Chandra Grahana 2025: “ಕತ್ತಲನು ಹರಿಸಿ ಬೆಳಕ ತರುವ ಸೂರ್ಯ, ಸೃಷ್ಟಿಗೆ ಚೈತನ್ಯ ನೀಡುವ ಚಂದ್ರ, ಇವರಿಬ್ಬರ ಸಮ್ಮಿಲನದಲ್ಲಿ ನಡೆಯುವ ವಿಶಿಷ್ಟ ಲೀಲೆಯೇ ಗ್ರಹಣ. ಭೂಮಿಯ ಆಯಾಮದಲಿ ಚಂದ್ರನು ಅರಗಿ, ರಕ್ತಚಂದಿರನಾಗಿ ಗೋಚರಿಸುವ ಈ ಕ್ಷಣ, ಕೇವಲ ಖಗೋಳ ಘಟನೆಯಲ್ಲ, ಅದು ನಮ್ಮ ಅಂತರಾತ್ಮವನ್ನು ಪ್ರಭಾವಿಸುವ ದೈವಿಕ ಸಂಕೇತ. 2025ರ ಸೆಪ್ಟೆಂಬರ್ 7ರಂದು ಬರಲಿರುವ ಈ ಚಂದ್ರ ಗ್ರಹಣ,(Chandra Grahana 2025) ನಮಗೆ ಆಧ್ಯಾತ್ಮಿಕ ಜಾಗೃತಿಯನ್ನು ತರಲು ಬಂದಿದೆಯೇ? ಮನಸ್ಸು, ದೇಹ, ಆತ್ಮದ ಮೇಲೆ ಇದರ ಪರಿಣಾಮವೇನು? ಬನ್ನಿ, ಈ ಪವಿತ್ರ ಗ್ರಹಣದ ರಹಸ್ಯಗಳನ್ನು ತಿಳಿಯೋಣ.”
2025ರ ಸೆಪ್ಟೆಂಬರ್ 7ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ(Chandra Grahana 2025). ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಈ ಖಗೋಳ ವಿದ್ಯಮಾನ ರಾತ್ರಿ 9:56ರಿಂದ 1:26ರವರೆಗೆ ಇರುತ್ತದೆ. ಜ್ಯೋತಿಷ್ಯದ ಪ್ರಕಾರ, ಚಂದ್ರಗ್ರಹಣವು ನಮ್ಮ ಮನಸ್ಸು, ಭಾವನೆಗಳು, ವೃತ್ತಿ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಪರಿಣಾಮ ಪ್ರತಿಯೊಬ್ಬರ ಮೇಲೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಶುಭವಾಗಿದ್ದರೆ, ಇನ್ನು ಕೆಲವರಿಗೆ ಮಿಶ್ರ ಫಲಿತಾಂಶಗಳು ಸಿಗಬಹುದು. ಈ ಹಿನ್ನೆಲೆಯಲ್ಲಿ, ಗ್ರಹಣದ ಪ್ರಭಾವ ಮತ್ತು ಅದನ್ನು ಎದುರಿಸಲು ನಾವು ಮಾಡಬಹುದಾದ ಉಪಾಯಗಳ ಬಗ್ಗೆ ತಿಳಿಯೋಣ.
ಇದನ್ನೂ ಓದಿ: Trump and Modi Relationship: ಟ್ರಂಪ್ ಮತ್ತು ಮೋದಿ ನಡುವಿನ ಸ್ನೇಹ ಮುಗಿದಿದೆ, ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ
ಚಂದ್ರ ಗ್ರಹಣವೆಂದರೆ(Chandra Grahana 2025 ), ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಒಂದು ಖಗೋಳ ಘಟನೆ. ಆಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಪರಿಣಾಮವಾಗಿ, ಚಂದ್ರನು ಪೂರ್ಣವಾಗಿ ಅಥವಾ ಭಾಗಶಃ ಕಾಣಿಸದೆ ಹೋಗಬಹುದು, ಇಲ್ಲವೇ ಕೆಂಪು ಬಣ್ಣದಲ್ಲಿ ಗೋಚರಿಸಬಹುದು.
ಜ್ಯೋತಿಷ್ಯದಲ್ಲಿ ಚಂದ್ರನನ್ನು ಮನಸ್ಸು, ಭಾವನೆ, ಶಾಂತಿ ಮತ್ತು ತಾಯಿಯ ಸಂಕೇತವೆಂದು ಹೇಳಲಾಗಿದೆ. ಹಾಗಾಗಿ, ಗ್ರಹಣದ ಸಮಯದಲ್ಲಿ ಈ ಅಂಶಗಳ ಮೇಲೆ ಪರಿಣಾಮ ಬೀರಬಹುದು. 2025ರ ಈ ಗ್ರಹಣ(Chandra Grahana 2025) ಭಾರತ ಸೇರಿದಂತೆ ರಷ್ಮಾ, ಸಿಂಗಾಪುರ, ಮತ್ತು ಚೀನಾದಲ್ಲಿ ಕಾಣಿಸಿಕೊಳ್ಳಲಿದೆ.
ಗ್ರಹಣದ ಪರಿಣಾಮವು ನಿಮ್ಮ ರಾಶಿ, ನಕ್ಷತ್ರ ಮತ್ತು ಜಾತಕದಲ್ಲಿ ಚಂದ್ರನ ಸ್ಥಾನದ ಮೇಲೆ ಅವಲಂಬಿಸಿರುತ್ತದೆ. ಗ್ರಹಣ ಯಾವ ರಾಶಿಯಲ್ಲಿ ನಡೆಯುತ್ತದೆಯೋ, ಆ ರಾಶಿಯವರ ಮೇಲೆ ಅದರ ಪುಭಾವ ಹೆಚ್ಚಿರುತ್ತದೆ. ಜೊತೆಗೆ ಜಾತಕದಲ್ಲಿ ಚಂದ್ರನು ಯಾವ ಮನೆಯಲ್ಲಿದ್ದಾನೆ ಎಂಬುದರ ಆಧಾರದ ಮೇಲೆ, ವೃತ್ತಿ, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಗ್ರಹಣದ(Grahana) ಸಮಯದಲ್ಲಿ ಹಲವರು ಮಾನಸಿಕ ಗೊಂದಲ ಮತ್ತು ಆತಂಕವನ್ನು ಅನುಭವಿಸಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಜೀರ್ಣಕ್ರಿಯೆ ಸಮಸ್ಯೆಗಳು, ನಿದ್ರಾಹೀನತೆ ಮತ್ತು ತಲೆನೋವು ಕೆಲವರಲ್ಲಿ ಕಾಣಿಸಿಕೊಳ್ಳಬಹುದು.
ಈ ಮಂತ್ರಗಳನ್ನು ಪಠಿಸಿ
ಕುಟುಂಬ ಅಥವಾ ವೃತ್ತಿಪರ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಈ ಸಮಯದಲ್ಲಿ ‘ಓಂ ನಮ: ಶಿವಾಯ'(Om Namah Shivaya) ಅಥವಾ ‘ಗಾಯತ್ರಿ ಮಂತ್ರ’ದಂತಹ(Gayatri Mantra) ಮಂತ್ರಗಳನ್ನು ಪಠಿಸುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಗ್ರಹಣ ಆರಂಭವಾಗುವ ಮೊದಲು ಅಥವಾ ಮುಗಿದ ನಂತರ ಮಾತ್ರ ಆಹಾರ ಸೇವಿಸುವುದು ಉತ್ತಮ.
ಮಾನಸಿಕ ಶಾಂತಿ ಪಡೆಯಲು ಧ್ಯಾನ ಅಥವಾ ದೇವರ ಪ್ರಾರ್ಥನೆ ಮಾಡುವುದು ಒಳ್ಳೆಯದು. ಗ್ರಹಣ ಮುಗಿದ ಮೇಲೆ ಶುದ್ಧ ನೀರಿನಲ್ಲಿ ಸ್ನಾನ ಮಾಡಿ, ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಶುಭ. ಗರ್ಭಿಣಿಯರು(Pregnant Women)ಗ್ರಹಣದ ಅವಧಿಯಲ್ಲಿ ಮನೆಯಿಂದ ಹೊರಗೆ ಹೋಗದ ವಿಶ್ರಾಂತಿ ಪಡೆಯಬೇಕು. ಆಹಾರ, ಬಟ್ಟೆ ಅಥವಾ ಹಣವನ್ನು ದಾನ ಮಾಡುವುದರಿಂದ ಗ್ರಹಣದ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
ಶ್ರೀಧರ್ ಶಾಸ್ತ್ರಿ
ತುಮಕೂರು
