Gold Rate Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗಗನಕ್ಕೇರಿ, ಚಿನ್ನಾಭರಣ ಪ್ರಿಯರಿಗೆ ಮತ್ತು ಖರೀದಿದಾರರಿಗೆ ನಿರಾಸೆ ಮೂಡಿಸಿತ್ತು. ಆದರೆ ಈಗ ಮತ್ತೆ ಚಿನ್ನದಲ್ಲಿ ಇಳಿಕೆ ಕಂಡು ಬಂದಿದ್ದು, ಚಿನ್ನದ ನಿರಂತರ ಏರಿಕೆಗೆ ಕೊಂಚ ಬ್ರೇಕ್ ಬಿದ್ದಿದೆ. ಹಬ್ಬದ ಈ ಸಮಯದಲ್ಲಿ ಬೆಲೆ ಇಳಿಕೆ ಕಂಡಿದೆ (Gold Rate Today). ಹಾಗಾದರೆ, ಚಿನ್ನದ ಬೆಲೆ ಇಳಿಕೆಗೆ ಕಾರಣಗಳೇನು? ಮುಂದಿನ ದಿನಗಳಲ್ಲಿ ಬೆಲೆಗಳು ಇನ್ನೂ ಕಡಿಮೆಯಾಗುತ್ತವೆಯೇ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.”
ಚಿನ್ನ ಖರೀದಿಸುವವರಿಗೆ ಕೊಂಚ ಸಮಾಧಾನ ಸಿಕ್ಕಿದೆ. ಅಮೆರಿಕದ ಫೆಡರಲ್ ರಿಸರ್ವ್(American Fedaral Reserve) ಬಡ್ಡಿದರಗಳನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಿಂದ ಇತ್ತೀಚೆಗೆ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತ್ತು. ಸತತ 10 ದಿನಗಳ ಕಾಲ ಏರಿಕೆ ಕಂಡಿದ್ದ ಚಿನ್ನದ ದರಗಳು, ಹಬ್ಬದ ಸಮಯದಲ್ಲಿ ಖರೀದಿಗೆ ಮುಂದಾದವರಿಗೆ ಆತಂಕ ಮೂಡಿಸಿದ್ದವು.
ಇದನ್ನೂ ಓದಿ: Chandra Grahana 2025: ನಮ್ಮ ಮೇಲೆ ಚಂದ್ರ ಗ್ರಹಣದ ಪ್ರಭಾವ ಹಾಗೂ ಸೂಕ್ತ ಪರಿಹಾರಗಳು
ಅಂತರರಾಷ್ಟ್ರೀಯ ರಾಜಕೀಯ(International politics) ಮತ್ತು ಭೌಗೋಳಿಕ ಅನಿಶ್ಚಿತತೆ ಕೂಡ ಚಿನ್ನದ ಬೆಲೆ ಏರಿಕಗೆ ಕಾರಣವಾಗಿತ್ತು. ಇಂತಹ ಸಂದರ್ಭಗಳಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಆಕರ್ಷಿತರಾಗುತ್ತಾರೆ. ಇದರಿಂದ ಬೇಡಿಕೆ ಹೆಚ್ಚಾಗಿ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿದ್ದವು.
ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸತತ ಏರಿಕೆಗೆ ಬ್ರೇಕ್ ಬಿದ್ದಿದ್ದು, ಚಿನ್ನದ ಬೆಲೆ(Gold Rate) ಸ್ವಲ್ಪ ಇಳಿಕೆ ಕಂಡಿದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹97,950 ಕ್ಕೆ ತಲುಪಿದೆ(Gold Rate Today). ಹಿಂದಿನ ದಿನ ಇದು ₹98,000 ಮೇಲಿತ್ತು. ಅದೇ ರೀತಿ, 24 ಕ್ಯಾರೆಟ್ ಶುದ್ದ ಚಿನ್ನದ ಬೆಲೆ ಪ್ರತಿ 10ಗ್ರಾಂಗೆ ₹1,06,860ಕ್ಕೆ ಇಳಿದಿದೆ.
ಇದನ್ನೂ ಓದಿ: Trump and Modi Relationship: ಟ್ರಂಪ್ ಮತ್ತು ಮೋದಿ ನಡುವಿನ ಸ್ನೇಹ ಮುಗಿದಿದೆ, ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ
ಈ ಇಳಿಕೆಗೂ ಮೊದಲು 24 ಕ್ಯಾರೆಟ್ ಚಿನ್ನದ ದರದಲ್ಲಿ ₹880, ₹210, ₹930, ₹1640, ₹710, ₹160, ₹380 ರಂತೆ ಸತತವಾಗಿ ಏರಿಕೆ ಕಂಡಿತ್ತು, ಇದು ಗ್ರಾಹಕರಿಗೆ ದೊಡ್ಡ ಆಘಾತ ನೀಡಿತ್ತು. ಇದು ಒಟ್ಟಾರೆಯಾಗಿ, ₹5,000ಕ್ಕೂ ಹೆಚ್ಚು ಬೆಲೆ ಏರಿಕೆಯಾಗಿತ್ತು. ಈಗ ಬೆಲೆ ಇಳಿದಿರುವುದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ, ಬೆಳ್ಳಿಯ ದರ ಹೈದರಾಬಾದ್ನಲ್ಲಿ ಪ್ರತಿ ಕೆಜಿಗೆ ₹1.37 ಲಕ್ಷದ ಮಟ್ಟದಲ್ಲಿ ಸ್ಥಿರವಾಗಿದೆ.
ಜಿಎಸ್ಟಿ ಸುಧಾರಣೆಗಳ(GST Reforms) ಕುರಿತು ಇತ್ತೀಚೆಗೆ ಭಾರತದಲ್ಲಿ ಘೋಷಣೆಯಾಗಿದ್ದು, ಇದು ದೇಶದ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಲಿದೆ ಎಂಬ ಅಭಿಪ್ರಾಯವಿದೆ. ಇದು ಟ್ರಂಪ್ ಅವರ ಸುಂಕ ನೀತಿಗಳಿಗೆ ಸವಾಲು ಒಡ್ಡಬಹುದು ಎಂಬ ಊಹೆಯೂ ಇದೆ. ಜೊತೆಗೆ, ಚಿನ್ನದ ಬೆಲೆ ದಾಖಲೆ ಗರಿಷ್ಠ ಮಟ್ಟದಲ್ಲಿದ್ದಾಗ, ಲಾಭಗಳಿಸಲು ಕೆಲವು ಹೂಡಿಕೆದಾರರು ಚಿನ್ನವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಕೂಡ ಬೆಲೆಗಳು ಕಡಿಮೆಯಾಗಿವೆ ಎಂದು ಹೇಳಲಾಗುತ್ತಿದೆ.
