ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. 19 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ(Gang Rape) ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಹಾಗೂ ಓರ್ವ ಎಲೆಕ್ಟ್ರಿಷಿಯನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾಗಡಿ ಪಟ್ಟಣದ ನಿವಾಸಿಗಳಾದ ಜಿ. ವಿಕಾಸ್ (20), ಎನ್. ಪ್ರಶಾಂತ್ (20) ಮತ್ತು ಚೇತನ್ ಜೆ. (26) ಎಂದು ಗುರುತಿಸಲಾಗಿದೆ. ವಿಕಾಸ್ ಎಂಬಾತ ಅಲೈಡ್ ಹಲ್ ಸೈನ್ಸ್ ವಿದ್ಯಾರ್ಥಿಯಾಗಿದ್ದರೆ, ಪ್ರಶಾಂತ್ ಬಿ.ಕಾಂ ಓದುತ್ತಿದ್ದಾನೆ. ಸದ್ಯ ಇವರನ್ನು ಬಂಧಿಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸ್ನೇಹದ ಹೆಸರಲ್ಲಿ ನಂಬಿಸಿ ದ್ರೋಹ
ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿರುವ ಸಂತ್ರಸ್ತ ಯುವತಿಗೆ ಸುಮಾರು ಆರು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ವಿಕಾಸ್ ಪರಿಚಯವಾಗಿದ್ದ ಆ ಪರಿಚಯವನ್ನು ಬಳಸಿಕೊಂಡ ವಿಕಾಸ್, ಯುವತಿಯನ್ನು ಮಾಗಡಿಯಲ್ಲಿದ್ದ ಚೇತನ್ ಎಂಬುವವರ ಖಾಲಿ ಮನೆಗೆ ಕರೆದೊಯ್ದಿದ್ದ ಎನ್ನಲಾಗಿದೆ. ಅಲ್ಲಿ ಯುವತಿಯ ಅರಿವಿಗೆ ಬಾರದಂತೆ ಖಾಸಗಿ ಕ್ಷಣಗಳನ್ನು ಗುಟ್ಟಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ.
ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್
ವಿಕಾಸ್ ಆ ವಿಡಿಯೋಗಳನ್ನು ತನ್ನ ಸ್ನೇಹಿತರಾದ ಪ್ರಶಾಂತ್ ಮತ್ತು ಚೇತನ್ ಜೊತೆ ಹಂಚಿಕೊಂಡಿದ್ದ ನಂತರ ಆ ಅಶ್ಲೀಲ ವಿಡಿಯೋವನ್ನೇ ಅಸ್ತ್ರವಾಗಿ ಬಳಸಿಕೊಂಡ ಈ ಮೂವರು ಕಾಮುಕರು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಯುವತಿಯನ್ನು ಬೆದರಿಸತೊಡಗಿದರು. ಇದೇ ಭಯವನ್ನು ಮುಂದಿಟ್ಟುಕೊಂಡು ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.(Gang Rape)
ಪೊಲೀಸ್ ಕಾರ್ಯಾಚರಣೆ
ಇವರ ಟಾರ್ಚರ್ ತಡೆಯಲಾರದೆ ಕೊನೆಗೆ ಯುವತಿ ಧೈರ್ಯ ಮಾಡಿ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಡಿಲೀಟ್ ಮಾಡಲಾದ ವಿಡಿಯೋಗಳನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತಿದೆ.(Gang Rape)
