Love Story: ಬರೆವ ಪದಗಳೇನು ಹೊಸದಲ್ಲ, ಬಳಸುವ ಅಕ್ಷರಗಳೇನು ನನದಲ್ಲ, ಆದರೆ ಪದಗಳಲಿರುವ ಭಾವ ಹೊಸದು. ಆ ಭಾವನೆಯಲಿಹ ಜೀವ ನಿನ್ನದು ಬರಿ ನಿನ್ನೊಬ್ಬಳದು.
ಅವನ ಹೆಸರು ಆದಿತ್ಯ. ಕವಿತೆ ಬರೆಯುತ್ತಿದ್ದಾನೆ ಎಂಬುದನ್ನು ಅವನು ಯಾರಿಗೂ ಹೇಳಿರಲಿಲ್ಲ.
ಅವನ ದಿನಚರಿಯಲ್ಲಿ ಪೆನ್, ಕಾಫಿ ಮತ್ತು ನೋಟಬುಕ್ ಅಷ್ಟೇ ಇದ್ದವು. ಆದರೆ ಆ ಖಾಲಿ ಪುಟಗಳಲ್ಲಿ ಬರೆದಿದ್ದದ್ದು ಕೇವಲ ಪದಗಳಲ್ಲ, ಆತ್ಮದ ನೆನಪುಗಳು, ನಗುವಿನ ಮೌನ, ಮತ್ತು ಅವಳ ಹೆಸರಿನ ಮೊದಲ ಅಕ್ಷರ.
ಇದನ್ನೂ ಓದಿ : Lucky Zodiac Signs: ಲಕ್ಷ್ಮೀ ಕೃಪಾಕಟಾಕ್ಷ – ಈ ರಾಶಿಯವರಿಗೆ ಹಣದ ಯೋಗ! ; ಐಶ್ವರ್ಯ ವೃದ್ಧಿಗೆ ಏನು ಮಾಡಬೇಕು?
ಅವಳ ಹೆಸರು ಅನನ್ಯಾ.
ಕಾಲೇಜಿನ ಮೊದಲ ದಿನದಲ್ಲೇ ಅವಳು ನಗಿದ್ದಾಗ,
ಆ ನಗುವಿನಲ್ಲಿ ಯಾವ ಶಬ್ದವೂ ಇರಲಿಲ್ಲ, ಆದರೆ ಒಂದು ಮೌನ ಕವನ ಇತ್ತು. ಅದು ಆದಿತ್ಯನ ಮನಸ್ಸಿನಲ್ಲಿ ಬರೆದ ಮೊದಲ ಸಾಲು. “ನೋಡುವ ಕಣ್ಣುಗಳು ಮಾತಾಡುತ್ತವೆ, ಆದರೆ ಕೇಳುವ ಹೃದಯ ಮಾತ್ರ ಅರ್ಥ ಮಾಡಿಕೊಳ್ಳುತ್ತದೆ.”
ಆ ದಿನದಿಂದ ಅವನ ಪ್ರಪಂಚ ಬದಲಾಗಿದೆ.
ಹಳೇ ಹಾಡುಗಳು ಹೊಸದಾಗಿ ಕೇಳಿಸಿದವು.
ಸೂರ್ಯೋದಯದ ಬಣ್ಣದಲ್ಲಿ ಅವಳ ಮುಖ ಕಂಡಂತೆ ಆಯಿತು. ಅವನ ಕವಿತೆಗಳಲ್ಲಿ ಹೊಸ ಶಬ್ದ ಹುಟ್ಟಿತು ಅವಳು.
ಒಮ್ಮೆ ಕಾಲೇಜು ವಾರ್ಷಿಕೋತ್ಸವದ ದಿನ.
ಅವನಿಗೆ ಕವಿತೆ ಓದಬೇಕೆಂಬ ಅವಕಾಶ ಬಂದಿತ್ತು.
ಹೆಜ್ಜೆಗಿಂತ ಮುಂಚೆ ನಡುಕ ಹೆಚ್ಚು. ಮೈಕ್ ಮುಂದೆ ನಿಂತಾಗ, ಬೆಳಕಿನ ಮಧ್ಯೆ ಅವಳ ಮುಖ ಮಾತ್ರ ಕಂಡಿತು. ಅವಳು ಮೊದಲ ಸಾಲು ಕೇಳುತ್ತಿದ್ದಳು.
“ಬರೆವ ಪದಗಳೇನು ಹೊಸದಲ್ಲ, ಬಳಸುವ ಅಕ್ಷರಗಳೇನು ನನದಲ್ಲ,
ಆದರೆ ಪದಗಳಲಿರುವ ಭಾವ ಹೊಸದು.
ಆ ಕ್ಷಣದಲ್ಲಿ ಅವನು ಅವಳ ಕಣ್ಣಲ್ಲಿ ಒಂದು ಬೆಳಕು ಕಂಡನು. ಅದು ಮೆಚ್ಚುಗೆಯಾ? ಅಥವಾ ಆಳದ ಬಾಳಿಕೆಯ ಗುರುತು? ಅವನಿಗೆ ಗೊತ್ತಾಗಲಿಲ್ಲ, ಆದರೆ ಆ ದಿನದಿಂದ ಅವಳ ಹೆಸರು ಕವಿತೆಯ ಅಕ್ಷರಗಳಲ್ಲಿ ಹೂವಿನಂತೆ ಅರಳಿತು.
ದಿನಗಳು ಕಳೆಯುತ್ತಾ ಹೋದವು. ಸ್ನೇಹ ಎಂಬ ಹೆಸರಿನಲ್ಲಿ ಪ್ರೀತಿಯ ಮೊಳಕೆಗಳು ಮೂಡಿದವು. ಅನನ್ಯಾ ಅವನೊಂದಿಗೆ ಗ್ರಂಥಾಲಯದ ಶಾಂತಿಯಲ್ಲಿ ಕುಳಿತು ಪುಸ್ತಕ ಓದುತ್ತಿದ್ದಳು, ಆದಿತ್ಯ ಕಣ್ತುಂಬಾ ನೋಡುವುದನ್ನು ತಪ್ಪಿಸುತ್ತಿದ್ದ, ಆದರೆ ಅವಳ ನಗೆ ಅವನ ಹೃದಯದ ಪೇಜು ತಿರುಗಿಸುತ್ತಿತ್ತು.
ಒಂದು ಸಂಜೆ, ಮಳೆ ಬರುತಿದ್ದಾಗ, ಅವರು ಕಾಲೇಜು ಬಸ್ಸಿನಲ್ಲಿ ಮನೆಗೆ ಹೊರಟರು. ಕಿಟಕಿಯಾಚೆ ಹನಿ ಹನಿ ಬಡಿದಾಗ, ಅನನ್ಯಾ ಕೇಳಿದಳು.
“ನೀನು ಬರೆಯುವ ಕವಿತೆಗಳಲ್ಲಿ ಯಾರಿಗೋ ಹೃದಯ ಕೊಟ್ಟಂತೆ ಕಾಣುತ್ತೆ, ಯಾರಿಗಾಗಿ ಬರೆಯುತ್ತೀಯಾ?”
ಆದಿತ್ಯ ನಗೆ ಬಿಟ್ಟ. “ಪದಗಳು ಯಾರಿಗೋ ಹುಟ್ಟುತ್ತವೆ ಅನನ್ಯಾ. ಆದರೆ ಅವು ಯಾರಿಗೋ ತಲುಪಬೇಕೆಂಬ ಆಸೆ ಇರುತ್ತದೆ. ನನಗೆ ಅದು ತಲುಪಬೇಕೆಂಬ ಆಸೆ ಸಾಕು.”
ಅವಳು ಮೌನವಾಗಿ ನಕ್ಕಳು.
ಆ ನಗು ಅರ್ಥಮಾಡಿಕೊಳ್ಳುವ ನಗು.
ಕಾಲಹರಣವು ಸೌಮ್ಯವಾಗಿ ಇಬ್ಬರ ಹಾದಿಯಲ್ಲಿ ಬದಲಾವಣೆ ತಂದಿತು. ಅನನ್ಯಾ ಬೆಂಗಳೂರಿನಲ್ಲಿ ಉದ್ಯೋಗ ಪಡೆದಳು, ಆದಿತ್ಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಓದಲು ಮೈಸೂರು ಹೋಯಿತು. ಅವರು “ಸಂಪರ್ಕದಲ್ಲಿರೋಣ” ಎಂದು ಹೇಳಿಕೊಂಡರು. ಆದರೆ ಬದುಕಿನ ವೇಗದಲ್ಲಿ ಕೆಲವು ಸಂಪರ್ಕಗಳು ಹೃದಯದಲ್ಲೇ ಉಳಿಯುತ್ತವೆ,
ಫೋನ್ಗಳಲ್ಲಿ ಅಲ್ಲ.
ಆದಿತ್ಯ ಪ್ರತಿರಾತ್ರಿ ಅವಳಿಗೆ ಪತ್ರ ಬರೆದ.
ಆದರೆ ಒಂದನ್ನೂ ಕಳಿಸಲಿಲ್ಲ.
ಅವನು ನಂಬುತ್ತಿದ್ದ “ಪತ್ರ ಕಳಿಸದರೂ ಪ್ರೀತಿ ತಲುಪುತ್ತದೆ, ಅದರ ದಾರಿಯೇ ಬೇರೆ.”
ಅವಳು ಕೂಡ ಕೆಲವೊಮ್ಮೆ ಅವನ ಕವಿತೆಗಳನ್ನು ನೆನಪಿಸಿಕೊಂಡು ಬ್ಲಾಗ್ ಓದುತ್ತಿದ್ದಳು. ಅವನ ಕವನಗಳು ಬೆಳೆಯುತ್ತಿದ್ದವು, ಆದರೆ ಅದರಲ್ಲಿ ಹಳೆಯ ನಗು, ಮಳೆ, ಕಿಟಕಿಯ ಹನಿ ಎಲ್ಲವೂ ಅಡಗಿದ್ದವು. ಅವಳ ನೆನಪುಗಳಲ್ಲಿ ಮಾತ್ರ ಜೀವಂತವಾಗಿದ್ದ ಪ್ರೇಮ.
ಐದು ವರ್ಷಗಳ ನಂತರ.
ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ “ಯುವ ಕವಿ ಆದಿತ್ಯ” ಪ್ರಶಸ್ತಿ ಪಡೆದ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು.
ಶೀರ್ಷಿಕೆ — ‘ಅವನ ಕವಿತೆಗಳಲ್ಲಿ ಪ್ರೀತಿಯ ಮೌನ’.
ಅನನ್ಯಾ ಅದು ಓದಿ ಅಚ್ಚರಿಗೊಂಡಳು.
ಆ ರಾತ್ರಿ ಅವಳ ಕಣ್ಣೀರು ಪತ್ರಿಕೆಯ ಮೇಲೆ ಬಿತ್ತು.
ಅವಳು ಯೋಚಿಸಿದಳು. “ನನ್ನಿಂದ ದೂರ ಹೋದವನು ಕವಿಯಾಗಿದ್ದಾನೆ. ಆದರೆ ಅವನ ಕವಿತೆಗಳಲ್ಲಿ ಇನ್ನೂ ನನ್ನ ಶಬ್ದವಿದೆಯೇ?”
ಅವಳು ತೀರ್ಮಾನಿಸಿದಳು, ಮೈಸೂರಿಗೆ ಹೋಗಿ ಅವನನ್ನು ಭೇಟಿಯಾಗಬೇಕೆಂದು. ಸಮ್ಮೇಳನದ ಹಾಲ್ನಲ್ಲಿ ಜನಸಾಗರ. ಆದಿತ್ಯ ವೇದಿಕೆಯಲ್ಲಿ ನಿಂತಿದ್ದ.
ಅವನ ಕೈಯಲ್ಲಿ ಹಳೆಯ ನೋಟಬುಕ್, ಅದೇ ಪತ್ರಗಳು, ಅವಳಿಗೆ ಬರೆಯಲ್ಪಟ್ಟವು.
ಅವನು ಓದುತಿದ್ದ ಕವಿತೆಯ ಕೊನೆಯ ಸಾಲು ಕೇಳಿದಾಗ, ಅನನ್ಯಾ ಕಣ್ಣೀರು ತಡೆದಳು.
“ಆ ಭಾವನೆಯಲಿಹ ಜೀವ ನಿನದು, ಬರಿ ನಿನ್ನೊಬ್ಬಳದು…” ಅವನ ಕಣ್ಣಿನಲ್ಲಿ ಆಕೆಯ ಮುಖ ಕಂಡಾಗ, ಕಾಲ ನಿಂತಂತಾಯಿತು. ಜನರ ಮಧ್ಯೆ ನಿಂತಿದ್ದ ಆಕೆಯ ಕಣ್ಣುಗಳಲ್ಲಿ ಹಳೆಯ ಮಳೆ ಹನಿಯ ಸ್ಮೃತಿಗಳು.
ಒಂದು ಕ್ಷಣ, ನೋಟಗಳು ಮತ್ತೆ ಕವಿತೆಯಾದವು.
ವೇದಿಕೆಯಿಂದ ಇಳಿದು ಅವನು ನಿಧಾನವಾಗಿ ಅವಳ ಕಡೆ ಬಂದು ನಿಂತ. ಮೌನ, ಎರಡು ಹೃದಯಗಳು ಮಾತಾಡಿದವು, ಆದರೆ ಶಬ್ದಗಳಿಲ್ಲ.
ಅವಳು ಹೇಳಿದಳು, “ನೀನು ಇನ್ನೂ ಹಳೆಯ ಶಬ್ದಗಳನ್ನೇ ಬಳಸುತ್ತೀಯಾ?” ಅವನು ನಗುತ್ತ ಹೇಳಿದ —“ಹೌದು… ಆದರೆ ಅವುಗಳಲ್ಲಿ ಇರುವ ಭಾವ ಹೊಸದು. ಆ ಭಾವನೆಯಲಿಹ ಜೀವ ನಿನ್ನದು.”
ಅವಳು ನಗುತ ಅತ್ತಳು. ಅವನ ಕೈಯಲ್ಲಿ ಆ ನೋಟಬುಕ್ ಕೊಟ್ಟಳು. “ಇನ್ನು ಇವುಗಳನ್ನು ನಿನ್ನಷ್ಟೇ ಓದುವ ಹಕ್ಕಿಲ್ಲ. ನನಗೂ ಇದೆ.” ಅವನು ನೋಟಬುಕ್ ತೆರೆಯುತ್ತ ಹೇಳಿದ “ನೀನು ಓದುತ್ತೀಯಾ? ಆಗ ಪ್ರತಿ ಪದ ಜೀವಂತವಾಗುತ್ತದೆ.”
ಹೌದು, ಅವರು ಮತ್ತೆ ಭೇಟಿಯಾದರು.
ಆದರೆ ಪ್ರೀತಿ ಅವರಿಗೆ ಈಗ childish attraction ಅಲ್ಲ .ಅದು ನೆನಪಿನಿಂದ ರೂಪುಗೊಂಡ ಬಾಂಧವ್ಯ.(Love Story) ಅವರು ದಿನನಿತ್ಯದ ಬದುಕಿನಲ್ಲಿ ಪ್ರೀತಿಯನ್ನು ಹುಡುಕಿದರು ಕಾಫಿಯ ಸುವಾಸನೆ, ಬೆಳಗಿನ ನಗು, ಒಂದು ಪತ್ರದ ಶಬ್ದ, ಮತ್ತು ಮೌನದ ನಡುವೆ ಉಸಿರಾಡುವ ಅರ್ಥ.
ಅವಳ ಕಣ್ಣಲ್ಲಿ ಈಗ ಕನಸುಗಳಿಲ್ಲ, ವಿಶ್ವಾಸವಿತ್ತು.
ಅವನ ಕವಿತೆಗಳಲ್ಲಿ ಈಗ ನೋವು ಇಲ್ಲ, ಸಮಾಧಾನವಿತ್ತು. ಅವರು ಪ್ರೀತಿಯ ಹೊಸ ವ್ಯಾಖ್ಯಾನ ಕಂಡರು. “ಪ್ರೀತಿ ಎಂದರೆ, ಯಾರನ್ನಾದರೂ ಅರ್ಥಮಾಡಿಕೊಳ್ಳುವುದು, ಅವರಿಲ್ಲದಾಗಲೂ ಅವರ ಶಬ್ದ ಕೇಳುವುದು.”
ಒಂದು ಸಂಜೆ, ಅವರು ಮೈಸೂರಿನ ಕಾವೇರಿ ತೀರದಲ್ಲಿ ಕುಳಿತಿದ್ದರು. ಮೆತ್ತಗಿನ ಗಾಳಿ, ಆಕಾಶದಲ್ಲಿ ಕಿತ್ತಳೆ ಬಣ್ಣ.
ಅವಳು ಕೇಳಿದಳು, “ನೀನು ಮತ್ತೆ ನನಗೆ ಕವಿತೆ ಬರೆದರೆ ಹೇಗಿರುತ್ತದೆ?”
ಅವನು ಹೇಳಿದ “ನಾನು ಬರೆದರೆ ಅದು ಹೊಸ ಪದಗಳಾಗುವುದಿಲ್ಲ. ಆದರೆ ಭಾವ ಹೊಸದಾಗಿರುತ್ತದೆ.
ಹೌದು, ಬರೆವ ಪದಗಳೇನು ಹೊಸದಲ್ಲ, ಬಳಸುವ ಅಕ್ಷರಗಳೇನು ನನದಲ್ಲ, ಆದರೆ ಪದಗಳಲಿರುವ ಭಾವ ಹೊಸದು. ಆ ಭಾವನೆಯಲಿಹ ಜೀವ ನಿನದು ಬರಿ ನಿನ್ನೊಬ್ಬಳದು.”
ಅವಳು ಅವನ ಕೈ ಹಿಡಿದು ನಕ್ಕಳು. ಆ ಕ್ಷಣದಲ್ಲಿ ಕಾವೇರಿ ನದಿಯ ಹನಿ ಅವರ ಪಾದದ ಬಳಿ ಬಿತ್ತು. ಮೌನವು ಕವನದ ಕೊನೆಯ ಸಾಲಾಗಿ ಉಳಿಯಿತು.
ವರ್ಷಗಳ ನಂತರ, ಅನನ್ಯಾ ಒಂದು ದಿನ ಆದಿತ್ಯನ ಪುಸ್ತಕ ತೆರೆದಳು — “ಪದಗಳಾಚೆ ನಿನ್ನ ಶಬ್ದ”. ಪುಸ್ತಕದ ಮೊದಲ ಪುಟದಲ್ಲಿ ಬರೆಯಲ್ಪಟ್ಟಿತ್ತು “ಈ ಕೃತಿಯ ಪ್ರತಿ ಶಬ್ದದಲ್ಲೂ ಅವಳ ನಗು ಇದೆ. ಅವಳು ಓದುವಾಗ ಮಾತ್ರ ಈ ಕವಿತೆಗಳು ಜೀವಿಸುತ್ತವೆ.”
ಅವಳು ಕಣ್ಣುಮುಚ್ಚಿ ಆ ಶಬ್ದಗಳನ್ನು ಓದಿದಳು,
ಮತ್ತೆ ಒಂದು ಬಾರಿ ಅವನ ಶಬ್ದ ಹೃದಯದೊಳಗೆ ಕೇಳಿಸಿತು “ಆ ಭಾವನೆಯಲ್ಲಿಹ ಜೀವ ನಿನದು”
ಅವಳು ತಲೆಯೆತ್ತಿ ಆಕಾಶದತ್ತ ನಕ್ಕಳು. ಮೌನದಲ್ಲಿ ಪಾರಿವಾಳಗಳು ಹಾರಿದವು. ಅಲ್ಲಿ ಕವಿತೆ ಮುಗಿಯಲಿಲ್ಲ ಅದು ಬದುಕಿನಂತೆ ಮುಂದುವರಿಯಿತು.
ಪ್ರೀತಿ ಎಂದರೆ ಬರೆದ ಪದಗಳಲ್ಲ, ಅದು ನಿಶ್ಶಬ್ದದಲ್ಲೂ ಜೀವಿಸುವ ಒಂದು ಶಬ್ದ. ಆ ಶಬ್ದವೇ ನಿನ್ನದು.
ಅಂತ್ಯವಲ್ಲ, ಹೊಸ ಪ್ರಾರಂಭ.Love Story
~ ಲಿಖಿತ್ ಹೊನ್ನಾಪುರ
