ಸಾಂದರ್ಭಿಕ ಚಿತ್ರ
Madhya Pradesh: ಬಿಜೆಪಿ ಕೌನ್ಸಿಲರ್ ಪತಿಯೊಬ್ಬ ಮಹಿಳೆಯ ಮೇಲೆ ಎಸಗಿರುವ ಭೀಕರ ದೌರ್ಜನ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ(Madhya Pradesh) ಸತ್ನಾ ಜಿಲ್ಲೆಯ ರಾಂಪುರ ಬಘಲನ್ನಲ್ಲಿ ಆರೋಪಿ ಅಶೋಕ್ ಸಿಂಗ್ ಎಂಬಾತ ತನ್ನ ಪತ್ನಿಯ ರಾಜಕೀಯ ಪ್ರಭಾವ ಬಳಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿ ಕಳೆದ ಆರು ತಿಂಗಳಿನಿಂದ ಬ್ಲಾಕ್ಮೇಲ್ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆ ಸತ್ನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ದೂರಿನ ಪ್ರಕಾರ, ಆರು ತಿಂಗಳ ಹಿಂದೆ ಅಶೋಕ್ ಸಿಂಗ್ ಆಕೆಯ ಮನೆಗೆ ನುಗಿ ಚಾಕು ತೋರಿಸಿ ಬೆದರಿಸಿ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ
ವೈರಲ್ ವಿಡಿಯೋದಲ್ಲಿ ಬಿಚ್ಚಿಕೊಂಡ ಸತ್ಯ
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಈ ವಿಡಿಯೋದಲ್ಲಿ ಸಂತ್ರಸ್ತ ಮಹಿಳೆ ಅಳುತ್ತಾ ದೂರು ನೀಡುವ ಬಗ್ಗೆ, ಮಾತನಾಡುತ್ತಿದ್ದರೆ, ಆರೋಪಿ ಅಶೋಕ್ ಸಿಂಗ್ ಮಾತ್ರ ಅತ್ಯಂತ ಉದ್ಘಟತನದಿಂದ “ನನಗೆ ಏನಾಗುತ್ತದೆ? ಏನೂ ಆಗುವುದಿಲ್ಲ ನೀನು ಎಲ್ಲಿ ಬೇಕಾದರೂ ಹೋಗಿ ದೂರು ಕೊಡು” ಎಂದು ಬೆದರಿಕೆ ಹಾಕುತ್ತಿರುವುದು ದಾಖಲಾಗಿದೆ ಅಲ್ಲದೆ ಆತ ಪೊಲೀಸ್ ಇಲಾಖೆಯ ಬಗ್ಗೆಯೂ ಅವಾಚ್ಯ ಪದಗಳನ್ನು ಬಳಸಿರುವುದು ವರದಿಯಾಗಿದೆ.(Madhya Pradesh)
ಆರೋಪಿ ಅಶೋಕ್ ಸಿಂಗ್ ಈ ಹಿಂದೆ ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೂ ಒಳಗಾಗಿದ್ದ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು ಸಂತ್ರಸ್ತೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿ ಇನ್ನು ದಿನ ಮೌನವಾಗಿರುವಂತೆ ಮಾಡಿದ್ದ ಎನ್ನಲಾಗಿದೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸತ್ನಾ ಎಸ್ಪಿ ಹಂಸರಾಜ್ ಸಿಂಗ್ ಅವರು ಕೂಡಲೇ ತನಿಖೆಗೆ ಆದೇಶಿಸಿದ್ದು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತ್ರಿವೇದಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಸದ್ಯ ಪೊಲೀಸರು ವೈರಲ್ ವಿಡಿಯೋ ಹಾಗೂ ಮಹಿಳೆಯ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.(Madhya Pradesh)
