IAS Interview: ಭಾರತದ ಅತೀ ಪ್ರತಿಷ್ಠಿತ ಹಾಗೂ ಪ್ರಭಾವಶಾಲಿ ಹುದ್ದೆಗಳ ಪೈಕಿ IAS (ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) ಪ್ರಮುಖವಾಗಿದೆ. ಈ ಹುದ್ದೆಗೆ ಆಯ್ಕೆಯಾಗಲು UPSC ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆಯ ಅಂತಿಮ ಹಂತವೇ ಸಂದರ್ಶನ. (ಪರ್ಸನಾಲಿಟಿ ಟೆಸ್ಟ್).
ಸಂದರ್ಶನ ಎಂಬುದು ಕೇವಲ ಪಠ್ಯಾಧಾರಿತ ಪರೀಕ್ಷೆಯಾಗಿರುವುದಿಲ್ಲ, ಇದು ನಿಮ್ಮ ವ್ಯಕ್ತಿತ್ವ, ಸಮಾಜದತ್ತ ನೀವು ನೋಡುವ ದೃಷ್ಟಿಕೋನ, ತ್ವರಿತ ನಿರ್ಧಾರ ಮಾಡುವ ಶಕ್ತಿ, ಸಮಸ್ಯೆಗಳಿಗೆ ನೀವು ಸೂಚಿಸುವ ಪರಿಹಾರಗಳು, ನಿಮ್ಮ ಬುದ್ಧಿ ಶಕ್ತಿ, ಕಾರ್ಯ ವೈಖರಿ ಎಲ್ಲವನ್ನೂ ಅಳೆಯಲಾಗುತ್ತದೆ.
ಈ ಕೆಳಗೆ IAS ಸಂದರ್ಶನದಲ್ಲಿ(IAS Interview) ಸಾಮಾನ್ಯವಾಗಿ ಕೇಳುವ ಮುಖ್ಯ ಪ್ರಶ್ನೆಗಳ ಸಂಪೂರ್ಣ ವಿವರ ನೀಡಲಾಗಿದೆ.
- ವ್ಯಕ್ತಿತ್ವ ವಿಶ್ಲೇಷಣೆ
- ಸಮಾಜ ಹಾಗೂ ದೇಶದ contemporary ವಿಷಯಗಳ ಜ್ಞಾನ
- ನೈತಿಕ ಮೌಲ್ಯಗಳು, ಸಮಾಜಪರ ದೃಷ್ಟಿಕೋನ
- ಕಠಿಣ ಪರಿಸ್ಥಿತಿಯಲ್ಲಿ ಪ್ರತಿಕ್ರಿಯೆ ನೀಡುವ ಶಕ್ತಿ ಭವಿಷ್ಯದ ಗುರಿ ಸ್ಪಷ್ಟತೆ, ನಿರ್ಧಾರ ಸಾಮರ್ಥ್ಯ
ವೈಯಕ್ತಿಕ ಮಾಹಿತಿ ಹಾಗೂ ಹಿನ್ನೆಲೆ ಆಧಾರಿತ ಪ್ರಶ್ನೆಗಳು:
- ನಿಮ್ಮ ಹೆಸರು ಏನು? ಅದರ ಅರ್ಥ ನಿಮಗೆ ಗೊತ್ತೇ?
- ನೀವು ಹುಟ್ಟಿದ ಊರಿನ ಬಗ್ಗೆ ವಿವರಿಸಿ.
- ನಿಮ್ಮ ಕುಟುಂಬದ ಬಗ್ಗೆ ವಿವರಿಸಿ.
- ನೀವು ಏಕೆ IAS ಆಗಬೇಕೆಂದು ಆಸೆ ಪಟ್ಟಿರಿ?
- ನೀವು ಆಯ್ಕೆ ಮಾಡಿದ ಪದವಿ ಶಿಕ್ಷಣ ವಿಷಯ ಏನು? ಅದನ್ನು ಆಯ್ಕೆ ಮಾಡಿದ ಕಾರಣವೇನು?
ಅಕಾಡೆಮಿಕ್ ಮತ್ತು ಐಚ್ಛಿಕ ವಿಷಯ ಆಧಾರಿತ ಪ್ರಶ್ನೆಗಳು:
- ನೀವು ಕಲಿತ ವಿಷಯವು ಪ್ರಸ್ತುತ ಸಮಾಜಕ್ಕೆ ಹೇಗೆ ಸಹಕಾರಿಯಾಗಿದೆ?
- ಆ ವಿಷಯದಲ್ಲಿ ಇತ್ತೀಚೆಗೆ ನಡೆದ ಪ್ರಮುಖ ಸಂಶೋಧನೆಗಳು ಏನೆಂದು ನಿಮಗೆ ಗೊತ್ತಾ?
- UPSC ಪರೀಕ್ಷೆಗೆ ನೀವು ಆಯ್ಕೆ ಮಾಡಿದ ಐಚ್ಛಿಕ ವಿಷಯದ ಬಗ್ಗೆ ವಿವರಿಸಿ.
ಪ್ರಸ್ತುತ ವಿದ್ಯಮಾನಗಳು, ರಾಷ್ಟ್ರ-ಅಂತರರಾಷ್ಟ್ರೀಯ ವಿಚಾರಗಳು:
- ಇತ್ತೀಚೆಗೆ ನಡೆದ ಪ್ರಮುಖ ರಾಷ್ಟ್ರೀಯ ಸುದ್ದಿಗಳು ಯಾವುವು?
- ಭಾರತ-ವಿದೇಶಗಳ ನಡುವಿನ ಸಂಬಂಧಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
- UN, WTO, IMF ಕುರಿತು ನಿಮಗೆ ತಿಳಿದಿರುವ ಮಾಹಿತಿ.
- ಭಾರತೀಯ ಆರ್ಥಿಕತೆಯಲ್ಲಿ ಇತ್ತೀಚೆಗೆ ನಡೆದ ಬದಲಾವಣೆಗಳು ಯಾವುವು?
- ಸರ್ಕಾರ ಜಾರಿಗೆ ತಂದ ಪ್ರಮುಖ ನೀತಿ ಪರಿಷ್ಕಾರಗಳ ಬಗ್ಗೆ ವಿವರಿಸಿ.
ನೈತಿಕ ಮೌಲ್ಯಗಳು, ಸಮಾಜ ಪರ ವಿರಳ ಪ್ರಶ್ನೆಗಳು:
- ನೀವು ಅಧಿಕಾರಿಯಾಗಿದ್ದು, ನಿಮ್ಮ ಮೇಲೆ ಭ್ರಷ್ಟಾಚಾರ ಆರೋಪ ಎದುರಾದರೆ ಏನು ಮಾಡ್ತೀರಾ?
- ಮಹಿಳಾ ಸುರಕ್ಷತೆಗಾಗಿ ನೀವು ಕೈಗೊಳ್ಳುವ ಕ್ರಮಗಳು ಯಾವುವು?
- ಗ್ರಾಮೀಣಾಭಿವೃದ್ಧಿಗಾಗಿ ನಿಮ್ಮ ಯೋಜನೆ ಯಾವುದು?
- ಸಾಮಾಜಿಕ ನ್ಯಾಯದ ಬಗ್ಗೆ ನಿಮ್ಮ ದೃಷ್ಟಿಕೋನವೇನು?
- ರಾಷ್ಟ್ರೀಯ ಭದ್ರತೆ ಸಮಸ್ಯೆಗಳನ್ನು ನೀವು ಹೇಗೆ ಎದುರಿಸುತ್ತೀರಾ?
ಅಸಾಧಾರಣ ಪ್ರಶ್ನೆಗಳು: ನಿಮ್ಮ ಚಿಂತನೆ ಪರೀಕ್ಷಿಸಲು:
- ನೀವು ಅರಣ್ಯದಲ್ಲಿ ದಾರಿ ತಪ್ಪಿದ್ದೀರಿ, ಬೆನ್ನು ಹಿಂದೆ ಹುಲಿ ಬರುತ್ತಿದೆ, ನೀವು ಏನು ಮಾಡ್ತೀರಾ?
- ಹುಲಿ, ಎಮ್ಮೆ, ಹುಲ್ಲು — ಈ ಮೂರು ನದಿಗೆ ಹೇಗೆ ಕೊಂಡೊಯ್ಯುತ್ತೀರಿ?
- ಕಡಿಮೆ ಸಂಪನ್ಮೂಲಗಳ ನಡುವೆ ಜನರ ಸಮಸ್ಯೆ ನಿವಾರಣೆಗೆ ನೀವು ಏನು ಮಾಡ್ತೀರಾ?
- ನಿಮ್ಮನ್ನು ಒಂದು ಪದದಲ್ಲಿ ವಿವರಿಸಿ.
- ನೀವು ಪ್ರಧಾನಿ ಆಗಿದ್ದರೆ ತಕ್ಷಣ ಮಾಡುವ ಮೂರು ಬದಲಾವಣೆಗಳು ಯಾವುವು?
IAS ಸಂದರ್ಶನಕ್ಕೆ ಸಿದ್ಧರಾಗುವ ಉತ್ತಮ ಮಾರ್ಗಗಳು:
- DAF (Detailed Application Form) ನೊಳಗೆ ನಿಮಗೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಎಳೆ ಎಳೆಯಾಗಿ ಅಧ್ಯಯನ ಮಾಡಿ.
- ಪ್ರಸ್ತುತ ದೇಶ, ರಾಜ್ಯ ಹಾಗೂ ಜಗತ್ತಿನ ಸುದ್ದಿಗಳನ್ನು ನಿರಂತರವಾಗಿ ಓದಿ.
- ಸಮತೋಲನಯುತ ಹಾಗೂ ನೈತಿಕ ದೃಷ್ಟಿಕೋನ ಬೆಳೆಸಿ.
- Mock Interview ಗಳ ಮೂಲಕ ಅಭ್ಯಾಸ ಮಾಡಿ.
- ನಾಯಕರ ಗಾತ್ರದ ವ್ಯಕ್ತಿತ್ವ ಬೆಳೆಸಿ, ಉತ್ತಮ ಸಂವಹನ ಶೈಲಿ ಅಭ್ಯಾಸ ಮಾಡಿ.
- ಸಮಾಜದ ಕುರಿತು ಹೊಣೆಗಾರಿಕೆಯ ಮನಸ್ಥಿತಿಯನ್ನು ಹೊಂದಿ.
ವಿಷಯ ಜ್ಞಾನಕ್ಕಿಂತ ಹೆಚ್ಚಾಗಿ Soft Skills ಮುಖ್ಯ:
A) ಸ್ಪಷ್ಟ ಅಭಿಪ್ರಾಯ
B) ಆತ್ಮವಿಶ್ವಾಸದೊಂದಿಗೆ ಉತ್ತರ
C) ಸಮಾಜಪರ ದೃಷ್ಟಿಕೋನ
D) ನೈತಿಕ ಮೌಲ್ಯಗಳು ಹಾಗೂ ಸಮಸ್ಯೆ ಪರಿಹಾರ
E) ತಂತ್ರಜ್ಞಾನ ಅರಿವು ಅತ್ಯಗತ್ಯ
IAS ಸಂದರ್ಶನವು ಕೇವಲ ಪ್ರಶ್ನೋತ್ತರ ಪ್ರಕ್ರಿಯೆಯಲ್ಲ, ನಿಮ್ಮ ಸಂಪೂರ್ಣ ವ್ಯಕ್ತಿತ್ವದ ಪರೀಕ್ಷೆ. ಅದಕ್ಕಾಗಿ ವಿಷಯ ಜ್ಞಾನವೊಂದೇ ಸಾಕಾಗದು, ನಿಮ್ಮ ಮೌಲ್ಯಗಳು, ಸಮಾಜಪರ ಬದ್ಧತೆ, ಸ್ಪಷ್ಟ ಗುರಿ ಇರುವುದೇ ಮುಖ್ಯ.
