Lucky Zodiac Signs: ಪ್ರತಿಯೊಬ್ಬರಿಗೂ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ(Lakshmi Devi) ಅನುಗ್ರಹ ಅತ್ಯಗತ್ಯ. ಮನುಷ್ಯನ ಗುಣ ಸ್ವಭಾವಗಳು ಸರಿ ಇದ್ದರೆ ಲಕ್ಷ್ಮೀ ಕಟಾಕ್ಷ ಒಲಿಯುತ್ತದೆ ಎಂಬುದು ಶಾಸ್ತ್ರೋಕ್ತ ನಂಬಿಕೆ. ದೀಪಾವಳಿ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷ್ಮಿ ಪೂಜೆ, ವ್ರತ ನೇಮಗಳನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳು ಲಕ್ಷ್ಮೀದೇವಿಗೆ ಅಚ್ಚುಮೆಚ್ಚಿನವಾಗಿದ್ದು, ಆ ರಾಶಿಯವರ ಮೇಲೆ ಆಕೆ ವಿಶೇಷ ಅನುಗ್ರಹ ತೋರುತ್ತಾಳೆ. ಅವುಗಳು ಯಾವುವು ಗೊತ್ತಾ?
ಆದರೆ ಈ ರಾಶಿಗಳು ಲಕ್ಷ್ಮಿ ದೇವಿಯನ್ನು ತಮ್ಮಲ್ಲಿ ಸ್ಥಿರವಾಗಿಟ್ಟುಕೊಳ್ಳಲು, ತಮ್ಮ ಅಧಿಪತಿ ಗ್ರಹಗಳಿಗೆ ಅನುಗುಣವಾಗಿ ಕೆಲವೊಂದು ನಿರ್ದಿಷ್ಟ ಪರಿಹಾರಗಳನ್ನು ಅನುಸರಿಸುವುದು ಕಡ್ಡಾಯ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.(Lucky Zodiac Signs) ಲಕ್ಷ್ಮೀದೇವಿ ಇಷ್ಟಪಡುವ ಮತ್ತು ಆರ್ಥಿಕವಾಗಿ ಬಲವಾಗಿರುವ ಆ ಐದು ರಾಶಿಗಳು ಮತ್ತು ಅವುಗಳು ಪಾಲಿಸಬೇಕಾದ ನಿಯಮಗಳು ಇಲ್ಲಿವೆ.
- ವೃಷಭ ಮತ್ತು ತುಲಾ ರಾಶಿ (ಅಧಿಪತಿ: ಶುಕ್ರ)(Taurus)
ಈ ಎರಡೂ ರಾಶಿಗಳ ಅಧಿಪತಿ ಶುಕ್ರನಾಗಿದ್ದಾನೆ. ಶುಕ್ರ ಗ್ರಹವು ಸ್ವತಃ ಸಂಪತ್ತು, ಐಶ್ವರ್ಯ ಮತ್ತು ವಿಲಾಸಿ ಜೀವನವನ್ನು ಸೂಚಿಸುವುದರಿಂದ, ಈ ರಾಶಿಯವರಿಗೆ ಸ್ವಾಭಾವಿಕವಾಗಿ ಹಣದ ಕೊರತೆ ಇರುವುದಿಲ್ಲ. ಇವರು ಸೌಭಾಗ್ಯವಂತರಾಗಿ ಐಷಾರಾಮಿ ಜೀವನ ನಡೆಸುವ ಯೋಗ ಹೊಂದಿರುತ್ತಾರೆ.
ಪರಿಹಾರ: ಶುಕ್ರನಿಂದ ನಿರಂತರ ಕೃಪೆ ಪಡೆಯಲು, ಇವರು ಪ್ರತಿ ಶುಕ್ರವಾರದಂದು ಲಕ್ಷ್ಮೀ ದೇವಿ ಮತ್ತು ಶುಕ್ರನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಪೂಜೆ ವೇಳೆ ‘ಓಂ ಶುಕ್ರಾಯ ನಮಃ’ ಮಂತ್ರವನ್ನು ಜಪಿಸಿ ಶ್ರೀ ಸ್ತೋತ್ರವನ್ನು ಪಟಿಸುವುದು ಅತ್ಯಂತ ಶುಭ. ಬಡವರಿಗೆ ಬಿಳಿಯ ಬಟ್ಟೆ, ಹಾಲು, ಅಕ್ಕಿ ಅಥವಾ ಸಕ್ಕರೆಯನ್ನು ದಾನ ಮಾಡುವುದರಿಂದ ಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ.
- ಕರ್ಕಾಟಕ ರಾಶಿ (ಅಧಿಪತಿ: ಚಂದ್ರ)(Cancer)
ಈ ರಾಶಿಗೆ ಅಧಿಪತಿ ಚಂದ್ರನಾಗಿದ್ದು, ಲಕ್ಷ್ಮೀದೇವಿಯ ಕೃಪೆಯಿಂದ ಈ ರಾಶಿಯವರ ಮನೆಗಳಲ್ಲಿ ಸಿರಿ ಸಂಪತ್ತು ವ್ಯದ್ಧಿಯಾಗುತ್ತದೆ. ಆರ್ಥಿಕವಾಗಿ ಇವರು ಬಲಿಷ್ಠರಾಗಿರುತ್ತಾರೆ.
ಪರಿಹಾರ: ಈ ರಾಶಿಯವರು ಪ್ರತಿ ಸೋಮವಾರದಂದು ಅಥವಾ ಹುಣ್ಣಿಮೆಯ ದಿನದಂದು ಲಕ್ಷ್ಮೀದೇವಿ ಜೊತೆಗೆ ಶಿವನ ಆರಾದನೆ ಮಾಡಬೇಕು ಮನೆಯ ಆಗ್ನೇಯ ಮೂಲೆಯನ್ನು (South-East) ಯಾವಾಗಲೂ ಶುಭ್ರವಾಗಿ ಮತ್ತು ಸ್ವಚ್ಛವಾಗಿ ನಿರ್ವಹಣೆ ಮಾಡಬೇಕು. ನಿರ್ಗತಿಕರಿಗೆ ಹಾಲು, ಅಕ್ಕಿ ಅಥವಾ ಸಕ್ಕರೆಯನ್ನು ದಾನ ಮಾಡುವುದರಿಂದ ಹಣಕಾಸಿನ ಇಕ್ಕಟ್ಟುಗಳು ನಿವಾರಣೆಯಾಗುತ್ತವೆ.
- ಸಿಂಹ ರಾಶಿ (ಅಧಿಪತಿ: ಸೂರ್ಯ)(Leo)
ಸೂರ್ಯನನ್ನು ಅಧಿಪತಿಯಾಗಿ ಹೊಂದಿರುವ ಸಿಂಹ ರಾಶಿಯವರು, ಲಕ್ಷ್ಮೀ ಆಶೀರ್ವಾದದ ಜೊತೆಗೆ ತಮ್ಮ ದೃಢ ಸಂಕಲ್ಪ ಮತ್ತು ಪಟ್ಟು ಹಿಡಿದು ಮಾಡುವ ಕಠಿಣ ಪರಿಶ್ರಮದಿಂದಲೇ ಆರ್ಥಿಕ ಸ್ಥಿರತೆ ಸಾಧಿಸಿ ಜೀವನದಲ್ಲಿ ಉನ್ನತ ಯಶಸ್ಸು ಗಳಿಸುತ್ತಾರೆ.
ಪರಿಹಾರ: ಇವರು ಪ್ರತಿದಿನ ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡಿ, ಸೂರ್ಯನಿಗೆ ಅರ್ಥ್ಯವನ್ನು ಸಮರ್ಪಿಸಬೇಕು. ಇದು ಅವರ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಪ್ರತಿದಿನ ಹಸುವಿನ ತುಪ್ಪದ ದೀಪವನ್ನು ಹಚ್ಚುವುದು ಮಂಗಳಕರ ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ ವಡೆಯುವುದರಿಂದ ಶುಭಫಲ ದ್ವಿಗುಣವಾಗುತ್ತದೆ.
- ವ್ಯಶ್ಚಿಕ ರಾಶಿ (ಅಧಿಪತಿ: ಕುಜ)(Scorpio)
ಈ ರಾಶಿಗೆ ಅಧಿಪತಿ ಕುಜ (ಮಂಗಳ) ಗ್ರಹ ಲಕ್ಷ್ಮೀದೇವಿಯ ವಿಶೇಷ ಕೃಪಾಕಟಾಕ್ಷದಿಂದ ವ್ಯಶ್ಚಿಕ ರಾಶಿಯವರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ನಾನಕ್ಕೆ ಏರಿ ಆರ್ಥಿಕವಾಗಿ ಬಲಗೊಳ್ಳುತ್ತಾರೆ
ಪರಿಹಾರ: ಈ ರಾಶಿಯವರು ಪ್ರತಿ ಮಂಗಳವಾರದಂದು ಅಂಜನೇಯ ಸ್ವಾಮಿ ಮತ್ತು ದುರ್ಗಾದೇವಿಯನ್ನು ಆರಾಧಿಸುವುದರಿಂದ ಆರ್ಥಿಕ ಸ್ಥಿರತೆ ಹಾಗೂ ಧೈರ್ಯ ವ್ಯದ್ಧಿಯಾಗುತ್ತದೆ. ಮನೆಯಲ್ಲಿ ಕುಬೇರ ಯಂತ್ರ ಅಥವಾ ಲಕ್ಷ್ಮೀದೇವಿ ವಿಗ್ರಹವನ್ನು ಸ್ಥಾಪಿಸಿ ಪ್ರತಿದಿನ ಪೂಜೆ ಮಾಡುವುದು ಶುಭಕರ.
~ಶ್ರೀಧರ್ ಶಾಸ್ತ್ರಿ, ತುಮಕೂರು
