ಬೆಂಗಳೂರು: ದೀಪಾವಳಿ ಹಬ್ಬದ(Deepavali Festival) ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನೈರುತ್ಯ ರೈಲ್ವೆ (SWR) ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳ ನಡುವೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈ ಹೆಚ್ಚುವರಿ ರೈಲುಗಳು ನಿರ್ದಿಷ್ಟ ದಿನಾಂಕಗಳಲ್ಲಿ ಸಂಚರಿಸಲಿದ್ದು, ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ನೂಕುನುಗ್ಗಲು ಕಡಿಮೆ ಮಾಡಲು ನೆರವಾಗಲಿವೆ ಎಂದು SWR ತಿಳಿಸಿದೆ.
ಇದನ್ನೂ ಓದಿ: Child Rape Case: 14 ತಿಂಗಳ ಹಸುಗೂಸನ್ನು ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿ; ಭುಗಿಲೆದ್ದ ಜನಾಕ್ರೋಶ
ಯಶವಂತಪುರ-ತಾಳಗುಪ್ಪ ಮಾರ್ಗ:
ರೈಲು ಸಂಖ್ಯೆ 06587 (ಯಶವಂತಪುರ-ತಾಳಗುಪ್ಪ) ಅಕ್ಟೋಬರ್ 17 ಮತ್ತು 24ರಂದು ಯಶವಂತಪುರ ರೈಲ್ವೇ ನಿಲ್ದಾಣದಿಂದ ರಾತ್ರಿ 10:30ಕ್ಕೆ ಹೊರಟು ಮರುದಿನ ಬೆಳಿಗ್ಗೆ, 4:15ಕ್ಕೆ ತಾಳಗುಪ್ಪ ತಲುಪಲಿದೆ. ಮರಳಿ ಬರುವಾಗ, ರೈಲು ಸಂಖ್ಯೆ 06588 (ತಾಳಗುಪ್ಪ-ಯಶವಂತಪುರ) ಅಕ್ಟೋಬರ್ 18 ಮತ್ತು 25ರಂದು ತಾಳಗುಪ್ಪ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10:00ಕ್ಕೆ ಹೊರಟು ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬಿರೂರು, ಭದ್ರಾವತಿ, ಶಿವಮೊಗ್ಗ, ನಗರ, ಸಾಗರ ಮತ್ತು ಜಂಬಗಾರು ಮಾರ್ಗವಾಗಿ ಸಂಚರಿಸಲಿದೆ.(Deepavali Festival)
ಎಸ್ಎಂವಿಟಿ ಬೆಂಗಳೂರು – ಬೆಳಗಾವಿ ಮಾರ್ಗ:
ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗಾಗಿ ವಿಶೇಷ ರೈಲು ಸಂಚರಿಸಲಿದೆ. ರೈಲು ಸಂಖ್ಯೆ 06503 (ಎಸ್ಎಂವಿಟಿ ಬೆಂಗಳೂರು-ಬೆಳಗಾವಿ) ಅಕ್ಟೋಬರ್ 17ರಂದು ಎಸ್ಎಂವಿಟಿ ನಿಲ್ದಾಣದಿಂದ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5:30ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 06504 (ಬೆಳಗಾವಿ-ಎಸ್ಎಂವಿಟಿ ಬೆಂಗಳೂರು) ಅಕ್ಟೋಬರ್ 22ರಂದು ಬೆಳಗಾವಿಯಿಂದ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5:00ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರ, ಹರಿಹರ, ಹುಬ್ಬಳ್ಳಿ ಧಾರವಾಡ, ಅಳ್ಳಾವರ ಮತ್ತು ಲೊಂಡಾ ಮಾರ್ಗವಾಗಿ ಸಂಚಾರಿಸಲಿದೆ.
ಇದನ್ನೂ ಓದಿ: Love Story: ನೋಟದಲ್ಲೇ ಕವಿತೆ ಬರೆದವನು: ‘ಕಳಿಸದ ಪತ್ರ’ಗಳಲ್ಲೇ ಜೀವಿಸಿದ ಆದಿತ್ಯನ ಪ್ರೇಮ ಮತ್ತು ಅನನ್ಯಾಳ ಮೌನ ನಗು!
ರೈಲ್ವೆ ಇಲಾಖೆಯ ಹೇಳಿಕೆ:
ದಕ್ಷಿಣ ಪಶ್ಚಿಮ ರೈಲ್ವೆ ಅಧಿಕಾರಿಗಳ ಪ್ರಕಾರ, ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಿರುವುದರಿಂದ ಈ ವಿಶೇಷ ರೈಲುಗಳನ್ನು ಘೋಷಿಸಲಾಗಿದ್ದು, ಇದು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆಗೊಳಿಸಲು ಸಹಕಾರಿಯಾಗಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ, SWR ಇತರ ಮಾರ್ಗಗಳಿಗೂ ಹೆಚ್ಚುವರಿ ರೈಲುಗಳನ್ನು ಘೋಷಿಸುವ ಸಾಧ್ಯತೆ ಇದೆ.
