ಬೆಂಗಳೂರು: ಕನ್ನಡಿಗರ ಮನೆಮಾತಾಗಿದ್ದ ಕಿರುತೆರೆಯ ಪ್ರತಿಭಾವಂತ ನಟಿ ನಂದಿನಿ ಇನ್ನಿಲ್ಲ ಎಂಬ ಸುದ್ದಿ ಕೇಳಿ. ಕಲಾಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಜೀವ ಹೂವಾಗಿದೆ’, ‘ಸಂಘರ್ಷ ಮತ್ತು ‘ನೀನಾದೆ ನಾ ಅಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ಆ ಪ್ರತಿಭೆ ಇಂದು ಕೇವಲ ನೆನಪು ಮಾತ್ರ, ಬೆಂಗಳೂರಿನ ಮೈಲಸಂದ್ರದ ಪಿಜಿ ಒಂದರಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವುದು(Kannada Actress Suicid) ನಿಜಕ್ಕೂ ನೋವಿನ ಸಂಗತಿ.

ತನ್ನ ಸಾವಿಗೂ ಮುನ್ನ ನಂದಿನಿ ಅವರು ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಅವರು ಅನುಭವಿಸುತ್ತಿದ್ದ ಮಾನಸಿಕ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ. ‘ಕ್ಷಮಿಸಿಬಿಡು ಅಮ್ಮಾ” ಎಂಬ ಮಾತುಗಳೊಂದಿಗೆ ಆರಂಭವಾಗುವ ಅವರ ಬರಹದಲ್ಲಿ, ನಟನೆಯ ಬಗ್ಗೆ ಅವರಿಗಿದ್ದ ಅಪಾರ ಆಸಕ್ತಿ ಮತ್ತು ಮನೆಯವರ ನಿರೀಕ್ಷೆಗಳ ನಡುವಿನ ಹೋರಾಟ ಎದ್ದು ಕಾಣುತ್ತಿದೆ. ನಂದಿನಿಯವರ ತಂದೆ ಸರ್ಕಾರಿ ಶಿಕ್ಷಕರಾಗಿದ್ದು, ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆಯ ಸ್ಥಾನದಲ್ಲಿ ನಂದಿನಿ ಅವರೇ ಸರ್ಕಾರಿ ಕೆಲಸಕ್ಕೆ ಸೇರಬೇಕೆಂದು ಕುಟುಂಬದವರಿಂದ ತೀವು ಒತ್ತಾಯವಿತ್ತು. ಆದರೆ ಟೀಚರ್ ಕೆಲಸ ಅವರಿಗೆ ಇಷ್ಟವಿರಲಿಲ್ಲ, ಬದಲಿಗೆ ನಟನೆಯಲ್ಲಿಯೇ ಮುಂದುವರಿಯುವ ಛಲ ಅವರದಾಗಿತ್ತು. ತನಗೆ ಇಷ್ಟವಿಲ್ಲದ ವ್ಯಕ್ತಿಯನ್ನು ಆಯ್ದುಕೊಳ್ಳಲು ಸಾಧ್ಯವಾಗದೆ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.(Kannada Actress Suicid)

ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದರು. ಪ್ರಸ್ತುತ ತಮಿಳಿನ ‘ಗೌರಿ’ ಧಾರಾವಾಹಿಯಲ್ಲಿ ಕನಕ ಮತ್ತು ದುರ್ಗಾ ಎಂಬ ದ್ವಿಪಾತ್ರದಲ್ಲಿ ಅಭಿನಯಿಸುತ್ತಾ ಪ್ರೇಕ್ಷಕರ ಮನ ಗೆದ್ದಿದ್ದರು. ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ದ ಪ್ರತಿಭೆ ಅರ್ಧಕ್ಕೆ ಕಮರಿ ಹೋದದ್ದು ನಿಜಕ್ಕೂ ದುರಂತ ಭಾನುವಾರ ರಾತ್ರಿ ತನ್ನ ಗೆಳೆಯ ಪುನೀತ್ ಅವರ ಮನೆಗೆ ಹೋಗಿ ಮರಳಿದ್ದ ನಂದಿನಿ, ಆ ಬಳಿಕ ಪುನೀತ್ ಅವರ ಕರೆಯನ್ನು ಸ್ವೀಕರಿಸಿರಲಿಲ್ಲ, ಇದರಿಂದ ಅನುಮಾನಗೊಂಡು ಪಿಜಿ ಮ್ಯಾನೇಜರ್ ಮೂಲಕ ಪರಿಶೀಲಿಸಿದಾಗ, ನಂದಿನಿ ಖೇಲ್ನಿಂದ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.(Kannada Actress Suicid)
ಇದನ್ನೂ ಓದಿ: Satna: ಬಿಜೆಪಿ ಕೌನ್ಸಿಲರ್ ಪತಿಯಿಂದ ಮಹಿಳೆ ಮೇಲೆ ಅತ್ಯಾಚಾರ: ‘ನನಗೇನೂ ಮಾಡೋಕೆ ಆಗಲ್ಲ’ ಎಂದ ಆರೋಪಿಯ ವಿಡಿಯೋ ವೈರಲ್
