ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 58ನೇ ಜಿಎಸ್ಟಿ ಕೌನ್ಸಿಲ್ ಸಭೆ(GST Council Meeting 2025) ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ(Prime Minister Narendra Modi) ಜಿಎಸ್ಟಿ ಸುಧಾರಣೆ ಕರೆಯ ಹಿನ್ನೆಲೆಯಲ್ಲಿ ಈ ಸಭೆ ಹಲವು ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಪ್ರಮುಖವಾಗಿ 175ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ದರವನ್ನು ಕಡಿತ ಹಾಗೂ ಪ್ರಸ್ತುತ ಇರುವ ನಾಲ್ಕು ಸ್ಲ್ಯಾಬ್ ಗಳನ್ನು ಎರಡು ಸ್ಲಾಬ್ ಗಳಿಗೆ ಇಳಿಸುವುದು ಈ ಸಭೆಯ ಪ್ರಮುಖ ಅಜೆಂಡ ಆಗಿದೆ.
ಏನೇನು ಬದಲಾಗಬಹುದು?
ಸದ್ಯ ಜಾರಿಯಲ್ಲಿರುವ 5% ,12%, 18% ಮತ್ತು 28% ದರಗಳನ್ನು ಎರಡು ಸ್ಲಾಬ್ ಗಳಿಗೆ ಇಳಿಸುವ ಪ್ರಸ್ತಾಪವಿದೆ. ತಂಬಾಕು ಮತ್ತು 50 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳಂತಹ ಐಷಾರಾಮಿ ವಸ್ತುಗಳ ಮೇಲೆ 40% ಹೆಚ್ಚುವರಿ ತೆರಿಗೆ ವಿಧಿಸುವ ಸಾಧ್ಯತೆಯು ಇದೆ. ಈ ಬದಲಾವಣೆಗೆ ಫಿಟ್ಮೆಂಟ್ ಬ್ಯಾನಲ್ ಈಗಾಗಲೇ ಹಸಿರು ನಿಶಾನೆ ತೋರಿಸಿದೆ.
ಇದನ್ನೂ ಓದಿ: Donald Trump: ಭಾರತ ವಿಧಿಸುವ ತೆರಿಗೆ ವಿಶ್ವದಲ್ಲೇ ಅತ್ಯಧಿಕ: ಟ್ರಂಪ್ ಮತ್ತೊಮ್ಮೆ ಆರೋಪ
ಸಾಮಾನ್ಯ ಜನರಿಗೆ ಸಿಗಲಿದೆಯಾ ನೆಮ್ಮದಿ?
ಸುದ್ದಿ ಮೂಲಗಳ ಪ್ರಕಾರ, ಸುಮಾರು 175 ವಸ್ತುಗಳ ಮೇಲೆ ಜಿಎಸ್ಟಿ ದರ ಕನಿಷ್ಠ 10% ಇಳಿಕೆಯಾಗುವ ಸಾಧ್ಯತೆ ಇದೆ. ಟೂತ್ಪೇಸ್ಟ್ ಶಾಂಪೂ ಸೋಪುಗಳಂತಹ ನಿತ್ಯ ಬಳಕೆ ವಸ್ತುಗಳ ತೆರಿಗೆ 18% ನಿಂದ 5% ಗೆ ಇಳಿಯುವ ನಿರೀಕ್ಷೆ ಇದೆ. ಇದರೊಂದಿಗೆ ಬೆಣ್ಣೆ ಮತ್ತು ರೆಡಿ ಟು ಈಟ್ ಆಹಾರಗಳ ಮೇಲಿನ ತೆರಿಗೆ ದರಗಳು ಕೂಡ 12% ಅಥವಾ 18% ನಿಂದ 5% ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.
ಗೃಹಬಳಕೆ ವಸ್ತುಗಳಾದ ಟಿವಿ, ರೆಫ್ರಿಜಿರೇಟರ್ ಮತ್ತು ವಾಷಿಂಗ್ ಮಷೀನ್ ಗಳಂತಹ ವೈಟ್ ಗೂಡ್ಸ್ ಮೇಲಿನ 28% ನಿಂದ 18% ಗೆ ಕಡಿಮೆಯಾಗುವ ಸಾಧ್ಯತೆ ಇದೆ. ಇದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಮಟ್ಟದ ಹಣ ಉಳಿಸಲು ಸಹಾಯ ಮಾಡುತ್ತದೆ. ಸಿಮೆಂಟ್ ಮೇಲಿನ ಜಿಎಸ್ಟಿ ಕೂಡ 28% ನಿಂದ 18% ಗೆ ಇಳಿಯಲಿದೆ.
ಇದನ್ನೂ ಓದಿ: Sabarimala Case Update: ಶಬರಿಮಲೆಗೆ ಮಹಿಳೆಯರ ಪ್ರವೇಶ, ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಮಹತ್ವದ ಹೇಳಿಕೆ!
ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ!
1200 ಸಿಸಿವರೆಗಿನ ಸಣ್ಣ ಪೆಟ್ರೋಲ್ ಮತ್ತು ಹೈಬ್ರಿಡ್ ಕಾರ್ ಗಳ ಮೇಲಿನ ತೆರಿಗೆ 28% ಇಂದ 18 ಪರ್ಸೆಂಟ್ ಗೆ ಹಿಡಿಯಬಹುದು ಇದು ಮಾರುತಿ ಸುಜುಕಿ ಮತ್ತು ಟೊಯೋಟಾ ದಂತಹ ಕಂಪನಿಗಳಿಗೆ ಲಾಭ ತರಲಿದೆ. ಆದರೆ ₹20-40 ಲಕ್ಷ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮೇಲಿನ ತೆರಿಗೆ 5% ನಿಂದ 18% ಗೆ ಹೆಚ್ಚಿಸುವ ಪ್ರಸ್ತಾಪ ಇರುವುದು ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾದಂತಹ ಕಂಪನಿಗಳಿಗೆ ಸ್ವಲ್ಪ ಹಿನ್ನಡೆಯಾಗಬಹುದು.
ಇದಲ್ಲದೆ ದ್ವಿಚಕ್ರ ವಾಹನಗಳ ಮೇಲೆ ನಾನು ಜಿ ಎಸ್ ಟಿ ದರವನ್ನು 28% ಇಂದ 18 ಪರ್ಸೆಂಟ್ ಗೆ ಇಳಿಸುವ ಬೇಡಿಕೆಯನ್ನು ಪರಿಗಣಿಸಲಾಗುತ್ತಿದೆ ಆದರೆ 350 ಸಿ ಸಿ ಗಿಂತ ಹೆಚ್ಚಿನ ಇಂಜಿನ್ ಸಾಮರ್ಥ್ಯದ ಬೈಕ್ ಗಳ ಮೇಲೆ 40 ಪರ್ಸೆಂಟ್ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಬಜಾಜ್ ಆಟೋ ಮತ್ತು ರಾಯಲ್ ಎನ್ಫೀಲ್ಡ್ ಬೈಕ್ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.
ಒಟ್ಟಿನಲ್ಲಿ ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆಯಲ್ಲಿ ಹೊಸ ದಾರಿ ತೆರೆಯುವ ಸಾಧ್ಯತೆ ಇದೆ. ಈ ಬದಲಾವಣೆಗಳು ನಿಜಕ್ಕೂ ಜಾರಿಯಾದರೆ ಅದು ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.
