೀಡಲಾಗಿದೆ. ಹೊಸ ತೆರಿಗೆ ದರಗಳು(Next Gen GST Reforms) ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.
ಇದನ್ನೂ ಓದಿ: Arecanut: ಅಡಿಕೆ ಬೆಳೆಗಾರರ ತಲೆಬಿಸಿ: ರಾಜ್ಯಾದ್ಯಂತ ಬೆಲೆಗಳಲ್ಲಿ ಭಾರಿ ಅಸ್ಥಿರತೆ
ಐಷಾರಾಮಿ ಮತ್ತು “ಸಿನ್ ಗೂಡ್ಸ್” ಮೇಲೆ ಹೆಚ್ಚಿನ ತೆರಿಗೆ
ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು(GST Rate) 40% ಗೆ ಹೆಚ್ಚಿಸಲಾಗಿದೆ. ಇದರ ಅಡಿಯಲ್ಲಿ ಪಾನ್ ಮಸಾಲಾ, ತಂಬಾಕು ಉತ್ಪನ್ನಗಳು, ಸಿಗರೇಟ್ ಹಾಗೂ 1200 ಸಿಸಿ ಗಿಂತ ಹೆಚ್ಚಿನ ಪೆಟ್ರೋಲ್ ಮತ್ತು 1500 ಸಿಸಿ ಗಿಂತ ಹೆಚ್ಚಿನ ಡೀಸೆಲ್ ಕಾರುಗಳ ಮೇಲೆ 40% ಜಿ ಎಸ್ ಟಿ ಅನ್ವಯವಾಗುತ್ತದೆ.(New GST Rates) ಇದಲ್ಲದೆ 350 ಸಿಸಿ ಗಿಂತ ಹೆಚ್ಚಿನ ಸಾಮರ್ಥ್ಯದ ಮೋಟರ್ ಬೈಕ್ ವೈಯಕ್ತಿಕ ಬಳಕೆಯ ವಿಮಾನಗಳು ಮತ್ತು ರೇಸಿಂಗ್ ಕಾರುಗಳ ಮೇಲು ಇದೇ 40% ತೆರಿಗೆ ವಿಧಿಸಲಾಗುತ್ತದೆ. ಸಕ್ಕರೆ ಮತ್ತು ಕೆಫಿನ್ ಮಿಶ್ರಿತ ಕೂಲ್ ಡ್ರಿಂಕ್ ಗಳ ಮೇಲಿನ ತೆರಿಗೆ ದರವನ್ನು 20% ನಿಂದ 40% ಗೆ ಏರಿಸಲಾಗಿದೆ(Next Gen GST Reforms).
ಸಾಮಾನ್ಯ ಜನರಿಗೆ ಸಿಹಿ ಸುದ್ದಿ
ಈ ಮಹತ್ವದ ನಿರ್ಧಾರವು ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ(GST Reforms 2025). ಸೋಪುಗಳು ಮತ್ತು ಸಣ್ಣ ಕಾರುಗಳಂತಹ ನೂರಾರು ಗ್ರಾಹಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಜೀವ ಬಲಿ
ಈ ಘೋಷಣೆಯನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಜಿ ಎಸ್ ಟಿ(GST) ಸುಧಾರಣೆಗಳು(GST Reforms 2025) ಜನರ ಜೀವನವನ್ನು ಉತ್ತಮಗೊಳಿಸುತ್ತವೆ ಮತ್ತು ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವುದನ್ನು ಸುಲಭಗೊಳಿಸುತ್ತವೆ ಎಂದು ಹೇಳಿದ್ದಾರೆ. ಅಮೆರಿಕಾ ಭಾರತದ ರಸ್ತುಗಳ ಮೇಲೆ 50% ಸುಂಕ ವಿಧಿಸುತ್ತಿರುವ ಈ ಸಂದರ್ಭದಲ್ಲಿ ಈ ತೆರಿಗೆ ಸರಳಿಕರಣ ದೇಶದ ಆರ್ಥಿಕತೆಗೆ ಬಲ ನೀಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
