Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ(Toxic Movie) ಅಂದ್ರೆ ಈಗ ಇಡೀ ಇಂಡಿಯಾದಲ್ಲೇ ಒಂದು ಕ್ರೇಜ್. ಮಾರ್ಚ್ 19ರಂದು ಟಾಕ್ಸಿಕ್ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ರಾಕಿ ಭಾಯ್ ಅಬ್ಬರಕ್ಕೆ ಹೆದರಿ ಈಗಾಗಲೇ ಹಲವು ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಬದಲಾಯಿಸಿಕೊಂಡಿವೆ. ಆದರೆ, ತೆಲುಗಿನ ನಟ ಅಡಿವಿ ಶೇಷ್(Adivi Sesh) ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಂಬರುವ ಸಿನಿಮಾ ‘ಡಕ್ಕೆತ್’ ಕೂಡ ಅದೇ ದಿನ, ಅಂದರೆ ಮಾರ್ಚ್ 19ಕ್ಕೇ ಬಿಡುಗಡೆಯಾಗಲಿದೆ ಎಂದು ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಅಡಿವಿ ಶೇಷ್(Adivi Sesh) ಕೊಟ್ಟ ಖಡಕ್ ಉತ್ತರ
ಇತ್ತೀಚೆಗೆ ನಡೆದ ‘ಡಕ್ಕೆತ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪತ್ರಕರ್ತರು ಒಂದು ಚಕಿತಗೊಳಿಸುವ ಪ್ರಶ್ನೆ ಕೇಳಿದರು. “ಯಶ್ ಅವರ ‘ಟಾಕ್ಸಿಕ್’(Toxic Movie) ಮತ್ತು ರಣವೀರ್ ಸಿಂಗ್ ಅವರ ಧುರಂಧರ್ 2′ ಅಂತಹ ದೊಡ್ಡ ಸಿನಿಮಾಗಳು ಮಾರ್ಚ್ 19ಕ್ಕೆ ಬರ್ತಿವೆ. ಇವುಗಳ ನಡುವೆ ನಿಮ್ಮ ಸಿನಿಮಾ ಬಿಡುಗಡೆ ಮಾಡುವುದು ರಿಸ್ಕ್ ಅಲ್ವಾ?” ಎಂದರು.
ಇದಕ್ಕೆ ನಗುನಗುತ್ತಲೇ ಉತ್ತರಿಸಿದ ಅಡಿವಿ ಶೇಷ್(Adivi Sesh), ತಮ್ಮ ಹಳೆಯ ನೆನಪೊಂದನ್ನು ಮೆಲುಕು ಹಾಕಿದರು: “2023ರಲ್ಲಿ ನನ್ನ ‘ಮೇಜರ್’ ಸಿನಿಮಾ ಬಂದಾಗಲೂ ಪರಿಸ್ಥಿತಿ ಹೀಗೆ ಇತ್ತು. ಒಂದು ಕಡೆ ಅಕ್ಷಯ್ ಕುಮಾರ್ ಅವರ ‘ಪೃಥ್ವಿರಾಜ್’, ಮತ್ತೊಂದು ಕಡೆ ಕಮಲ್ ಹಾಸನ್ ಅವರ ‘ವಿಕ್ರಂ’ ಅಬ್ಬರಿಸುತ್ತಿದ್ದವು. ಆಗಲೂ ನನಗೆ ಇದೇ ಪ್ರಶ್ನೆ ಕೇಳಲಾಗಿತ್ತು. ಅಂದು ನಾನು ಕೊಟ್ಟ ಉತ್ತರವನ್ನೇ ಇಂದೂ ಕೊಡುತ್ತೇನೆ… ಸಮುದ್ರದಲ್ಲಿ ಎಷ್ಟೇ ದೊಡ್ಡ ಮೀನುಗಳಿರಬಹುದು, ಆದರೆ ನಾವು ‘ಗೋಲ್ಡ್ ಫಿಶ್’ (ಚಿನ್ನದ ಮೀನು). ನಮಗೆ ನಮ್ಮದೇ ಆದ ದಾರಿಯಿದೆ.”
ಡತ್’ ಮೇಲೆ ಅಡಿವಿ ಶೇಷ್ ನಂಬಿಕೆಗಿದೆ ಬಲವಾದ ಕಾರಣ
ಅಡಿವಿ ಶೇಷ ಸುಮ್ಮನೆ ಈ ಮಾತನ್ನು ಹೇಳುತ್ತಿಲ್ಲ. ಅವರ ಈ ಹಿಂದಿನ ಸಿನಿಮಾಗಳಾದ ‘ಗೂಢಚಾರಿ’, ‘ಮೇಜರ್’ ಮತ್ತು ‘ಹಿಟ್ 2′ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದವು. ಈ ಬಾರಿಯ ಡತ್’ ಸಿನಿಮಾದಲ್ಲೂ ಅಂತಹದೇ ಬಲವಾದ ಅಂಶಗಳಿವೆ ಎನ್ನಲಾಗಿದೆ. ಚಿತ್ರದಲ್ಲಿ ಸದ್ಯ ಟಾಲಿವುಡ್ ಲಕ್ಕಿ, ಬೆಡಗಿ ಮೃಣಾಲ್ ನಾಯಕಿಯಾಗಿ ನಟಿಸಿದ್ದು, ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ., ಇವರ ಜೊತೆ ಪ್ರಕಾಶ್ ರಾಜ್ ಮತ್ತು ಸುನಿಲ್ ಅವರಂತಹ ಅನುಭವಿ ನಟರು ಚಿತ್ರದಲ್ಲಿ ನಟಿಸಿದ್ದಾರೆ.
ಯಶ್ ಅವರ ‘ಟಾಕ್ಸಿಕ್”(Toxic Movie) ಎದುರು ನಿಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕಂಟೆಂಟ್ ಚೆನ್ನಾಗಿದ್ದರೆ ಜನ ಖಂಡಿತಾ ಮೆಚ್ಚಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸ ಅಡಿವಿ ಶೇಷ್ ಅವರದ್ದು .ಮಾರ್ಚ್ 19ರ ಈ “ಸಿನಿಗಾಮಿಗಳ ಕಾಳಗ”ದಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದು.
