ಬೀಜಿಂಗ್: ಚೀನಾ ತನ್ನ ಆಂತರಿಕ ಸಾರ್ವಭೌಮತೆ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಶಾಂಘೈ ಕೋ ಆಪರೇಷನ್ ಸಮ್ಮಿಟ್ ನಂತರ ವಿಜಯ ದಿನದ ಅಂಗವಾಗಿ ನಡೆಸಿದ ಬೃಹತ್ ಸೇನಾ ಪರೇಡ್ನಲ್ಲಿ ತನ್ನ ಅಣುಶಕ್ತಿಯನ್ನು ಪ್ರದರ್ಶಿಸಿದೆ. ಈ ಪೆರೇಡ್ನಲ್ಲಿ, DF-5C ಎಂಬ ಹೊಸ ತಲೆಮಾರಿನ ಅಣು ಕ್ಷಿಪಣಿಯನ್ನು ಜಗತ್ತಿಗೆ ಪರಿಚಯಿಸಿದ್ದು, ಇದು ಜಾಗತಿಕ ರಕ್ಷಣಾ ವಲಯದಲ್ಲಿ ಆಸಕ್ತಿ ಕೆರಳಿಸಿದೆ.
DF-5C ಕ್ಷಿಪಣಿಯ ಸಾಮರ್ಥ್ಯ
ಚೀನಾದ ಅಧಿಕೃತ ಮಾಧ್ಯಮ ವರದಿಗಳ ಪ್ರಕಾರ, DF-5C ಅಣು ಕ್ಷಿಪಣಿಯು ಭೂಮಿಯ ಮೇಲಿನ ಯಾವುರ್ದ ಸ್ಥಳವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಶಬ್ದದ ವೇಗಕ್ಕಿಂತ 10 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಕ್ಷಿಪಣಿಯ(Missiles) ವ್ಯಾಪ್ತಿ 20,000 ಕಿಲೋಮೀಟರ್ಗಳಿಗಿಂತ ಹೆಚ್ಚಿರಬಹುದು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಜೀವ ಬಲಿ
ಈ ಕ್ಷಿಪಣಿಯು ‘ಮಲ್ಟಿಪಲ್ ಇಂಡಿಪೆಂಡಂಟ್ಲಿ ಟಾರ್ಗಟಬಲ್ ರೀ ಎಂಟ್ರಿ ವೆಹಿಕಲ್ಸ್’ (MIRV) ತಂತ್ರಜ್ಞಾನವನ್ನು ಬಳಸುತ್ತದೆ. ಇದರ ಅರ್ಥ ಇದು ಒಂದೇ ಸಮಯದಲ್ಲಿ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ಗೊಂದಲಗೊಳಿಸಲು ನಕಲಿ ಬಾಂಬ್ಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ, ಇದು ಒಂದೇ ಬಾರಿಗೆ 10 ವಾರ್ಹೆಡ್ಗಳನ್ನು ಹೊತ್ತೊಯ್ಯಬಲ್ಲದು ಎಂದು ಹೇಳಲಾಗಿದೆ.
ಇತರೆ ಆಯುಧಗಳ ಪ್ರದರ್ಶನ
DF-5C ಜೊತೆಗೆ, ಚೀನಾ ತನ್ನ ಸೇನಾ ಶಸ್ತ್ರಾಗಾರದಲ್ಲಿನ ಹಲವು ಹೊಸ ತಂತ್ರಜ್ಞಾನಗಳನ್ನು ಅನಾವರಣಗೊಳಿಸಿತು. ಇದರಲ್ಲಿ ಡಾಂಗ್ಫೆಂಗ್-61 ಅಂತರಖಂಡ(Inter Continental Ballistic missile)ಕ್ಷಿಪಣಿ (12,000ಕಿ.ಮೀ ವ್ಯಾಪ್ತಿ), ವಿಮಾನದಿಂದ ಉಡಾಯಿಸಬಹುದಾದ JL-1 ಅಣ್ವಸ್ತ್ರ, ಹಾಗೂ AJX 002 ಸಾಗರ ಡ್ರೋನ್ ಕೂಡ ಸೇರಿವೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಯುದ್ಧ ಡ್ರೋನ್ಗಳು, DF-26D ಬ್ಯಾಲಿಸ್ಟಿಕ್ ಕ್ಷಿಪಣಿ, ಮತ್ತು CJ-1000 ಹೈಪರ್ಸಾನಿಕ್ ಕ್ಷಿಪಣಿಯಂತಹ ಆಯುಧಗಳು ಸಹ ಪರೇಡ್ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು.
ಇದನ್ನೂ ಓದಿ: ಯಾದಗಿರಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ!, ಒಂದೇ ಕುಟುಂಬದಲ್ಲಿ ಇಬ್ಬರು ಸಹೋದರರ ಅಂತ್ಯ
ಈ ಶಕ್ತಿ ಪ್ರದರ್ಶನವು ಚೀನಾದ ಹೆಚ್ಚುತ್ತಿರುವ ಮಿಲಿಟರಿ(China Army) ಶಕ್ತಿ ಮತ್ತು ತಂತ್ರಜ್ಞಾನದ ಪ್ರಗತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇದು ಭಾರತ ಮತ್ತು ಚೀನಾ ವಿರೋಧಿ ದೇಶಗಳಿಗೆ ಚೈನಾದ ಎಚ್ಚರಿಕೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದೆ.
