ಬೆಂಗಳೂರು: ಪಾಪಿ ಗಂಡನ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಹಿಳೆಯೊಬ್ಬರು ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ಚಿನ ವರದಕ್ಷಿಣೆ ತರುವಂತೆ ಪತಿ ನೀಡಿದ ಕಿರುಕುಳ ಮತ್ತು ಆತನ ಅಕ್ರಮ ಸಂಬಂಧದಿಂದ ಮನನೊಂದು 28 ವರ್ಷದ ಪೂಜಾ ಶ್ರೀ ಎಂಬ ಮಹಿಳೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ಏನಿದು ಘಟನೆ?
ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಪೂಜಾ ಶ್ರೀ, ಮೂರು ವರ್ಷಗಳ ಹಿಂದೆ ಸಂದೀಪ್ ಎಂಬಾತ ನೊಂದಿಗೆ ವಿವಾಹವಾಗಿದ್ದರು. ಅವರಿಗೆ ಒಬ್ಬ ಮುದ್ದಾದ ಮಗಳು ಇದ್ದಳು. ಸಂಸಾರ ಆರಂಭದಲ್ಲಿ ಸುಖಮಯವಾಗಿಯೇ ಸಾಗುತ್ತಿತ್ತು, ಆದರೆ ಇದ್ದಕ್ಕಿದ್ದಂತೆ ಸಂದೀಪನಿಗೆ ವರದಕ್ಷಿಣೆಯ ಭೂತ ಮೆತ್ತಿಕೊಂಡಿತ್ತು. ಸಂದೀಪ್ ಪ್ರತಿನಿತ್ಯ ಹೆಚ್ಚಿನ ವರದಕ್ಷಿಣೆ ತರುವಂತೆ ಪೂಜಾ ಶ್ರೀಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಪೂಜಾ ಶ್ರೀ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ!, ಒಂದೇ ಕುಟುಂಬದಲ್ಲಿ ಇಬ್ಬರು ಸಹೋದರರ ಅಂತ್ಯ
ಪೂಜಾಶ್ರೀ ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ ಸಂದೀಪ ನಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಈ ವಿಷಯ ಪೂಜಾರಿ ಗೆ ತಿಳಿದ ನಂತರ ಆತ ಇನ್ನಷ್ಟು ಕಿರುಕುಳ ನೀಡಲು ಆರಂಭಿಸಿದ್ದ. ಈತನ ಚಿತ್ರಹಿಂಸೆ ತಾಳಲಾರದೆ ಪೂಜಾ ಅವರು ತನ್ನ ತವರು ಮನೆಗೆ ಬಂದು ತನ್ನ ಗಂಡ ಮಾಡುತ್ತಿದ್ದ ಕುಕೃತ್ಯವನ್ನು ಬಟಾ ಬಯಲು ಮಾಡಿದ್ದರು. ಆದರೆ ಪೋಷಕರು ಮಗಳಿಗೆ ಸಮಾಧಾನ ಮಾಡಿ, ಪೊಲೀಸರಿಗೆ ದೂರು ನೀಡಿದರು. ಆಗ ಸಂದೀಪ್ ಮುಂದೆ ನಾನು ಈ ರೀತಿ ಯಾವುದೇ ಕಿರಿಕುಳ ನೀಡುವುದಿಲ್ಲ ಎಂದು ಭರವಸೆ ನೀಡಿ ಪೂಜಾ ಶ್ರೀಯನ್ನ ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದ.
ಆದರೆ ಕೆಲವೇ ದಿನಗಳಲ್ಲಿ ಆತನ ವರ್ತನೆ ಮತ್ತೆ ಮೊದಲಿನಂತಾಗಿತ್ತು. ಘಟನೆ ನಡೆಯುವ ಹಿಂದಿನ ದಿನವೂ ಪೂಜಾ ಪತಿಯ ಕಿರುಕುಳದಿಂದ ಬೇಸತ್ತು ತವರು ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 7 ಗಂಟೆಗೆ ಸಂದೀಪ್ ತವರು ಮನೆಗೆ ಹೋಗಿ ಪೂಜಾ ಶ್ರೀ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಬೆಳಗ್ಗೆ 8:00 ಗಂಟೆ ಸಮಯದಲ್ಲಿ ಪೂಜಾಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: GST Council Meeting 2025: ಆಟೋಮೊಬೈಲ್, ವೈಟ್ ಗುಡ್ಸ್ ಬೆಲೆ ಇಳಿಕೆ ಸಾಧ್ಯತೆ
ಪೂಜಶ್ರೀ ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿ ನಮ್ಮ ಮಗಳ ಮದುವೆಗಾಗಿ 30 ಲಕ್ಷ ರೂಪಾಯಿ ಸಾಲ ಮಾಡಿದ್ದೇವೆ. ಮದುವೆಗೆ ಮೊದಲೇ ಆತನಿಗೆ ಬೇರೆ ಮಹಿಳೆಯರೊಂದಿಗೆ ಸಂಬಂಧವಿತ್ತು. ಮದುವೆ ನಂತರ ಮನೆ ಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದ. ಅವನು ನಮ್ಮ ಮಗಳನ್ನು ಕರೆದುಕೊಂಡು ಹೋಗಿ ಒಂದು ಗಂಟೆಯಲ್ಲೇ ಅವಳು ಸತ್ತು ಹೋಗಿದ್ದಾಳೆಂದು ನಮಗೆ ತಿಳಿಸಿದ್ದಾನೆ. ನಮ್ಮ ಮಗಳನ್ನು ಅವನೇ ಕೊಲೆ ಮಾಡಿದ್ದಾನೆ ಎಂದು ಪೂಜಾಶ್ರೀ ಪೋಷಕರು ಕಣ್ಣೀರಿಟ್ಟಿದ್ದಾರೆ.
ಬಗಲಗುಂಟೆ ಪೊಲೀಸರು ಮೃತ ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಗೆ ಆರಂಭಿಸಿದ್ದಾರೆ. ಆಧುನಿಕ ಕಾಲದಲ್ಲೂ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದಂತಹ ಸಾಮಾಜಿಕ ಪಿಡುಗುಗಳು ಹೇಗೆ ನಮ್ಮ ಸಮಾಜವನ್ನು ಕಾಡುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
