Border2: ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ‘ಬಾರ್ಡರ್’ (Border). ಸುಮಾರು 28 ವರ್ಷಗಳ ನಂತರ ಅದಕ್ಕೆ ಸೀಕ್ವೆಲ್ ಆಗಿ ‘ಬಾರ್ಡರ್ 2’ (Border 2) ಸಿದ್ಧವಾಗಿದೆ. ಈ ಸಿನಿಮಾ ಮುಂದಿನ ವರ್ಷ ಜನವರಿ 23 ರಂದು ಪ್ರೇಕ್ಷಕರ ಮುಂದೆ ಬರಲಿದೆ.
‘ವಿಜಯ್ ದಿವಸ್’ ಅಂಗವಾಗಿ ಚಿತ್ರತಂಡ ಮಂಗಳವಾರ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ. ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮೊದಲ ಭಾಗವನ್ನು ಜೆ.ಪಿ. ದತ್ತಾ ನಿರ್ದೇಶಿಸಿದ್ದರು. ಆದರೆ, ಈ ಎರಡನೇ ಭಾಗವನ್ನು ಅನುರಾಂಗ್ ಸಿಂಗ್ ರೂಪಿಸಿದ್ದಾರೆ. ಈ ಸೀಕ್ವೆಲ್ನಲ್ಲಿ ವರುಣ್ ಧವನ್, ದಿಲ್ಕಿತ್ ದೋಸಾಂಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Border 2