The Kerala Story 2: 2023ರಲ್ಲಿ ತೆರೆಕಂಡ ‘ದಿ ಕೇರಳ ಸ್ಟೋರಿ(‘The Kerala Story) ಸಿನಿಮಾ ದೇಶಾದ್ಯಂತ ಎಂತಹ ಸಂಚಲನ ಸೃಷ್ಟಿಸಿತ್ತು ಎಂಬುದು ನಮಗೆಲ್ಲ ತಿಳಿದಿದೆ. ಲವ್ ಜಿಹಾದ್ ಎಂಬ ಸೂಕ್ಷ್ಮ ವಿಷಯದ ಮೇಲೆ ಬೆಳಕು ಚೆಲ್ಲಿದ್ದ ಈ ಚಿತ್ರ ಅನೇಕ ವಿವಾದಗಳನ್ನು ಎದುರಿಸಿತ್ತು. ಕೆಲವು ರಾಜ್ಯಗಳಲ್ಲಿ ಸಿನಿಮಾ ನಿಷೇಧಕ್ಕೊಳಗಾದರೂ, ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಭರ್ಜರಿ ಯಶಸ್ಸು ಕಂಡಿತ್ತು. ಸುದೀಪ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಈ ಯಶಸ್ವಿ ಸಿನಿಮಾದ ಮುಂದುವರಿದ ಭಾಗ ಅಂದರೆ ಸೀಕ್ವೆಲ್ ಸಿದ್ಧವಾಗುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಕಟ್ಟುನಿಟ್ಟಿನ ಭದ್ರತೆ ಹಾಗೂ ರಹಸ್ಯ ಚಿತ್ರೀಕರಣ
ಈಗಾಗಲೇ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಸೀಕ್ವೆಲ್ನ ಚಿತ್ರೀಕರಣ ಕೇರಳದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.(‘The Kerala Story) ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಈ ಬಾರಿ ಮಾಹಿತಿಯ ಸೋರಿಕೆಯಾಗದಂತೆ ಶೂಟಿಂಗ್ ಸೆಟ್ನಲ್ಲಿ ಬಾರಿ ಭದ್ರತೆ ಏರ್ಪಡಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಸೆಟ್ಗೆ ಮೊಬೈಲ್ ಫೋನ್ ಗಳನ್ನು ನಿಷೇಧಿಸಲಾಗಿತ್ತು ಮತ್ತು ನಟರಿಗೂ ಫೋನ್ನಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಚಿತ್ರದ ಸೀಕ್ರೆಟ್ ಹೊರಬರದಂತೆ ಅತ್ಯಂತ ಸುರಕ್ಷಿತವಾಗಿ ಶೂಟಿಂಗ್ ಪೂರ್ಣಗೊಳಿಸಲಾಗಿದೆ.
2026ರ ಬಿಡುಗಡೆಯ ನಿರೀಕ್ಷೆ ಹಾಗೂ ಕಥೆಯ ಗಂಭೀರತೆ
ವರದಿಗಳ ಪ್ರಕಾರ, ಈ ‘ದಿ ಕೇರಳ ಸ್ಟೋರಿ 2ನೇ ಭಾಗವು(‘The Kerala Story 2) ಮೊದಲನೆಯದಕ್ಕಿಂತ ಹೆಚ್ಚು ಗಂಭೀರ ಮತ್ತು ಕರಾಳ ಕಥೆಯನ್ನು ಒಳಗೊಂಡಿರಲಿದೆ. ‘ದಿ ಕೇರಳ ಸ್ಟೋರಿ 2’ ಸಿನಿಮಾ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಸಿನಿಮಾ ಫೆಬ್ರವರಿ 27ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಚಿತ್ರದ ಪಾತ್ರವರ್ಗ ಮತ್ತು ಇತರ ಪ್ರಮುಖ ವಿವರಗಳನ್ನು ಚಿತ್ರತಂಡ ಅತ್ಯಂತ ಗೌಪ್ಯವಾಗಿರಿಸಿದೆ.
ಇದನ್ನೂ ಓದಿ: Kannada Actress Suicid: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಬಯಲಾಯಿತು ಸಾವಿನ ಅಸಲಿ ಸತ್ಯ
