Reading Time: < 1 minute
Delhi Police Recruitment 2025 : ಇಂದಿನಿಂದ ದೆಹಲಿ ಪೊಲೀಸ್ ಇಲಾಖೆಯಲ್ಲಿ(New Delhi Police Department) ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಪುರುಷ ಮತ್ತು ಮಹಿಳಾ ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (SSC) ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಮುಖ ದಿನಾಂಕಗಳು ಮತ್ತು ಪರೀಕ್ಷೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21, 2025.
- ಕಂಪ್ಯೂಟರ್ ಆಧಾರಿತ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಇದು ಡಿಸೆಂಬರ್ 2025 ಮತ್ತು ಜನವರಿ 2026 ರ ಅವಧಿಯಲ್ಲಿ ಜರುಗಲಿದೆ.
ಹುದ್ದೆಗಳ ವಿವರ
- ಒಟ್ಟು 7565 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ
- ಪುರುಷ ಅಭ್ಯರ್ಥಿಗಳಿಗೆ 5069 ಹುದ್ದೆಗಳು
- ಮಹಿಳಾ ಅಭ್ಯರ್ಥಿಗಳಿಗೆ 2496 ಹುದ್ದೆಗಳು.
ಶೈಕ್ಷಣಿಕ ಅರ್ಹತೆ ಮತ್ತು ಸಡಿಲಿಕೆ:
- ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಪಿಯುಸಿ (ಹಿರಿಯ ಸೆಕೆಂಡರಿ) ಯಲ್ಲಿ ಉತ್ತೀರ್ಣರಾಗಿರಬೇಕು.
ಇತರೆ ಅರ್ಹತೆಗಳು
- ಪುರುಷ ಅಭ್ಯರ್ಥಿಗಳು L.M.V (ಲಘು ಮೋಟಾರ್ ವಾಹನ) – ಬೈಕ್ ಮತ್ತು ಕಾರು ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು.
- ಅಭ್ಯರ್ಥಿಗಳಿಗೆ ಕಂಪ್ಯೂಟರ್ ಬಗ್ಗೆ ಉತ್ತಮ ಜ್ಞಾನ/ಪ್ರಾವೀಣ್ಯತೆ ಇರಬೇಕು.
- ಆಯ್ಕೆ ಪ್ರಕ್ರಿಯೆಯಲ್ಲಿ ದೆಹಲಿ ಪೊಲೀಸರು ದೈಹಿಕ ಮತ್ತು ಮಾಪನ ಪರೀಕ್ಷೆ (PET & PST) ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ.
ಅರ್ಜಿ ಶುಲ್ಕ ಮತ್ತು ವಿನಾಯಿತಿ
- ಅರ್ಜಿ ಶುಲ್ಕವಾಗಿ 100 ರೂ. ನಿಗದಿಪಡಿಸಲಾಗಿದೆ.
- ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಮಾಜಿ ಸೈನಿಕರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಜಾಲತಾಣಗಳನ್ನು ಸಂಪರ್ಕಿಸಬಹುದು:
- ಎಸ್ಎಸ್ಸಿ ಮುಖ್ಯ ಕಚೇರಿ (ನವದೆಹಲಿ) https://ssc.nic.in/
- ಎಸ್ಎಸ್ಸಿ ಕರ್ನಾಟಕ-ಕೇರಳ ಪ್ರದೇಶ www.ssckkr.kar.nic.in
ಅಲ್ಲದೆ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಹಾಯವಾಣಿ ಸಂಖ್ಯೆ 080-25502520 ಗೆ ಕರೆ ಮಾಡಬಹುದು.(Delhi Police Recruitment 2025)
