ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಳೆ (ಅಕ್ಟೋಬರ್ 17) ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು,(Job fair in Mysore) 45,000ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ನಗರದ ಪ್ರತಿಷ್ಠಿತ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಮೇಳದಲ್ಲಿ 220ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್, “ಈಗಾಗಲೇ 24,000ಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ನೇರವಾಗಿ ಸ್ಥಳಕ್ಕೆ ಆಗಮಿಸಿ ನೋಂದಾಯಿಸಿಕೊಳ್ಳಲು ಸಹ ಅವಕಾಶವಿದೆ,” ಎಂದು ತಿಳಿಸಿದರು.
ಇದನ್ನೂ ಓದಿ: Love Story: ಹಠಕ್ಕೆ ಬಿದ್ದ ಹೃದಯ ಕೈಹಿಡಿದ ಪ್ರೀತಿ; ಸೋತು ಗೆದ್ದ ಆದಿತ್ಯ-ಆರಾಧನಾ
ನೋಂದಣಿ ಮತ್ತು ಭಾಗವಹಿಸುವಿಕೆ
ಉದ್ಯೋಗಾಕಾಂಕ್ಷಿಗಳು https://udyogamela.ksdckarnataka.com
ವೆಬ್ಸೈಟ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ರಾಜ್ಯದ ಯಾವುದೇ ಭಾಗದ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.
ಕೌಶಲ್ಯಾಭಿವೃದ್ಧಿಗೆ ಸರ್ಕಾರದ ಒತ್ತು
“ಉದ್ಯೋಗ ಮೇಳದಲ್ಲಿ(Job fair in Mysore) 221 ಕಂಪನಿಗಳು ಭಾಗವಹಿಸಲು ಖಚಿತಪಡಿಸಿದ್ದು, ಸ್ಥಳೀಯ ಕಂಪನಿಗಳೂ ಸೇರ್ಪಡೆಯಾಗಲಿವೆ. ಕಂಪನಿಗಳು ಸುಮಾರು 45,000 ಖಾಲಿ ಹುದ್ದೆಗಳಿರುವುದಾಗಿ ಮಾಹಿತಿ ನೀಡಿವೆ. ಅಭ್ಯರ್ಥಿಗಳ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ,” ಎಂದು ಡಾ. ಪಾಟೀಲ್ ವಿವರಿಸಿದರು.
ಇದನ್ನೂ ಓದಿ: ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ: DK Shivkumar
ಒಂದು ವೇಳೆ ಮೇಳದಲ್ಲಿ(Job fair in Mysore)ಉದ್ಯೋಗ ಸಿಗದಿದ್ದಲ್ಲಿ ಅಂತಹ ಅಭ್ಯರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ, ಅವರಿಗೆ ಅಗತ್ಯವಿರುವ ಕೌಶಲ್ಯ ತರಬೇತಿಯನ್ನು ‘ಯುವ ನಿಧಿ ಪ್ಲಸ್’ ಯೋಜನೆಯಡಿ ನೀಡಲಾಗುವುದು. ಈ ತರಬೇತಿ ಪಡೆದರೆ ‘ಯುವ ನಿಧಿ’ ಭತ್ಯೆ ನಿಲ್ಲುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಉದ್ಯೋಗ ಸಿಗುವವರೆಗೆ ಅಥವಾ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಹಿಂದಿನ ಯಶಸ್ಸು ಮತ್ತು ಭವಿಷ್ಯದ ದೃಷ್ಟಿ
ಈ ಹಿಂದೆ ರಾಜ್ಯದ ವಿವಿಧೆಡೆ ನಡೆಸಿದ 6 ಉದ್ಯೋಗ ಮೇಳಗಳಲ್ಲಿ 12,966 ಅಭ್ಯರ್ಥಿಗಳು ಮತ್ತು ಕಾಲೇಜುಗಳ ಸಹಯೋಗದೊಂದಿಗೆ ನಡೆಸಿದ 3 ಮೇಳಗಳಲ್ಲಿ 1,177 ಅಭ್ಯರ್ಥಿಗಳು ಉದ್ಯೋಗ ಪಡೆದಿರುವುದನ್ನು ಸಚಿವರು ಸ್ಮರಿಸಿದರು. “ಈ ಮೇಳವು ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆ ಹೊಂದಿರುವ ಎಲ್ಲರಿಗೂ ಅವಕಾಶಗಳನ್ನುಒದಗಿಸಲಿದೆ. ಇದು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ನೇರ ಸಂಪರ್ಕಕ್ಕೆ ವೇದಿಕೆಯಾಗಲಿದೆ,” ಎಂದು ಅವರು ಅಭಿಪ್ರಾಯಪಟ್ಟರು.
