Sun Transit 2025:ನಮಸ್ಕಾರ, ಆತ್ಮೀಯರೇ
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯುತ್ತೇವೆ. ಸೂರ್ಯನಿಂದಲೇ ನಮ್ಮ ಆತ್ಮವಿಶ್ವಾಸ, ಆರೋಗ್ಯ ಮತ್ತು ಯಶಸ್ಸು ನಿರ್ಧಾರವಾಗುತ್ತದೆ. ಈ ಬಾರಿ ಸೂರ್ಯದೇವರು ತಮ್ಮ ಸ್ಥಾನ ಬದಲಾಯಿಸಿ, ಸೆಪ್ಟೆಂಬರ್ 27ರಂದು ಹಸ್ತ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿದ್ದಾರೆ(Sun Transit 2025) ಈ ಪ್ರವೇಶ ಕೆಲವು ರಾಶಿಗಳ ಮೇಲೆ ಶುಭ ಫಲ ನೀಡಿದರೆ, ಇನ್ನು ಕೆಲವು ರಾಶಿಗಳಿಗೆ ಸವಾಲುಗಳನ್ನು ಒಡ್ಡಬಹುದು. ಹಾಗಾಗಿ, ಈ ಸಂದರ್ಭದಲ್ಲಿ ಸೂರ್ಯನ ಕೃಪೆಗೆ ಪಾತ್ರರಾಗುವುದು ಹೇಗೆ ಎಂದು ತಿಳಿಯುವುದು ಬಹಳ ಮುಖ್ಯ. ಬನ್ನಿ, ನಿಮ್ಮ ಜೀವನದಲ್ಲಿ ಸೂರ್ಯನ ಶಕ್ತಿ ಮತ್ತು ಪ್ರಭಾವವನ್ನು ಹೆಚ್ಚಿಸಲು ಯಾವಲ್ಲಾ ಪರಿಹಾರಗಳನ್ನು ಅನುಸರಿಸಬಹುದು ಎಂದು ನೋಡೋಣ.
ಈ ಬಾರಿ ಸೂರ್ಯದೇವನು ಸೆಪ್ಟೆಂಬರ್ 27ರಂದು ಬೆಳಿಗ್ಗೆ 7:14ಕ್ಕೆ ಹಸ್ತ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿದ್ದಾರೆ(Sun Transit 2025). ಅವರು ಅಕ್ಟೋಬರ್ 10ರವರೆಗೆ ಅದೇ ನಕ್ಷತ್ರದಲ್ಲಿ ಇರುತ್ತಾರೆ. ಈ ಸಂಚಾರವು ಮೀನ, ಮೇಷ, ತುಲಾ ಮತ್ತು ಕುಂಭ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಆದರೆ, ಕೆಲವು ರಾಶಿಗಳ ಮೇಲೆ ಇದರ ಪ್ರಭಾವ ಸ್ವಲ್ಪ ಕಡಿಮೆ ಇರಬಹುದು. ಹಾಗಾಗಿ, ಎಲ್ಲರೂ ಸೂರ್ಯದೇವರನ್ನು ಪ್ರಸನ್ನಗೊಳಿಸಲು ಮತ್ತು ಉತ್ತಮ ಫಲಾಫಲಗಳನ್ನು ಪಡೆಯಲು ಈ ಮೂರು ಮಹತ್ವದ ಸಲಹೆಗಳನ್ನು ಪಾಲಿಸಿ.
- ಪೂಜೆ ಮತ್ತು ಪಿತೃ ತರ್ಪಣ
ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಅಥವಾ ಕೆಟ್ಟ ಸ್ಥಾನದಲ್ಲಿದ್ದರೆ, ಸೂರ್ಯನಿಗೆ ಸಂಬಂಧಿಸಿದ ಶಾಂತಿ ಪೂಜೆಗಳನ್ನು ಮಾಡಿಸಿ. ಸೂರ್ಯನು ಪಿತೃಗಳ ಸ್ಥಾನವನ್ನೂ ಪ್ರತಿನಿಧಿಸುವುದರಿಂದ, ಪಿತೃಗಳಿಗೆ ತರ್ಪಣ ನೀಡುವುದು ಅಥವಾ ಪಿತೃಗಳಿಗೆ ಸಂಬಂಧಿಸಿದ ಪೂಜೆಗಳನ್ನು ಮಾಡಿಸುವುದು ತುಂಬಾ ಶುಭಕರ. ಇದರಿಂದ ಪಿತೃಗಳ ಆಶೀರ್ವಾದದ ಜೊತೆಗೆ ಸೂರ್ಯನ ಅನುಗ್ರಹವೂ ಸಿಗುತ್ತದೆ.
- ಮಂತ್ರಗಳ ಪಠಣ
ಸೂರ್ಯದೇವನನ್ನು ಪುಸನ್ನಗೊಳಿಸಲು ಕೆಲವು ವಿಶೇಷ ಮಂತ್ರಗಳಿವೆ. ಇವುಗಳನ್ನು ಪ್ರತಿದಿನ ಪರಿಸುವುದು ತುಂಬಾ ಫಲದಾಯಕ. ಸೂರ್ಯ ಗಾಯತ್ರಿ ಮಂತ್ರ: ಪ್ರತಿದಿನ ‘ಓಂ ಭಾಸ್ಕರಾಯ ವಿದ್ಮಹೇ.. ಮಹಾದ್ಯುತಿಕಾಯ ಧೀಮಹಿ… ತನ್ನೋ ಸೂರ್ಯ: ಪ್ರಚೋದಯಾತ್..’ ಎಂದು ಜಪಿಸುವುದರಿಂದ ಸೂರ್ಯನ ಶಕ್ತಿ ನಿಮ್ಮಲ್ಲಿ ಹೆಚ್ಚುತ್ತದೆ.
ಆದಿತ್ಯ ಹೃದಯಂ: ಪ್ರತಿದಿನ ಸ್ನಾನದ ನಂತರ ಆದಿತ್ಯ ಹೃದಯಂ ಪಾರಾಯಣ ಮಾಡುವುದರಿಂದ ಜೀವನದ ಕಷ್ಟಗಳು ದೂರವಾಗಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
ಇದನ್ನೂ ಓದಿ: Criketer Karun Nair: ಒಂದು ತ್ರಿಶತಕ, ಅದೆಷ್ಟೋ ಕನಸುಗಳು: ಅಂತ್ಯವಾಯಿತೆ ಕರುಣ್ ನಾಯರ್ ಅವರ ವೃತ್ತಿಜೀವನ ?
- ಸೂರ್ಯ ನಮಸ್ಕಾರ, ಉಪವಾಸ ಮತ್ತು ದಾನ
ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ಉತ್ತಮವಾಗಿಲ್ಲದಿದ್ದರೆ, ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡಿ. ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ಶಕ್ತಿ ನೀಡುತ್ತದೆ. ಪ್ರತೀ ಭಾನುವಾರ ಉಪವಾಸ ಮಾಡುವುದು ಮತ್ತು ಮಾಂಸ ಸೇವನೆ ತ್ಯಜಿಸುವುದು ಬಹಳ ಮುಖ್ಯ. ಆ ದಿನ ಉಪ್ಪು. ಇಲ್ಲದ ಆಹಾರ ಸೇವಿಸುವುದು ಇನ್ನೂ ಉತ್ತಮ. ಇದರ ಜೊತೆಗೆ, ಭಾನುವಾರಗಳಂದು ಕೆಂಪು ಬಟ್ಟೆ, ಬೆಲ್ಲ, ಗೋಧಿ ಅಥವಾ ತಾಮ್ರದ ಪಾತ್ರಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ಸೂರ್ಯದೇವರ ಕೃಪೆಗೆ ಪಾತ್ರರಾಗುತ್ತೀರಿ.
ಸೂರ್ಯನ ಹಸ್ತ ನಕ್ಷತ್ರ ಪ್ರವೇಶದಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಸರಳ ಪರಿಹಾರಗಳನ್ನು ಪಾಲಿಸಿ. ಸೂರ್ಯನ ಕಿರಣಗಳು ನಿಮ್ಮ ಜೀವನವನ್ನು ಪ್ರಕಾಶಮಾನವಾಗಿಸಲಿ.
ಶ್ರೀಧರ್ ಶಾಸ್ತ್ರಿ
ತುಮಕೂರು
ವಿ.ಸೂ: ಈ ಮೇಲಿನ ಮಾಹಿತಿಯನ್ನು ನೈಜ ವ್ಯಕ್ತಿಯಿಂದ ಸ್ವೀಕರಿಸಿದ್ದಾಗಿರುತ್ತದೆ. ಹಾಗೆಯೇ ಈ ಮೇಲಿನ ಮಾಹಿತಿಗೂ ಸುದ್ದಿ ಸಂಪದ ವೆಬ್ಸೈಟಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಕೇವಲ ಮಾಹಿತಿಗಾಗಿ ಮಾತ್ರ.
