ಮುಂಬೈ: ‘ಹಿಟ್ಮ್ಯಾನ್ ರೋಹಿತ್ ಶರ್ಮಾ(Rohit Sharma) ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಿರ್ಧಾರವು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಸರಣಿಗೆ ತಂಡವನ್ನು ಪ್ರಕಟಿಸಿದ ಆಯ್ಕೆ ಸಮಿತಿ, ರೋಹಿತ್(Rohit Sharma)ಬದಲಿಗೆ ಯುವತಾರೆ ಶುಭಮನ್ ಗಿಲ್(shubman gill) ಅವರ ಕೈಗೆ ಕ್ಯಾಪ್ಟನ್ಸಿ ಚುಕ್ಕಾಣಿ ನೀಡಿದೆ. ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.
ತಂಡದ ಆಯ್ಕೆಯ ನಂತರ, ಬಿಸಿಸಿಐ ಗಿಲ್ರನ್ನು(shubman gill) ಹೊಸ ODI ನಾಯಕನನ್ನಾಗಿ ನೇಮಿಸಿದೆ. ಉಪನಾಯಕನ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿದೆ. ಆದರೆ, ಭಾರತೀಯ ಕ್ರಿಕೆಟ್ ಎರಡು ದೊಡ್ಡ ಹೆಸರುಗಳಾದ ರೋಹಿತ್ ಶರ್ಮಾ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಇಬ್ಬರೂ ಆಟಗಾರರಾಗಿ ತಂಡದಲ್ಲಿ ಉಳಿದಿದ್ದಾರೆ.
ಟಿ20 ಮತ್ತು ಟೆಸ್ಟ್ ಮಾದರಿಗಳಿಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್ , ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಭಿಮಾನಿಗಳು ಅವರ ಆಟವನ್ನು ನೋಡುವುದಕ್ಕೆ ಕಾತರರಾಗಿದ್ದಾರೆ. ಆದರೆ ಮಾರ್ಚ್ 2025 ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತವು ಚಾಂಪಿಯನ್ ಟ್ರೋಫಿ ಗೆದ್ದರೂ, ಈಗ ಅವರ ನಾಯಕತ್ವವನ್ನು ಬದಲಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ನೋವು ಮೂಡಿಸಿದೆ.
ನಾಯಕತ್ವ ಬಿಟ್ಟರೂ, ಕ್ರಿಕೆಟ್ ಮೇಲಿನ ಪ್ರೀತಿ ಉಳಿದಿದೆ!
ತಮ್ಮ ನಾಯಕತ್ವದ ನಿರ್ಧಾರದ ಬಗ್ಗೆ ನೇರವಾಗಿ ಯಾವುದೇ ಅಸಮಾಧಾನ ವ್ಯಕ್ತಪಡಿಸದ ರೋಹಿತ್(Rohit Sharma) ಶರ್ಮಾ, ತಮ್ಮ ಗಮನವನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಮೇಲೆ ಕೇಂದ್ರೀಕರಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಕುರಿತು ಮಾತನಾಡುತ್ತಾ, ನಾನು ಅಸ್ಟ್ರೇಲಿಯಾ ವಿರುದ್ಧ ಆಡಲು ಪ್ರೀತಿಸುತ್ತೇನೆ. ಅಲ್ಲಿಗೆ ಹೋಗುವುದನ್ನು ನಾನು ಇಷ್ಟಪಡುತ್ತೇನೆ. ಅಲ್ಲಿನ ಜನರು ಕ್ರಿಕೆಟ್ಗೆ ನೀಡುವ ಪ್ರೀತಿ ಅದ್ಭುತ. ಆ ಉತ್ಸಾಹವೇ ಅಲ್ಲಿ ಆಡಲು ಪ್ರೇರೇಪಿಸುತ್ತದೆ,” ಎಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೋಹಿತ್ ತಮ್ಮ ಸಂತೋಷವನ್ನು ಹಂಚಿಕೊಂಡರು. ನಾಯಕತ್ವ ಕಳೆದುಕೊಂಡರೂ ದೇಶಕ್ಕಾಗಿ ಆಡುವ ಉತ್ಸಾಹ ಕಡಿಮೆಯಾಗಿಲ್ಲ ಎಂಬುದನ್ನು ಅವರು ಸಾರಿದರು.
‘ಆಯ್ಕೆಗಾರರ ಮಾತುಕತೆ
ನಾಯಕತ್ವ ಬದಲಾವಣೆ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ ಬಿಸಿಸಿಐ(BCCI) ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಇದು ಸುಲಭದ ನಿರ್ಧಾರವಾಗಿರಲಿಲ್ಲ ಎಂದರು.
ನಾಯಕತ್ವದ ಬದಲಾವಣೆಯ ಬಗ್ಗೆ, ರೋಹಿತ್ಗೆ ಮೊದಲೇ ತಿಳಿಸಲಾಗಿತ್ತು. ಅವರು ಆಡುತ್ತಿರುವ ಏಕೈಕ ಮಾದರಿ ಏಕದಿನ ಮಾತ್ರ ನಾವು ಅವರನ್ನು ಆಟಗಾರರಾಗಿ ಆಯ್ಕೆ ಮಾಡಿದ್ದೇವೆ. 2027ರ ವಿಶ್ವಕಪ್ ಬಗ್ಗೆ ಈಗಲೇ ಮಾತನಾಡುವ ಅಗತ್ಯವಿಲ್ಲ” ಎಂದು ಆಗರ್ಕರ್ ಹೇಳಿದರು.
ರೋಹಿತ್(shubman gill) ಈ ವಿಷಯವನ್ನು ಹೇಗೆ ಸ್ವೀಕರಿಸಿದರು ಎಂಬ ಪ್ರಶ್ನೆಗೆ, “ಅದು ನನ್ನ ಮತ್ತು ರೋಹಿತ್ ನಡುವಿನ ಸಂವಾದ. ಆದರೆ, ಈ ನಿರ್ಧಾರದ ಬಗ್ಗೆ ಅವರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು” ಎಂದು ಅವರು ಉತ್ತರಿಸಿದರು. ಮೂರು ಮಾದರಿಗಳಿಗೆ ಬೇರೆ ಬೇರೆ ನಾಯಕರನ್ನು ಇಡುವುದು ತಂಡದ ಸಾಮಾನ್ಯ ಯೋಜನೆಗೆ ಧಕ್ಕೆಯಾಗುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಅಗರ್ಕರ್ ಸಮರ್ಥಿಸಿಕೊಂಡರು.
