ವಾಷಿಂಗ್ಟನ್: ಭಾರತವು ಅಮೆರಿಕದ ಮೇಲೆ “ನಂಬಲಸಾಧ್ಯ” ತೆರಿಗೆಗಳನ್ನು ವಿಧಿಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆರೋಪಿಸಿದ್ದಾರೆ. ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದೊಂದಿಗಿನ ಸುಂಕದ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಮೇಲೆ ವಿಧಿಸಿದ ಹೆಚ್ಚಿನ ತೆರಿಗೆಗಳನ್ನು ತೆಗೆದುಹಾಕುವ ಬಗ್ಗೆ ಯೋಚಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನಾನು ಅಧಿಕಾರಕ್ಕೆ ಬಂದ ನಂತರ ಭಾರತದೊಂದಿಗಿನ ಏಕಪಕ್ಷೀಯ ವ್ಯಾಪಾರ ನೀತಿ ಬದಲಾಗಿದೆ. ಕಳೆದ ಹಲವು ದಶಕಗಳಿಂದ ಭಾರತ ನಮ್ಮ ಮೇಲೆ ಭಾರೀ ಸುಂಕಗಳನ್ನು ವಿಧಿಸುತ್ತಿತ್ತು, ಆದರೆ ನಮ್ಮಿಂದ ಯಾವುದೇ ತೆರಿಗೆ ಇರಲಿಲ್ಲ. ಇದು ನ್ಯಾಯಯುತವಲ್ಲ” ಎಂದು ಹೇಳಿದರು.
ಇದನ್ನೂ ಓದಿ: Sabarimala Case Update: ಶಬರಿಮಲೆಗೆ ಮಹಿಳೆಯರ ಪ್ರವೇಶ, ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಮಹತ್ವದ ಹೇಳಿಕೆ!
ಭಾರತದ ಸುಂಕ ಹೆಚ್ಚು, ನಮ್ಮ ಪಾಲು ಕಡಿಮೆ
ಟ್ರಂಪ್ ಅವರ ಪ್ರಕಾರ, ಭಾರತ ಅಮೆರಿಕಕ್ಕೆ ಭಾರಿ ಪ್ರಮಾಣದಲ್ಲಿ ಸರಕುಗಳನ್ನು ರವು, ಮಾಡುತ್ತಿದೆ, ಆದರೆ ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಪ್ರಮಾಣ ತೀರಾ ಕಡಿಮೆ ಇದೆ. ಜೊತೆಗೆ, ಭಾರತವು ನಮ್ಮ ವಸ್ತುಗಳ ಮೇಲೆ ಅತಿಯಾದ ಸುಂಕಗಳನ್ನು ವಿಧಿಸುತ್ತಿದೆ. ಈ ಅಸಮತೋಲನವನ್ನು ಸರಿಪಡಿಸಲು ಹೆಚ್ಚುವರಿ ಸುಂಕ ವಿಧಿಸಲಾಗಿದೆ. “ನಾವು ಮೂರ್ಖರಲ್ಲ, ಅವರಿಗೆ ಹೆಚ್ಚಿನ ತೆರಿಗೆ ವಿಧಿಸುವುದು ನ್ಯಾಯ” ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪ್ರಾಚೀನ ಭಾರತದ ಎಂಜಿನಿಯರಿಂಗ್ ವೈಭವ: ಆಧುನಿಕ ವಿಜ್ಞಾನಕ್ಕೂ ಸವಾಲೆಸೆಯುವ ದೇವಾಲಯಗಳು
ಹಾರ್ಲೆ ಡೇವಿಡ್ನನ್ ಮೋಟಾರ್ಸೈಕಲ್ಗಳ ಉದಾಹರಣೆ ನೀಡಿದ ಟ್ರಂಪ್, ಭಾರತದಲ್ಲಿ ಮೋಟಾರ್ಸೈಕಲ್ಗಳ ಮೇಲೆ ಶೇ. 200ರಷ್ಟು ಸುಂಕವಿತ್ತು. ಇದರಿಂದಾಗಿ ಹಾರ್ಲೆ ಡೇವಿಡ್ನನ್ ಕಂಪನಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿತು. ಈಗ ಅವರಿಗೆ ನಮ್ಮಂತೆ ಹೆಚ್ಚಿನ ಸುಂಕ ಪಾವತಿಸಬೇಕಾಗಿಲ್ಲ ಎಂದು ಟ್ರಂಪ್ ಹೇಳಿದರು.
ಟ್ರಂಪ್ ಸುಂಕ ನೀತಿ ಟೀಕೆಗೆ ಗುರಿ
ಈ ನಡುವೆ, ಭಾರತದ ಮೇಲೆ ಶೇ. 50ರಷ್ಟು ಸುಂಕ ಹೇರಿದ ಟ್ರಂಪ್ ಆಡಳಿತವು ಸ್ವದೇಶದಲ್ಲೇ ಟೀಕೆಗೆ ಗುರಿಯಾಗಿದೆ. ರಷ್ಯಾದಿಂದ ತೈಲ ಖರೀದಿಸಿದಕ್ಕಾಗಿ ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದ್ದಲ್ಲದೆ, ಸಾಮಾನ್ಯ ಸುಂಕ ಶೇ. 25ರಷ್ಟು ಹೇರಿದ್ದರಿಂದ ಒಟ್ಟು ಸುಂಕದ ಪ್ರಮಾಣ ಶೇ. 50ಕ್ಕೆ ತಲುಪಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನ ಸುಂಕಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.
ಇದೇ ಸಮಯದಲ್ಲಿ ಚೀನಾದ ಟಿಯಾಂಜಿನ್ಲ್ಲಿ ಪ್ರಧಾನಿ ನರೇಂದ್ರ ಮೋದಿ, ವ್ಯಾಡಿಮಿರ್ ಪುಟಿನ್ ಮತ್ತು ಕೈ ಜಿನ್ಪಿಂಗ್ ನಡುವೆ ನಡೆದ ಮಾತುಕತೆ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಟ್ರಂಪ್ ಅವರ ಈ ಸುಂಕಾಸ್ತ್ರ ಕ್ರಮಗಳು ಹಾಗೂ ಭಾರತದೊಂದಿಗಿನ ಸಂಬಂಧದ ಕುರಿತು ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.
