ಭಾರತದ ಬ್ಯಾಂಕ್ ಗಳಿಗೆ(Indian Banks) ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಗಳಲ್ಲಿ ತಲೆಮರೆಸಿಕೊಂಡು ಹಾಯಾಗಿ ಜೀವನ ನಡೆಸುತ್ತಿದ್ದ ವಿಜಯ್ ಮಲ್ಯ(Vijay Mallya) ಹಾಗೂ ನಿರಾವ್ ಮೋದಿಯ(Nirav modi) ಅದೃಷ್ಟ ಇದೀಗ ಕೆಟ್ಟಿದೆ. ಶೀಘ್ರದಲ್ಲೇ ನಿರಾವ್ ಮೋದಿ ಹಾಗೂ ಮಲ್ಯ ಬ್ರಿಟನ್ ಇಂದ ಗಡಿಪಾರಾಗುವ(Vijay Mallya Extradition) ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಬ್ರಿಟನ್ನಿಂದ ಬಂದಿದ್ದ ಒಂದು ತಜ್ಞರ ತಂಡ ತಿಹಾರ್ ಜೈಲಿಗೆ(Tihar Jail) ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಹಿಂದೆ ಈ ಇಬ್ಬರು ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಭಾರತದಿಂದ ಬ್ರಿಟನ್ ಗೆ ಕಾಲ್ಕಿತ್ತಿದ್ದರು. ಭಾರತದ ಜೈಲುಗಳಲ್ಲಿನ(Indian Jails) ಅವ್ಯವಸ್ಥೆ ಮತ್ತು ಹದಗೆಟ್ಟ ವಾತಾವರಣ ಇದೆ ಎಂಬುದಾಗಿ ಅಲ್ಲಿನ ಕೋರ್ಟಿಗೆ ಮನವಿ ಮಾಡಿದ್ದರು. ಒಂದು ವೇಳೆ ತಮ್ಮನ್ನು ಭಾರತಕ್ಕೆ ಕಳುಹಿಸಿದರೆ ಅಲ್ಲಿನ ಕೆಟ್ಟ ಸ್ಥಿತಿಯಿಂದಾಗಿ ತಾವು ಗಂಭೀರ ಕಾಯ್ದೆಗಳಿಗೆ ತುತ್ತಾಗಿ ಸಾಯಬಹುದು ಎಂದು ಬ್ರಿಟನ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬ್ರಿಟನ್ ನ್ಯಾಯಾಲಯ(Britain Company) ಭಾರತದ ಜೈಲುಗಳ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ಆಗ ಭಾರತ ಸರ್ಕಾರವು(indian government) ಜೈಲುಗಳ ಸ್ಥಿತಿಯನ್ನು ಸುಧಾರಿಸುತ್ತೇವೆ ಎಂದು ಭರವಸೆ ನೀಡಿದ್ದು ಈಗ ಆ ಭರವಸೆಯ ಭಾಗವಾಗಿ ಬ್ರಿಟನ್ ಜೈಲು ಅಧಿಕಾರಿಗಳ(Britain officials) ತಂಡ ಒಂದು ದಿಲ್ಲಿಯ ತಿಹಾರ್ ಜೈಲಿಗೆ(Tihar Jail) ಭೇಟಿ ನೀಡಿ ಭದ್ರತೆ ಮತ್ತು ಇತರ ಸೌಲಭ್ಯಗಳನ್ನು ಕುಲಂಕುಶವಾಗಿ ಪರಿಶೀಲಿಸಿದ ಜೈನೊಳಗಿನ ಕೈದಿಗಳೊಂದಿಗೆ ಮಾತನಾಡಿದ್ದು ಕೂಡ ತಿಳಿದು ಬಂದಿದೆ.
ಇದನ್ನೂ ಓದಿ: Criketer Karun Nair: ಒಂದು ತ್ರಿಶತಕ, ಅದೆಷ್ಟೋ ಕನಸುಗಳು: ಅಂತ್ಯವಾಯಿತೆ ಕರುಣ್ ನಾಯರ್ ಅವರ ವೃತ್ತಿಜೀವನ ?
ಭಾರತದ ರಾಜ ತಾಂತ್ರಿಕ ಅಧಿಕಾರಿಗಳು ಈ ಸಂದರ್ಭಗಳಲ್ಲಿ ಬ್ರಿಟನ್ ತಂಡಕ್ಕೆ ಬೇಡಿಕೆ ಇರುವ ಆರೋಪಿಗಳಿಗೆ ಬೇಕಿದ್ದರೆ ವಿಶೇಷ ವ್ಯವಸ್ಥೆಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಸದ್ಯ ವಿಜಯ್ ಮಲ್ಯ(Vijay Mallya) ಮತ್ತು ನೀರವ್ ಮೋದಿ(Nirav modi) ಭಾರತಕ್ಕೆ ಗಡಿಪಾರು(Vijay Mallya Extradition) ಮಾಡುವುದಕ್ಕೆ ಬ್ರಿಟನ್ ನ್ಯಾಯಾಂಗ ವ್ಯವಸ್ಥೆಯು ಒಪ್ಪಿಗೆ ನೀಡಿದರು ಗಡಿಪಾರು ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಒಂದು ಕಡೆ ಒಂಬತ್ತು ಸಾವಿರ ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್(Panjab National Bank) ಗೆ 13800 ಕೋಟಿ ಆರೋಪ ಹೊತ್ತಿರುವ ನೀರವ್ ಮೋದಿ ಇನ್ನೊ ಬ್ರಿಟನ್ ಜೈಲಿನಲ್ಲಿಯೇ ಇದ್ದಾರೆ.
ಭಾರತವು ಒಟ್ಟು 178 ಹಂಚಕರನ್ನು ವಿವಿಧ ದೇಶಗಳಿಂದ ಗಡಿ ಪಾರು ಮಾಡಿಸಿ ಭಾರತಕ್ಕೆ ಕರೆ ತರಲು ಪ್ರಯತ್ನಿಸುತ್ತಿದ್ದು ಅವರಲ್ಲಿ 20 ಜನರು ಬ್ರಿಟನ್ ನಲ್ಲಿ ನೆಲೆಸಿದ್ದಾರೆ ಈ ಪಟ್ಟಿಯಲ್ಲಿ ವಿಜಯ್ ಮಲ್ಯ ನೀರೋ ಮೋದಿ ಮಾತ್ರವಲ್ಲದೆ, ಸಂಜಯ್ ಬಂಡಾರಿ ಮತ್ತು ಕೆಲವು ಕಲಿಸ್ತಾನಿ ಉಗ್ರರು ಸೇರಿದ್ದಾರೆ.
ತಿಹಾರ್ ಜೈಲಿನ ಪರಿಶೀಲನೆಯ ನಂತರ ಈ ಇಬ್ಬರು ವಂಚಕರು ಶೀಘ್ರದಲ್ಲಿ ಭಾರತಕ್ಕೆ ಬರುವುದು ಬಹುತೇಕ ಖಚಿತ ಎಂದು ಸುದ್ದಿಮೂಲಗಳು ಹೇಳುತ್ತಿವೆ. ಅಂತು ಕೊನೆಗೂ ದೇಶದ ಬ್ಯಾಂಕುಗಳಿಗೆ ಉಂಡೆನಾಮ ಹಾಕಿದ್ದವರ ಕೈಗೆ ಇದೀಗ ಕೋಳ ಬೀಳಲಿದೆ.
