Post Office FD: ಸಾಮಾನ್ಯವಾಗಿ ನಮ್ಮ ಉಳಿತಾಯದ ಬಗ್ಗೆ ಮಾತಾಡುವಾಗ, ಫಿಕ್ಸೆಡ್ ಡೆಪಾಸಿಟ್ (FD) ಇಲ್ಲದೆ ಮಾತು ಮುಗಿಯೋದೇ ಇಲ್ಲ. ಯಾಕಂದ್ರೆ ಇದು ರಿಸ್ಕ್ ಇಲ್ಲದ, ಶುದ್ಧ ನಂಬಿಕೆ. ಅದರಲ್ಲೂ ಪೋಸ್ಟ್ ಆಫೀಸ್ (ಅಂಚೆ ಕಚೇರಿ) ಮೇಲಿರುವ ವಿಶ್ವಾಸ ಸೇರಿಕೊಂಡರೆ, ನಮ್ಮ ಮನೆಯ ಹಣಕಾಸು ಭದ್ರ ಎಂಬ ಧೈರ್ಯ ಬಂದುಬಿಡುತ್ತೆ. ಶೇರು ಮಾರುಕಟ್ಟೆ ಥರ ಇದು ಏರಿಳಿತ ಆಗಲ್ಲ, ಶಾಂತವಾಗಿ ಬೆಳೆಯುತ್ತಾ ಹೋಗುತ್ತೆ.
ಒಂದು ಸಣ್ಣ ಉದಾಹರಣೆ ತಗೊಳ್ಳಿ ನಿಮ್ಮ ಕಷ್ಟದ ದುಡಿಮೆಯ 7 ಲಕ್ಷ ಹಣವನ್ನು ನೀವು ಪೋಸ್ಟ್ ಆಫೀಸ್ FD(Post Office FD) ಯಲ್ಲಿ ಇಟ್ಟರೆ, 5 ವರ್ಷದ ನಂತರ ಮೆಚೂರಿಟಿ ಆಗುವಾಗ, ನಿಮ್ಮ ಕೈಗೆ ಬರುವುದು ಬರೋಬ್ಬರಿ 10,14,964! ಅಂದರೆ, ನೀವು ಯಾವ ತಲೆಬಿಸಿ ಇಲ್ಲದೆ, ಮೂರು ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದಂತೆ ಇದು ಹೇಗೆ ಸಾಧ್ಯ?
ಅಸಲು ಮತ್ತು ಬಡ್ಡಿ ಜೊತೆ ಸೇರಿ ಬೆಳೆಯುವ ಕಥೆ!
ಒಂದು FD ಅಂದರೆ, ನೀವು ಅಂಚೆ ಕಚೇರಿಗೆ ನಿಮ್ಮ ಹಣವನ್ನು ನಿರ್ದಿಷ್ಟ ಸಮಯದವರೆಗೆ ಭದ್ರವಾಗಿ ಇರಲಿ ಅಂತ ಕೊಡುವ ಒಂದು ಭರವಸೆ. ಅದಕ್ಕೆ ಅವರು ಖಾತರಿಪಡಿಸಿದ ಬಡ್ಡಿ ಕೊಡುತ್ತಾರೆ.
ಇಲ್ಲಿ ಮ್ಯಾಜಿಕ್ ಇರುವುದು ಬಡ್ಡಿಯ ಲೆಕ್ಕಾಚಾರದಲ್ಲಿ,
ಪೋಸ್ಟ್ ಆಫೀಸ್, 5 ವರ್ಷಗಳ FD ಗಳಿಗೆ ವಾರ್ಷಿಕ 7,5% ಬಡ್ಡಿ ದರ ತೊಡುತ್ತಿದೆ ಆದರೆ ಈ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕ ಹಾಕಿ ನಿಮ್ಮ ಅಸಲಿಗೆ ಸೇರಿಸುತ್ತಾ ಹೋಗುತ್ತಾರೆ. ಇದನ್ನೇ ಚಕ್ರಬಡ್ಡಿ (Compounding) ಅಂತಾರೆ. ಇದರಿಂದ ನಿಮ್ಮ ಅಸಲು ಮಾತ್ರವಲ್ಲ, ಆ ಬಡ್ಡಿಯೂ ಸಹ ಮತ್ತಷ್ಟು ಬಡ್ಡಿಯನ್ನು ಸಂಪಾದಿಸುತ್ತಾ ಹೋಗುತ್ತದೆ. ಹೀಗಾಗಿ, ₹7 ಲಕ್ಷದ ಮೊತ್ತ ಕೊನೆಗೆ 10,14,964 ಆಗಿಬಿಡುತ್ತದೆ!
ಮನೆಯ ಉಳಿತಾಯಕ್ಕೆ ಪೋಸ್ಟ್ ಆಫೀಸ್ ಏಕೆ ಬೇಕು?
ನಮಗೆ ತಿಳಿದಿರುವ ಹಾಗೆ, FD ಗಳು ನಿಶ್ಚಿತತೆ ಕೊಡುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಉಳಿಸುವ ಪೋಷಕರು, ಮನೆ ಕಟ್ಟಲು ಪ್ಲಾನ್ ಮಾಡುವ ದಂಪತಿ ಅಥವಾ ನಿವೃತ್ತಿಯ ನಂತರ ಭದ್ರವಾದ ಆದಾಯ ಬಯಸುವ ಹಿರಿಯ ನಾಗರಿಕರು-ಇವರೆಲ್ಲರಿಗೂ ಇದು ಬೆಸ್ಟ್!
ಷೇರು ಮಾರುಕಟ್ಟೆಯಲ್ಲಿ ನಿತ್ಯದ ಆತಂಕ ಇದ್ದೇ ಇರುತ್ತೆ ಆದರೆ, ಇಲ್ಲಿ ನೀವು ಮೊದಲೇ ಲೆಕ್ಕ ಹಾಕಬಹುದು. ಐದು ವರ್ಷದ ನಂತರ ನಿಮ್ಮ ಕೈಗೆ ಎಷ್ಟೇ ಬಂದೇ ಬರುತ್ತೆ ಅಂತ!. ಇದು ಹೇಗೆ ಅಂದರೆ, ನೀವು ನಿಮ್ಮ ಹೊಲದ ಕಟಾವಿನ ಬೀಜವನ್ನು ತೆಗೆದುಕೊಂಡು ಹೋಗಿ ಸರ್ಕಾರದ ಗೋದಾಮಿನಲ್ಲಿ ಸುರಕ್ಷಿತವಾಗಿ ಇಟ್ಟಂತೆ ವರ್ಷಗಳ ನಂತರ ನೀವು ಹಿಂದಿರುಗಿದಾಗ, ನಿಮ್ಮ ಬೀಜ ಹಾಳಾಗಿಯೂ ಇಲ್ಲ, ಜೊತೆಗೆ ಬೆಳೆಯೂ ಹೆಚ್ಚಾಗಿದೆ! ಅದೇ ಪೋಸ್ಟ್ ಆಫೀಸ್ FD ಯ ಶಕ್ತಿ. ಇದು ನಮ್ಮ ಉಳಿತಾಯ ಬೆಳೆಯಲು ಇರುವ ಅತ್ಯಂತ ಸರಳ, ಸುರಕ್ಷಿತ ಮತ್ತು ಭರವಸೆಯ ಮಾರ್ಗ!
ವಿಸೂ: ಈ ಮೇಲಿನ ಲೇಖನವು ಸಾಮಾನ್ಯ ಜ್ಞಾನದ ಉದ್ದೇಶಕ್ಕೆ ಮಾತ್ರ. ಒಂದು ವೇಳೆ ಸರ್ಕಾರ ಮುಂದಿನ ದಿನಗಳಲ್ಲಿ ಈ ಬಡ್ಡಿ ದರದಲ್ಲಿ ಏರಿಳಿತಗಳನ್ನು ಮಾಡಬಹುದು. ಅಧಿಕೃತ ಮಾಹಿತಿಗಾಗಿ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.
