Hansika Motwani Divorce
Hansika Motwani Divorce: ಸೌತ್ ಇಂಡಿಯಾ ಸಿನಿಮಾ ಸುಂದರಿ ಹನ್ಸಿಕಾ ಮೋಟ್ವಾನಿ ಹಾಗೂ ಉದ್ಯಮಿ ಸೋಹೇಲ್ (Hansika Motwani , Sohail Kathuria) ನಡುವಿನ ಸಂಬಂಧ ಇದೀಗ ಅಧಿಕೃತವಾಗಿ ಕೊನೆಗೊಂಡಿದೆ. ಮುಂಬೈನ Bandra Family Court ಈ ಜೋಡಿಗೆ ವಿಚ್ಛೇದನ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. 2022ರಲ್ಲಿ ಅದ್ದೂರಿಯಾಗಿ ನಡೆದಿದ್ದ ಇವರ ಮದುವೆ, ಕೇವಲ ಮೂರೂವರೆ ವರ್ಷಗಳಲ್ಲಿ Legal Divorce ಮೂಲಕ ಮುಕ್ತಾಯಗೊಂಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.(Hansika Motwani Divorce)
ಜೀವನಾಂಶಕ್ಕೆ ನೋ ಎಂದ ನಟಿ (Hansika Refuses Alimony)
ಈ ವಿಚ್ಛೇದನದ ಪ್ರಕರಣದಲ್ಲಿ ಹನ್ಸಿಕಾ ಒಂದು ಮಹತ್ವದ ನಿರ್ಧಾರ ತಳೆದಿದ್ದಾರೆ. ಪತಿಯಿಂದ ಯಾವುದೇ ರೀತಿಯ Alimony (ಜೀವನಾಂಶ) ಅಥವಾ ಹಣಕಾಸಿನ ಪರಿಹಾರವನ್ನು ಪಡೆಯಲು ಅವರು ನಿರಾಕರಿಸಿದ್ದಾರೆ. ತಮ್ಮ ದಾಂಪತ್ಯಕ್ಕೆ ಗೌರವಯುತ ಮತ್ತು ಶಾಂತಿಯುತ ವಿದಾಯ ಹೇಳುವುದು ಮಾತ್ರ ತಮ್ಮ ಉದ್ದೇಶ ಎಂದು ಹನ್ನಿಕಾ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ. ಹಣಕ್ಕಿಂತ ನೆಮ್ಮದಿಯೇ ಮುಖ್ಯ ಎಂಬ ಹನ್ಸಿಕಾ ನಿರ್ಧಾರ ಈಗ Social Mediaದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ: Neena Gupta Pregnant?: 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ?; ಅಸಲಿ ಸತ್ಯ ಬಿಚ್ಚಿಟ್ಟ ನಟಿ..!
ವಿಚ್ಛೇದನಕ್ಕೆ ಅಸಲಿ ಕಾರಣವೇನು..? (Temperamental Differences & Frequent Arguments)
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯ ಪ್ರಕಾರ, ಹನ್ಸಿಕಾ ಮತ್ತು ಸೊಹೇಲ್ ನಡುವೆ ಜೀವನಶೈಲಿ. ಹಾಗೂ ಸ್ವಭಾವದಲ್ಲಿ (Temperament & Lifestyle) ಭಾರಿ ವ್ಯತ್ಯಾಸಗಳಿದ್ದವು. ಸಣ್ಣಪುಟ್ಟ ವಿಷಯಗಳಿಗೂ ನಿರಂತರವಾಗಿ ಜಗಳ ನಡೆಯುತ್ತಿತ್ತು. 2024ರ ಜುಲೈ 2 ರಿಂದಲೇ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿತ್ತು. ಕುಟುಂಬದವರು ಸಂಧಾನ ಮಾಡಲು ಪ್ರಯತ್ನಿಸಿದರೂ, Irretrievable Breakdown of Marriage ಕಾರಣದಿಂದಾಗಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ (Mutual Consent Divorce) ದೂರಾಗಿದ್ದಾರೆ.
‘Love Shaadi Drama’ ಮತ್ತು ಬೆಸ್ಟ್ ಫ್ರೆಂಡ್ ಪತಿಯ ವಿವಾದ!
ಹನ್ಸಿಕಾ ಅವರ ಈ ಮದುವೆ ಮೊದಲಿನಿಂದಲೂ ವಿವಾದಗಳ ಸುಳಿಯಲ್ಲೇ ಇತ್ತು. ಸೊಹೇಲ್ ಅವರು ಹನ್ಸಿಕಾ ಅವರ ಬೆಸ್ಟ್ ಫ್ರೆಂಡ್ Rinky Bajaj ಅವರ ಮಾಜಿ ಪತಿಯಾಗಿದ್ದರು. ಸ್ನೇಹಿತೆಯ ಮನೆಯನ್ನೇ ಹನ್ಸಿಕಾ ಒಡೆದರು ಎಂಬ ಆರೋಪಗಳು ಕೇಳಿಬಂದಾಗ, ಹನ್ಸಿಕಾ ತಮ್ಮದೇ ಆದ ‘Love Shaadi Drama ಎಂಬ ರಿಯಾಲಿಟಿ ಶೋ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ, ಅಷ್ಟೆಲ್ಲಾ ಸದ್ದು ಮಾಡಿದ್ದ ಈ ಮದುವೆ ಈಗ ಇತಿಹಾಸ ಪುಟ ಸೇರಿದೆ.
Instagram ಫೋಟೋ ಡಿಲೀಟ್ ಮತ್ತು ಮುಂದಿನ ವೃತ್ತಿಜೀವನ
ಕಳೆದ ವರ್ಷ ಹನ್ಸಿಕಾ ತಮ್ಮ Instagram ಖಾತೆಯಿಂದ ಮದುವೆಯ ಫೋಟೋಗಳನ್ನು ಅಳಿಸಿಹಾಕಿದಾಗಲೇ ಇವರ ಸಂಸಾರದಲ್ಲಿ ಬಿರುಕು ಮೂಡಿರುವುದು ಸಾಬೀತಾಗಿತ್ತು. ಸದ್ಯ ಹನ್ಸಿಕಾ ಮೋಟಾನಿ ಅವರು ಸಿನಿಮಾ ರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದು, ತಮಿಳು ಮತ್ತು ತೆಲುಗಿನ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ಈಗ ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬೆಳವಣಿಗೆಯತ್ತ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದಾರೆ.

