ಭೋಪಾಲ್: “ಸತ್ತ ಮೇಲೆ ಮನುಷ್ಯನಿಗೇನು ಉಳಿಯುತ್ತದೆ? ಕೇವಲ ನೆನಪುಗಳು ಮಾತ್ರ. ಆದರೆ ಗ್ವಾಲಿಯರ್ನ ಆ ನಿರ್ಜನ ಪೊದೆಗಳಲ್ಲಿ ಶವವಾಗಿ ಪತ್ತೆಯಾದ ಆ ಮಹಿಳೆಗೆ ತನ್ನ ಹೆಸರು ಹೇಳಿಕೊಳ್ಳುವ ಹಕ್ಕನ್ನೂ ಆ ಹಂತಕ ಕಿತ್ತುಕೊಂಡಿದ್ದ.(Gwalior rape and murder case) ಗುರುತೇ ಸಿಗದಂತೆ ಅನಾಥವಾಗಿ ಮಣ್ಣಾಗಬೇಕಿದ್ದ ಆ ಅನಾಮಧೇಯ ಜೀವಕ್ಕೆ ನ್ಯಾಯ ಸಿಕ್ಕಿದ್ದು ಮಾತ್ರ ಒಂದು ಪವಾಡ. Gwalior rape and murder case
ಒಂದೆಡೆ ಆಧುನಿಕ ವಿಜ್ಞಾನದ ‘ಕೃತಕ ಬುದ್ಧಿಮತ್ತೆ’ (AI) ಆಕೆಗೆ ಮುಖ ಮತ್ತು ಹೆಸರನ್ನು ಮರಳಿಸಿದರೆ, ಮತ್ತೊಂದೆಡೆ ಆಕೆ ಸಾಯುವ ಮುನ್ನ ಹಸಿದ ಹೊಟ್ಟೆಗೆ ಇಳಿಸಿಕೊಂಡಿದ್ದ ಆ ಕೊನೆಯ ಆಮ್ಲೆಟ್ ತುಂಡು-ಹಂತಕನ ಪಾಲಿನ ಸಾವಿನ ದೂತನಾಗಿ ಬಂದಿತ್ತು. ಒಬ್ಬ ಚಾಣಾಕ್ಷ ಪೊಲೀಸ್ ಅಧಿಕಾರಿಯ ಸೂಕ್ಷ್ಮ ದೃಷ್ಟಿ ಮತ್ತು ತಂತ್ರಜ್ಞಾನದ ಮಿಲನದಿಂದಾಗಿ, ಅಂಧಕಾರದಲ್ಲಿದ್ದ ಈ ಕೊಲೆ ರಹಸ್ಯ ಬಯಲಾದ ರೋಚಕ ಕಥೆ ಇಲ್ಲಿದೆ.
ಗ್ವಾಲಿಯರ್ ಪೊಲೀಸರು ಅತ್ಯಂತ ಸಂಕೀರ್ಣವಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದನ್ನು ಒಂದು ತುಂಡು ಆಮ್ಲೆಟ್ ಹಾಗೆಯೇ AI ಸಹಾಯದಿಂದ ಭೇದಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.(Gwalior rape and murder case) ಕೇವಲ ಒಂದು ವಾರದ ಅವಧಿಯಲ್ಲಿ, ಹೆಸರೇ ಇಲ್ಲದಿದ್ದ ಮಹಿಳೆಯ ಶವಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರು 26 ವರ್ಷದ ಆರೋಪಿಯನ್ನು ಕಂಬಿಯಹಿಂದೆ ತಳ್ಳಿದ್ದಾರೆ.
ಇದನ್ನೂ ಓದಿ: Kannada Actress Suicid: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಬಯಲಾಯಿತು ಸಾವಿನ ಅಸಲಿ ಸತ್ಯ
ಕಗ್ಗಂಟಾಗಿದ್ದ ಕೊಲೆ ಕೇಸ್
ಈ ಕಥೆ ಆರಂಭವಾಗುವುದು ಡಿಸೆಂಬರ್ 29, 2025 ರಂದು, ಗ್ಯಾಲಿಯರ್ನ(Gwalior rape and murder case) ಕಟಾರ ಫಾರ್ಮ್ ಬಳಿಯ ಪೊದೆಗಳಲ್ಲಿ ಅರ್ಧನಗ್ನ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು, ಅವಳ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ ಸಾಕ್ಷಿಗಳಿರಲಿಲ್ಲ. ಆರೋಪಿಗಳು ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಗುರುತು ಸಿಗದಂತೆ ಮಾಡಿದ್ದರು. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಅವಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಳೆ ಎಂಬುದು ಸಾಬೀತಾಯಿತು. ಆದರೆ, ಆಕೆ ಯಾರು? ಎಲ್ಲಿಂದ ಬಂದವಳು? ಎಂಬ ಪ್ರಶ್ನೆಗಳಿಗೆ ಪೊಲೀಸರ ಬಳಿ ಉತ್ತರವಿರಲಿಲ್ಲ ಇದರಿಂದಾಗಿ ತನಿಖೆ ಆರಂಭದಲ್ಲೇ ಸ್ಥಗಿತಗೊಂಡಂತೆ ಭಾಸವಾಗಿತ್ತು.
ಪೊಲೀಸರು ಈ ಹಂತದಲ್ಲಿ ಆಧುನಿಕ ತಂತ್ರಜ್ಞಾನದ ಮೊರೆ ಹೋದರು. ಜಜ್ಜಿ ಹೋಗಿದ್ದ ಮಹಿಳೆಯ ಮುಖದ ಲಕ್ಷಣಗಳನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಡಿಜಿಟಲ್ ರೂಪದಲ್ಲಿ ಪುನರ್ ನಿರ್ಮಿಸಲಾಯಿತು. ಈ AI ನಿರ್ಮಿಸಿದ ಭಾವಚಿತ್ರವನ್ನು ನಗರದಾದ್ಯಂತ ಮತ್ತು ಅಪರಾಧ ಕಾಲಗಳಲ್ಲಿ ಹಂಚಲಾಯಿತು. ಈ ತಂತ್ರಜ್ಞಾನದ ಫಲವಾಗಿ ಆ ಅನಾಮಧೇಯ ಮಹಿಳೆ ಟಿಕಮ್ ಗಢ ಜಿಲ್ಲೆಯ ಸಂಗೀತಾ ಪಾಲ್ ಎಂದು ಗುರುತಿಸಲಾಯಿತು.
ಇದನ್ನೂ ಓದಿ: The Kerala Story 2: ಸದ್ದು ಮಾಡುತ್ತಿದೆ ‘ದಿ ಕೇರಳ ಸ್ಟೋರಿ 2’: ಚಿತ್ರೀಕರಣದ ಕರಾಳ ಕಥೆಗಳು!
ಕಿಸೆಯಲ್ಲಿದ್ದ ‘ಆಮ್ಲೆಟ್’ ನಿಂದ ಮಹತ್ವದ ಸುಳಿವು!
ತನಿಖೆಯ ವೇಳೆ ಸಂಗೀತಾ ಧರಿಸಿದ್ದ ಸ್ಪೆಟರ್ನ ಕಿಸೆಯಲ್ಲಿ ಒಂದು ಸಣ್ಣ ಆಮ್ಲೆಟ್ನ ತುಂಡು ಪತ್ತೆಯಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಬ್ ಇನ್ಸೆಕ್ಟರ್ ಸೋನಂ ರಘುವಂತೆ, ಕೊಲೆ ನಡೆಯುವ ಮುನ್ನ ಸಂಗೀತಾ ಎಲ್ಲಿ ಆಹಾರ ಸೇವಿಸಿರಬಹುದು ಎಂದು ಹುಡುಕತೊಡಗಿದರು. ಘಟನಾ ಸ್ಥಳದ ಸುತ್ತಮುತ್ತಲಿದ್ದ ಎಲ್ಲಾ ಮೊಟ್ಟೆ ಅಂಗಡಿಗಳ (Egg Stalls) ವಿಚಾರಣೆ ನಡೆಸಲಾಯಿತು. ಕೊನೆಗೂ ಒಬ್ಬ ವ್ಯಾಪಾರಿ ಆಕೆಯನ್ನು ಗುರುತಿಸಿದ! ಆಕೆ ತನ್ನ ಬಳಿ ಆಮ್ಲೆಟ್ ತೆಗೆದುಕೊಂಡಿದ್ದಳು ಮತ್ತು ಆಕೆಯ ಜೊತೆ ಒಬ್ಬ ವ್ಯಕ್ತಿ ಇದ್ದ ಎಂದು ಆತ ನೆನಪಿಸಿಕೊಂಡ. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, ಹಜಿರಾ ಎಂಬ ಪ್ರದೇಶದ ಸಚಿನ್ ಸೇನ್ ಎಂಬ ಆರೋಪಿಯ ಚಿತ್ರಣ ಲಭ್ಯವಾಯಿತು.
ಕೊನೆಗೂ ಸಿಕ್ಕಿಬಿದ್ದ ಆರೋಪಿ
ಜನವರಿ 5, 2026 ರಂದು, ಗ್ಯಾಲಿಯರ್ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 4 ರ ಬಳಿ ಹೊಂಚು ಹಾಕಿದ್ದ ಪೊಲೀಸರು, 26 ವರ್ಷದ ಸಚಿನ್ ಸೇನ್ ಎಂಬಾತನನ್ನು ಬಂಧಿಸಿದರು. ವಿಚಾರಣೆಯ ವೇಳೆ ಆತ ಟಿಕೆಟ್ ಗಢದ ಸಂಗೀತಾಳನ್ನ ಭೇಟಿಯಾಗಿದ್ದೆ. ಈ ಪರಿಚಯ ಮುಂದೆ ಅಕ್ರಮ ಸಂಬಂಧಕ್ಕೆ ಕಾರಣವಾಯಿತು, ಆದರೆ ಅವಳು ನನ್ನೊಂದಿಗೆ ಮಾತ್ರವಲ್ಲದೆ ಬೇರೆ ವ್ಯಕ್ತಿಯೊಂದಿಗೆ ಆಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ನನಗೆ ಅನುಮಾನ ಬಂದಿತು. ಇದರಿಂದಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ಪೊಲೀಸರು ಈ ಕುರಿತು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.
