ತ್ರಿಪುರಾ: ರಾಜ್ಯದ ಪಾಣಿಸಾಗರ್ ಪಟ್ಟಣದಲ್ಲಿ ನಡೆದ ಒಂದು ಅಮಾನವೀಯ ಕೃತ್ಯ ಇದೀಗ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಕೇವಲ 14 ತಿಂಗಳ ಹಸುಗೂಸಿನ ಮೇಲೆ ದಿನಗೂಲಿ ಕೆಲಸಗಾರನೊಬ್ಬ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ ಎಂಬ ದಾರುಣ ಆರೋಪ ಕೇಳಿಬಂದಿದೆ.(Child Rape Case) ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಕೋಪ ಭುಗಿಲೆದ್ದಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ವಿಹಾರದ ನೆಪದಲ್ಲಿ ತಾಯಿಯಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದ ಆರೋಪಿ
ಅಕ್ಟೋಬರ್ 11ರ ಶನಿವಾರ ಈ ಘಟನೆ ನಡೆದಿದ್ದು, ಆರೋಪಿ ಕುಟುಂಬದ ನೆರೆಹೊರೆಯವನಾಗಿದ್ದ. ಅಸ್ಸಾಂನ ಸಿಲ್ಮಾರ್ ಮೂಲದ ಮಗುವಿನ ಕುಟುಂಬ ಸಂಬಂಧಿಕರ ಮನೆಗೆ ಪಾಣಿಸಾಗರ್ಗೆ ಬಂದಿತ್ತು.
ತಾಯಿ ಮಗುವನ್ನು ಎತ್ತಿ ಆಡಿಸುತ್ತಿದ್ಯಾಗ, ಅಲ್ಲಿಗೆ ಬಂದ ಆರೋಪಿ, ಮಗುವನ್ನು ಹೊರಗೆ ವಿಹಾರಕ್ಕೆ ಕರೆದುಕೊಂಡು ಹೋಗಿ ಆಟ ಆಡಿಸಿ ತರುತ್ತೇನೆ” ಎಂದು ನೆಪ ಹೇಳಿ ತಾಯಿಯಿಂದ ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ. ಆದರೆ, ಸ್ವಲ್ಪ ಸಮಯದ ನಂತರ ಆತ ಮಗುವಿನ ಮೇಲೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿದ್ದಾನೆ ಎಂಬ ಭೀಕರ ಆರೋಪ ಕೇಳಿಬಂದಿದೆ.(Child Rape Case)
ಭತ್ತದ ಗದ್ದೆಯಲ್ಲಿ ಹೂತು ಹಾಕಿದ್ದ ಮಗುವಿನ ಶವ ಪತ್ತೆ!
ರಾತ್ರಿ 8 ಗಂಟೆಯಾದರೂ ಮಗು ಮರಳಿ ಕರೆ ತರದೆ ಇದ್ದಾಗ ಪೋಷಕರಿಗೆ ಆತಂಕ ಶುರುವಾಗಿದೆ. ಅವರು ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ನೂರಾರು ಗ್ರಾಮಸ್ಥರು ಸೇರಿ ಮಗುವಿಗಾಗಿ ಹುಡುಕಾಟ ಆರಂಭಿಸಿದರು. ಕೊನೆಗೆ, ಅಪರಾಧ ನಡೆದ ಸ್ಥಳದ ಸಮೀಪದ ಭತ್ತದ ಗದ್ದೆಯಲ್ಲಿ ಮಗುವಿನ ಶವವು ಹೂತುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯ ಕಂಡು ಗ್ರಾಮಸ್ಯರು ಮತ್ತು ಪೋಷಕರು ಕಣ್ಣೀರು ಹಾಕಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ವಾಣಿಸಾಗರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಮಂತ ಭಟ್ಟಾಚಾರ್ಜಿ ಅವರು ಈ ಭೀಕರ ಕೃತ್ಯವನ್ನು ದೃಢಪಡಿಸಿದ್ದಾರೆ. ಶನಿವಾರ ಅತ್ಯಾಚಾರ ನಡೆಸಿ, ನಂತರ ಕೊಲೆ ಮಾಡಿ ಭತ್ತದ ಗದ್ದೆಯಲ್ಲಿ ಮಗುವನ್ನು ಹೂತು ಹಾಕಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿ ಬಂಧನ, ನ್ಯಾಯಾಲಯಕ್ಕೆ ಹಾಜರು
ಘಟನೆ ನಡೆದ ಕೂಡಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನು ನೆರೆಯ ಅಸ್ಸಾಂನ ನೀಲಂಬಬಜಾರ್ನಿಂದ ಬಂಧಿಸಲಾಗಿದೆ. ಆತನ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಕಠಿಣ ಕಾನೂನು ವಿಭಾಗಗಳನ್ನು ಅನ್ವಯಿಸಲಾಗಿದೆ. ಮರಣೋತ್ತರ ಪರೀಕ್ಷೆ (Post-Mortem) ನಡೆಸಿದ ಬಳಿಕ ಮಗುವಿನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ತನಿಖೆ ಮುಂದುವರಿದಿದ್ದು ಭೀಕರ ಕೃತ್ಯ ಎಸಗಿದ ಆರೋಪಿಯನ್ನು ಸೋಮವಾರ ಆಗರ್ತಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯು ಕೇವಲ ಒಂದು ಕುಟುಂಬಕ್ಕೆ ಆದ ನೋವಲ್ಲ. ಇದು ಇಡೀ ದೇಶದ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ತೀವು ಆತಂಕವನ್ನು ಹುಟ್ಟು ಹಾಕಿದೆ. ಇಂತಹ ದಾರುಣ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯವಿದೆ.
Summary: A horrific crime has rocked Tripura’s Panisagar town: a 14-month-old infant was allegedly raped and murdered by a local daily wage worker. The accused, a neighbor, took the child from its mother on Saturday, October 11, under the false pretense of taking her out for a walk.
When the child was not returned by 8 PM, the worried parents filed a police complaint. A search with hundreds of villagers located the infant’s body buried in a paddy field near the crime scene
Panisagar police confirmed the crime, including the subsequent murder and burial. Police swiftly arrested the accused from Nilambazar in Assam and charged him with abduction, rape, and murder
The incident has caused immense grief to the family and sparked widespread public protests, with locals demanding severe punishment for the accused. The tragedy has reignited serious national concerns about child safety. The accused is scheduled to be produced before the Agartala court on Monday .
