ಬೆಂಗಳೂರು: ವಿಶ್ವದ ಮುಂಚೂಣಿಯ ಲೈಟಿಂಗ್ ಕಂಪನಿ ಸಿಗ್ನಿಫೈ (ಯೂರೋನೆಕ್ಸ್ಟ್: ಲೈಟ್) ಬೆಂಗಳೂರಿನಲ್ಲಿ ಮೂರು ಹೊಸ ಫಿಲಿಪ್ಸ್ ಸ್ಮಾರ್ಟ್ ಲೈಟಿಂಗ್ ಹಬ್ಗಳನ್ನು(Philips Smart Light) (ಎಸ್ಎಲ್ಎಚ್) ಒಂದೇ ದಿನ ಉದ್ಘಾಟಿಸಿದೆ. ಇದರೊಂದಿಗೆ ನಗರದಲ್ಲಿ ಪ್ರೀಮಿಯಂ, ಸ್ಮಾರ್ಟ್ ಮತ್ತು ವಿನ್ಯಾಸಾಧಾರಿತ ಲೈಟಿಂಗ್ ಪರಿಹಾರಗಳ ಅನುಭವವನ್ನು ಮತ್ತಷ್ಟು ವಿಸ್ತರಿಸಿದೆ.
ಸ್ಮಾರ್ಟ್ ಹೋಮ್ ಆಟೊಮೇಷನ್ನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಐಟಿ ರಾಜಧಾನಿ ಬೆಂಗಳೂರು, ತಂತ್ರಜ್ಞಾನ ಬಳಕೆಯ ಗ್ರಾಹಕರಿಂದಾಗಿ ಸಿಗ್ನಿಫೈಗೆ ಪ್ರಮುಖ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ವೃದ್ಧಿಸುತ್ತಿರುವ ರಿಯಲ್ ಎಸ್ಟೇಟ್ ಕ್ಷೇತ್ರ ಹಾಗೂ ಆಧುನಿಕ ಒಳಾಂಗಣ ವಿನ್ಯಾಸದ ಮೇಲಿನ ಆಸಕ್ತಿಯು ಈ ನಗರವನ್ನು ಸ್ಮಾರ್ಟ್ ಲೈಟಿಂಗ್ ಪರಿಹಾರಗಳಿಗೆ ಸೂಕ್ತ ಕೇಂದ್ರವಾಗಿಸಿದೆ ಎಂದು ಕಂಪನಿ ತಿಳಿಸಿದೆ.
ಈ ಕುರಿತು ಮಾತನಾಡಿದ ಸಿಗ್ನಿಫೈ ಗ್ರೇಟರ್ ಇಂಡಿಯಾದ ಹೆಡ್ ಆಫ್ ಕನ್ಸೂಮರ್ ಬಿಸಿನೆಸ್ ಸಿ. ಅರುಣ್ ಕುಮಾರ್, “ಕಾರ್ಯಕ್ಷಮತೆ ಮತ್ತು ಆವಿಷ್ಕಾರಕ ವಿನ್ಯಾಸ ಎರಡನ್ನೂ ಬಯಸುವ ಗ್ರಾಹಕರಿಂದ ಬೆಂಗಳೂರು ನಮ್ಮ ಪ್ರಮುಖ ಮಾರುಕಟ್ಟೆಯಾಗಿದೆ. ದೇಶಾದ್ಯಂತ 328 ಮಳಿಗೆಗಳಿರುವ ನಮ್ಮ ಜಾಲದಲ್ಲಿ, ಬೆಂಗಳೂರಿನಲ್ಲಿ ಒಂದೇ ವೇಳೆ ಮೂರು ಫಿಲಿಪ್ಸ್ ಸ್ಮಾರ್ಟ್ ಲೈಟಿಂಗ್(Philips Smart Light) Dharmendra ಆರಂಭಿಸುವ ಮೂಲಕ ಗ್ರಾಹಕರು, ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕಾರರಿಗೆ ಅತ್ಯಾಧುನಿಕ ಸ್ಮಾರ್ಟ್ ಹಾಗೂ ಅಲಂಕಾರಿಕ ಲೈಟಿಂಗ್ ಪರಿಹಾರಗಳನ್ನು ಅನುಭವಿಸಲು ಅವಕಾಶ ನೀಡಿದ್ದೇವೆ,” ಎಂದರು.
ಬೆಂಗಳೂರಿನ ಪ್ರಮುಖ ತಾಣಗಳಲ್ಲಿ ಆರಂಭವಾದ ಈ ಮಳಿಗೆಗಳು ಸ್ಮಾರ್ಟ್, ಕನೆಕ್ಟೆಡ್ ಮತ್ತು ಅಲಂಕಾರಿಕ ದೀಪಗಳ ಅನುಭವ ಕೇಂದ್ರಗಳಾಗಿವೆ. ಇಲ್ಲಿ ಶಾಂಡೆಲಿಯರ್ಗಳು, ವಾಲ್ ಲೈಟ್ಸ್, ಫ್ಲೋರ್ ಲ್ಯಾಂಪ್ಸ್, ಟ್ರ್ಯಾಕ್ ಲೈಟ್ಸ್ ಜೊತೆಗೆ ಮಾಡ್ಯುಲರ್ ಸಿಒಬಿ, ಡೌನ್ಲೈಟರ್ಗಳು, ಮ್ಯಾಗ್ನೆಟಿಕ್ ಟ್ರ್ಯಾಕ್ಗಳು, ಪ್ಯಾನೆಲ್ಗಳು ಹಾಗೂ ಸ್ಪಾಟ್ ಲೈಟ್ಸ್ ಲಭ್ಯವಿವೆ.
ವಿಝ್ ಆಧಾರಿತ ಸ್ಮಾರ್ಟ್ ಲೈಟಿಂಗ್ ಪರಿಹಾರಗಳು ಗ್ರಾಹಕರಿಗೆ ಸುಲಭ ಮತ್ತು ಅನುಕೂಲಕರ ಸಂಪರ್ಕಿತ ಲೈಟಿಂಗ್ ಅನುಭವವನ್ನು ಒದಗಿಸುತ್ತವೆ. ಜೊತೆಗೆ ಇಕೊಲಿಂಕ್ ಬಿಎಲ್ಡಿಸಿ ಫ್ಯಾನ್ಗಳು ಹಾಗೂ ಫಿಲಿಪ್ಸ್ ಇಲ್ಯೂಮಿನ್ ಏರ್ ಎಲ್ಇಡಿ ಲೈಟ್-ಫ್ಯಾನ್ ಸಂಯೋಜನೆಯೂ ಮಳಿಗೆಯಲ್ಲಿ ಲಭ್ಯವಿದೆ.
ಮಳಿಗೆಗಳ ವಿಳಾಸಗಳು: ಸಮೀರ್ ಎಂಟರ್ಪ್ರೈಸಸ್, ವೈಟ್ಫೀಲ್ಡ್ ಮುಖ್ಯರಸ್ತೆ, ಪಾಮ್ ಮೀಡೋಸ್, ಬೆಂಗಳೂರು – 560066ಹೋಮ್ ಕಾನ್ಸೆಪ್ಟ್ಸ್, ಸುಂದರ ನಗರ, ಮತ್ತಿಕೆರೆ, ಬೆಂಗಳೂರು – 560054ಅಮ್ರೋಇಂಟೀರಿಯೋ (ಮಮತಾ ಎಂಟರ್ಪ್ರೈಸಸ್), ಹೊಸೂರು ರಸ್ತೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಬೆಂಗಳೂರು – 560099ಈ ಹೊಸ ಆರಂಭದೊಂದಿಗೆ ಸ್ಮಾರ್ಟ್ ಲೈಟಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಿಗ್ನಿಫೈ ತನ್ನ ಮುಂಚೂಣಿ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ.(Philips Smart Light)
