Criketer Karun Nair: ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ(Test cricket) ಭಾರತದ ಭರವಸೆಯಾಗಿದ್ದ ಆ ಹೆಸರು ಈಗ ಮರೆಯಾಗುತ್ತಿದೆಯೇ? 2016ರಲ್ಲಿ ಇಂಗ್ಲೆಂಡ್(England) ವಿರುದ್ದ ಚೆನ್ನೈನಲ್ಲಿ(Chennai) ಬಾರಿಸಿದ ಆ ಐತಿಹಾಸಿಕ ತ್ರಿಶತಕದ ನಂತರ, ಕರುಣ್ ನಾಯರ್(Criketer Karun Nair) ಅವರ ವೃತ್ತಿಜೀವನವು ಹೊಸ ದಿಕ್ಕಿನಲ್ಲಿ ಸಾಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಅವರ ಅದೃಷ್ಟದ ಆಟ ಅಲ್ಲಿಗೇ ನಿಂತುಬಿಟ್ಟಿತು. ಇತ್ತೀಚೆಗೆ ಪ್ರಕಟಗೊಂಡ ಭಾರತ ‘ಎ’ ತಂಡದಲ್ಲಿ ಅವರ ಹಸರು ಇಲ್ಲದಿರುವುದು, ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಆ ಪ್ರಶ್ನೆಯನ್ನು ಎತ್ತಿದೆ. ಒಬ್ಬ ಶ ಬ್ಯಾಟ್ಸ್ಮನ್ ಶ್ರೇಷ್ಠ ಸಾಧನೆಯೂ ಅವನ ವೃತ್ತಿಜೀವನವನ್ನು ಉಳಿಸಲು ಸಾಕಾಗುವುದಿಲ್ಲವೇ? ಕರುಣ್ ನಾಯರ್ ಅವರ ಕಥೆ ಈಗ ಭವಿಷ್ಯದ ಆಟಗಾರರಿಗೆ ಒಂದು ಪಾಠವಾಗುತ್ತಿದೆ.
ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್(Criketer Karun Nair) ಅವರ ವೃತ್ತಿಜೀವನ ಬಹುತೇಕ ಮುಗಿದಿದೆ ಎಂಬ ಊಹಾಪೋಹಗಳು ಈಗ ಹರಿದಾಡುತ್ತಿವೆ. ಇತ್ತೀಚೆಗೆ ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆಯಲಿರುವ ಎರಡು ಅನಧಿಕೃತ ನಾಲ್ಕು ದಿನಗಳ ಪಂದ್ಯಗಳಿಗಾಗಿ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಕರುಣ್ ನಾಯರ್(Criketer Karun Nair) ಅವರ ಹೆಸರಿಲ್ಲ.
ಈ ಘಟನೆಯನ್ನು ಸರಿಯಾಗಿ ಗಮನಿಸಿದರೆ 33 ವರ್ಷದ ಈ ಅನುಭವಿ ಬ್ಯಾಟ್ಸ್ಮನ್ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಅಂತ್ಯವಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.
ಕಠಿಣ ಹಾದಿ
ಒಂದು ಕಾಲದಲ್ಲಿ ಟೆಸ್ಟ್ ಕ್ರಿಕೆಟ್ ಗೆ(Test cricket) ಅತ್ಯುತ್ತಮ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದ ಕರುಣ್ ನಾಯರ್(Cricketer Karun Nair), 2016ರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ ಆ ಭರ್ಜರಿ ತ್ರಿಶತಕ ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ ಅದಾದ ನಂತರ ಅವರ ಅದೃಷ್ಟ ಬದಲಾಯಿತು. ತಂಡದಲ್ಲಿ ಸ್ಥಾನ ಕಳೆದುಕೊಂಡ ಅವರು, ಸುಮಾರು 9 ವರ್ಷಗಳ ನಂತರ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸಕ್ಕೆ ಹೋದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ಆದರೆ ಅಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಐದು ಪಂದ್ಯಗಳ ಟೆಸ್ಟ್ ಸರಣಿಯ 6 ಇನ್ನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿ, ಉತ್ತಮ ಪ್ರದರ್ಶನ ನೀಡಲು ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಇದು ಅವರ ಟೆಸ್ಟ್ ವೃತ್ತಿಜೀವನವನ್ನು ಪುನರಾರಂಭಿಸುವ ಕನಸನ್ನು ನುಚ್ಚುನೂರು ಮಾಡಿದೆ.
ಗಾಯದ ಸಮಸ್ಯೆ?
ಲಕ್ಷದಲ್ಲಿ ನಡೆಯಲಿರುವ ಭಾರತ ‘ಎ’ ತಂಡದ ಪಂದ್ಯಗಳಿಗೆ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಓವಲ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ, ಅವರು ಮಹಾರಾಜ ಟಿ20 ಲೀಗ್ನಲ್ಲೂ ಭಾಗವಹಿಸಿರಲಿಲ್ಲ. ಅವರ ಗಾಯದ ಸಮಸ್ಯೆಯೇ ಭಾರತ ‘ಎ’ ತಂಡದಿಂದ ಹೊರಗುಳಿಯಲು ಕಾರಣವಾಗಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಬಿಸಿಸಿಐ (BCCI) ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಕರುಣ್ ನಾಯರ್(Criketer Karun Nair) ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಕೊನೆಯಾಗಿದೆ ಎಂದು ಹೇಳಬಹುದು. ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ಮಾಡಿ ಹೊಸಬರು ಮತ್ತು ಕೆಲವು ಅನುಭವಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಭಾರತದಲ್ಲಿ ಮುಂಬರುವ ಟೆಸ್ಟ್ ಸೀಸನ್ಗೆ ಇದೊಂದು ಹೊಸ ಆರಂಭ ಎಂದು ಪರಿಗಣಿಸಬಹುದು.
ಭಾರತದ ಮಾಜಿ ಆರಂಭಿಕ ಆಟಗಾರ ಅಶೋಕ್ ಚೋಪ್ರಾ(Ashok Chopra) ಅವರು ಕರುಣ್ ಅಯ್ಯರ್ ಭವಿಷ್ಯದ ಕುರಿತಾಗಿ ಮಾತನಾಡಿದ್ದು ಸದ್ಯ ಕರಣ್ ಮುಂದಿನ ಭವಿಷ್ಯ ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ. ಮತ್ತು ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಸರಣಿಗೆ ಅವರನ್ನು ತಂಡದಲ್ಲಿ ಹೆಸರಿಸಬಹುದು ಎಂದು ತಿಳಿಸಿದ್ದಾರೆ.
