
Gold price in India: ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆಯಾಗಿದ್ದು, ಚಿನ್ನ ಖರಿದಿಸಲು ಯೋಜಿಸುತಿದ್ದ ಜನರಿಗೆ ಇದು ನಿರಾಸೆ ತಂದಿದೆ. ಇತ್ತೀಚೆಗೆ ಸ್ವಲ್ಪ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಗಗನಕ್ಕೆರಿದೆ. ಈ ಏರಿಕೆಯು ಹಬ್ಬದ ಋತುವಿನಲ್ಲಿ ಚಿನ್ನ ಖರೀದಿಸುವವರ ಮೇಲೆ ಪರಿಣಾಮ ಬೀರಬಹುದು
ಇದನ್ನೂ ಓದಿ: ವರ್ಷಿತಾ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ತೀವ್ರ ಆಗ್ರಹ
ಬಂಗಾರದ ದರಗಳು ಇಂತಿವೆ
ಗುರುವಾರ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಖಂಡು ಬಂದಿದೆ. ೨೨ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ ₹50 ರಷ್ಟು ಹೆಚ್ಚಾಗಿ ₹6,230ಕ್ಕೆ ತಲುಪಿದೆ. ಅದೇ ರೀತಿ 10ಗ್ರಾಂ ಚಿನ್ನದ ಬೆಲೆ ₹92,300 ಕ್ಕೆ ಏರಿಕೆ ಖಂಡಿದೆ.
ಇನ್ನು 24 ಕ್ಯಾರೆಟ್ ಚಿನ್ನದ ವಿಷಯಕ್ಕೆ ಬಂದರೆ, ಪ್ರತಿ ಗ್ರಾಂ ಬೆಲೆ ₹60 ರಷ್ಟು ಏರಿಕೆಯಾಗಿ ₹10,775 ತಲುಪಿದೆ. 10ಗ್ರಾಂ ಚಿನ್ನದ ಬೆಲೆ ₹1,00,750 ತಲುಪಿದೆ.
ಬೆಳ್ಳಿ ದರದಲ್ಲೂ ಏರಿಕೆ:
ಬಂಗಾರದ ಬೆನ್ನಲ್ಲೇ ಬೆಳ್ಳಿದರವು ಕೊಂಚ ಏರಿಕೆ ಖಂಡಿದೆ. ಪ್ರತಿಗ್ರಾಂ ಬೆಳ್ಳಿದರ ₹1 ರಷ್ಟು ಹೆಚ್ಚಾಗಿ ಇಂದು ₹116 ತಲುಪಿದೆ. ಅದೇ ರೀತಿ 10ಗ್ರಾಂ ಬೆಳ್ಳಿಯ ಬೆಲೆ ₹1,160 ಮತ್ತು 1ಕೆಜಿ ಬೆಳ್ಳಿಯ ಬೆಲೆ ₹1,16,000 ಆಗಿದೆ.
ಇದನ್ನೂ ಓದಿ: Dharmasthala Case Update: ತಪ್ಪು ಮಾಹಿತಿ ಹಬ್ಬಿಸಿದ್ದ ಮಾಧ್ಯಮಗಳಿಗೆ SIT ಸ್ಪಷ್ಟನೆ
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಚಿನ್ನದ ಬೆಲೆ ಏರಿಳಿತಕ್ಕೆ ಹಲವು ಅಂಶಗಳು ಕಾರಣವಾಗಿವೆ. ಪ್ರಮುಖವಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರವಲ್ಲದ ವಾತಾವರಣ, ಅಮೇರಿಕಾದ ಡಾಲರ್ ಮೌಲ್ಯದಲ್ಲಿನ ಏರಿಳಿತಗಳು ಮತ್ತು ವಿವಿಧ ದೇಶಗಳ ಕೇಂದ್ರಿಯ ಬ್ಯಾಂಕುಗಳು ಚಿನ್ನವನ್ನು ಹೆಚ್ಚಾಗಿ ಖರೀದಿಸುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಇನ್ನು ಹಬ್ಬಗಳ ಸಮಯದಲ್ಲಿ ಭಾರತದಲ್ಲಿ ಚಿನ್ನದ ದರ ಹೆಚ್ಚಾಗುವುದೂ ಒಂದು ಪ್ರಮುಖ ಕಾರಣ. ಚಿನ್ನವನ್ನು ಹಣದುಬ್ಬರದ ವಿರುದ್ಧ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿರುವುದರಿಂದ, ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಈ ಎಲ್ಲಾ ಅಂಶಗಳು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಲು ಕಾಣವಾಗಿದೆ. ಮುಂದಿಮ ದಿನಗಳಲ್ಲಿ ದರಗಳು ಹೇಗೆ ಬದಲಾಗಬಹುದು ಎಂಬುದನ್ನು ಕಾದು ನೋಡಬೆಕಿದೆ.
