ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ(Karnataka Congress) ಮತ್ತೆ ಮುಖ್ಯಮಂತ್ರಿ ಗಾದಿಯ ಕುರಿತು ಗುಲ್ಲೆದ್ದಿದೆ. ಆದರೆ ಈ ಬಾರಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivkumar) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರ ‘ಶಾಸಕರ ಬೆಂಬಲ’ ಸಿದ್ಧಾಂತಕ್ಕೆ ನೇರವಾಗಿ ಸವಾಲೆಸೆದಿದ್ದಾರೆ.(DKS vs Siddu) ಸಿಎಂ ಸ್ಥಾನಕ್ಕೆ ಬರಲು ಸಂಖ್ಯಾಬಲಕ್ಕಿಂತ, ಹೈಕಮಾಂಡ್ ಆಜ್ಞೆಯೇ ಪರಮೊಚ್ಚ ಎಂದು ಡಿಕೆಶಿ ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಡಿ.ಕೆ.ಶಿ.(DK Shivkumarp) ತಮ್ಮ ರಾಜಕೀಯ ನಿಲುವನ್ನು ನಿರ್ಭಿಡೆಯಿಂದ ವ್ಯಕ್ತಪಡಿಸಿದರು. “ಶಾಸಕರ ಬಲಾಬಲದ ಮೇಲೆ ಮುಖ್ಯಮಂತ್ರಿ ಸ್ಥಾನ ನಿರ್ಧಾರ ಆಗುವುದಿಲ್ಲ ಕಾಂಗ್ರೆಸ್ನಲ್ಲಿ ಹೈಕಮಾಂಡ್ನ ಮಾತೇ ಅಂತಿಮ ನಮ್ಮ ವರಿಷ್ಠರು ಏನು ಹೇಳುತ್ತಾರೋ ಅದನ್ನು ನಾವು ಒಪ್ಪಿಕೊಂಡು ನಡೆಯಬೇಕು. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ-ಯಾರನ್ನು ಎಲ್ಲಿಡಬೇಕು, ಯಾವಾಗ ಸ್ಥಾನಮಾನ ನೀಡಬೇಕು, ಎಷ್ಟು ದಿನ ಕೊಡಬೇಕು ಎಂಬುದೂ ಅವರದೇ ತೀರ್ಮಾನ.”(DKS vs Siddu)
“ನವೆಂಬರ್ ಕ್ರಾಂತಿ? ಅದೆಲ್ಲ ಬರೀ ಸೃಷ್ಟಿ!”
ರಾಜ್ಯ ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಿದಾಡುತ್ತಿದ್ದ ‘ನವೆಂಬರ್ ಕ್ರಾಂತಿ’ ಅಥವಾ ಸಿಎಂ ಬದಲಾವಣೆ ಊಹಾಪೋಹಗಳಿಗೂ ಡಿಕೆಶಿ ತಣ್ಣೀರೆರಚಿದರು. “ನವೆಂಬರ್ನಲ್ಲಿ ಯಾವುದೇ ಕ್ರಾಂತಿಯಿಲ್ಲ ಅದೆಲ್ಲವೂ ಬರೀ ಸೃಷ್ಟಿ. ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರಗಳು ದೆಹಲಿಯ ಮಟ್ಟದಲ್ಲಿಯೇ ಆಗುತ್ತವೆ. ನಾನು ಈವರೆಗೆ ಗುಂಪುಗಾರಿಕೆಯಲ್ಲಿ ನಂಬಿಕೆ ಇಟ್ಟವನಲ್ಲ 140 ಶಾಸಕರು ನನಗೆ ಬೇಕಾದವರೇ ನನಗೆ ಯಾರೂ ಜೈಕಾರ ಹಾಕಬೇಕಿಲ್ಲ ಹಿಂಬಾಲಕರೂ ಬೇಕಿಲ್ಲ ಹೈಕಮಾಂಡ್ ಹೇಳಿದಂತೆ ನಾನು ಕೇಳುತ್ತೇನೆ,” ಎಂದು ಹೇಳುವ ಮೂಲಕ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ ನವರು ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕರೆಸಿ ಸಿಎಂ-ಡಿಸಿಎಂ ಜವಾಬ್ದಾರಿ ಹಂಚಿಕೆ ಬಗ್ಗೆ ತಿಳಿಸಿದರು. ನಾವು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದೇವೆ ಗಾಳಿ ಮಾತಿನ ಚರ್ಚೆಗಳು ಅನಗತ್ಯ ಎಂದೂ ಅವರು ಸ್ಪಷ್ಟಪಡಿಸಿದರು.(DKS vs Siddu)
ಸಿದ್ದರಾಮಯ್ಯ ನಿಲುವು ವಿಭಿನ್ನ
ಡಿ.ಕೆ.ಶಿವರಕುಮಾರ್ರವರ ‘ಹೈಕಮಾಂಡ್ ಸರ್ವಸ್ವ’ ಎಂಬ ನಿಲುವಿಗೆ ಪ್ರತಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದರು.(DKS vs Siddu)” ಮುಖ್ಯಮಂತ್ರಿಯಾಗಲು ಹೈಕಮಾಂಡ್ ಆಶೀರ್ವಾದವೂ ಬೇಕು, ಹೌದು. ಆದರೆ, ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗುವುದಕ್ಕೆ ಆಗುವುದಿಲ್ಲ. ಬಹುಮತ ಇದ್ದರೆ ಮಾತ್ರ ಆಗಬಹುದು. ಎಂದು ಶಾಸಕರ ಬಲದ ಮಹತ್ವವನ್ನು ಒತ್ತಿ ಹೇಳಿದರು.
ಒಟ್ಟಿನಲ್ಲಿ, ಸಿಎಂ ಸ್ಥಾನದ ಕುರಿತು ಆಡಳಿತಾರೂಢ ಕಾಂಗ್ರೆಸ್ನ ಇಬ್ಬರು ಪ್ರಮುಖ ನಾಯಕರು ನೀಡಿದ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಸಂಖ್ಯಾಬಲ ವರ್ಸಸ್ ಹೈಕಮಾಂಡ್ ವಿಶ್ವಾಸ-ಯಾವುದು ಹೆಚ್ಚು ಮುಖ್ಯ ಎಂಬುದನ್ನು ಇಬ್ಬರೂ ನಾಯಕರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
Summary: A fresh rift has surfaced in Karnataka Congress over the CM’s post. Deputy CM DK Shivakumar countered CM Siddaramaiah’s claim that MLA support decides leadership, asserting that the High Command’s word is final. Dismissing “November Revolution” rumours of a leadership change, DKS said all key decisions come from Delhi. Siddaramaiah, however, maintained that while High Command approval is vital, no one can become CM without majority MLA backing. Their differing stands have sparked new political debate in the state.
