ನವದೆಹಲಿ: ದಶಕಗಳಿಂದ ಜಾರಿಯಲ್ಲಿದ್ದ ಹಳೆಯ ಕಾರ್ಮಿಕ ಕಾನೂನುಗಳಿಗೆ ಕೇಂದ್ರ ಸರ್ಕಾರ ಈಗ ಐತಿಹಾಸಿಕ ಸುಧಾರಣೆ ನೀಡಿದೆ.(Labour Codes Reform) ಹಿಂದೆ ಇದ್ದ 29 ಪ್ರತ್ಯೇಕ ಕಾನೂನುಗಳನ್ನು ಒಟ್ಟುಗೂಡಿಸಿ, ಕೇವಲ ನಾಲ್ಕು ಸಮಗ್ರ ಸಂಹಿತೆಗಳನ್ನಾಗಿ (ಕಾನೂನುಗಳನ್ನಾಗಿ) ರೂಪಿಸಲಾಗಿದೆ. ಈ ಬದಲಾವಣೆಗಳಿಂದ ನೌಕರರ ಹಕ್ಕುಗಳು ಬಲಗೊಳ್ಳುತ್ತವೆ ಮತ್ತು ದೇಶದಲ್ಲಿ ವ್ಯವಹಾರ ನಡೆಸುವುದು ಮತ್ತಷ್ಟು ಸುಲಭವಾಗುತ್ತದೆ ಎಂದು ಸರ್ಕಾರ ಹೇಳಿದೆ.
ಈ ನಾಲ್ಕು ಹೊಸ ಸಂಹಿತೆಗಳು ಹೀಗಿವೆ:
- ವೇತನ ಸಂಹಿತೆ 2019 (Code on Wagas, 2019)
- ಕೈಗಾರಿಕಾ ಸಂಬಂಧಗಳ ಸಂಹಿತೆ 2020(industrial relations code 2020)
- ಸಾಮಾಜಿಕ ಭದ್ರತಾ ಸಮಿತಿ 2020 (Godan social security 2020)
- ವೃತ್ತಿಪರ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020(OSH & WC code 2020)
- ಗ್ರಾಚ್ಯುಟಿ (Gratuity) ನಿಯಮಗಳಲ್ಲಿ ದೊಡ್ಡ ಸಡಿಲಿಕೆ:
ಗ್ರಾಚ್ಯುಟಿ ಎಂಬುದು ಉದ್ಯೋಗಿಗಳಿಗೆ ಸಿಗುವ ಮಹತ್ವದ ಪ್ರಯೋಜನ. ಈಗ ಇದರಲ್ಲಿನ ನಿಯಮಗಳನ್ನು ಮತ್ತಷ್ಟು ಸರಳವಾಗಿದೆ.
ನಿರ್ದಿಷ್ಟ ಅವಧಿಯ ಉದ್ಯೋಗಿಗಳಿಗೆ (Fixed-term employees): ಈ ಹಿಂದೆ ಐದು ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಂತರವೇ ಗ್ರಾಚ್ಯುಟಿಗೆ ಅರ್ಹತೆ ಇತ್ತು. ಆದರೆ, ಈಗ ನಿರ್ದಿಷ್ಟ ಅವಧಿಯ ಉದ್ಯೋಗಿಗಳು ಒಂದು ವರ್ಷದ ನಿರಂತರ ಸೇವೆ ಪೂರ್ಣಗೊಳಿಸಿದ ತಕ್ಷಣ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ.(Labour Codes Reform)
ವೇತನದ ಲೆಕ್ಕಾಚಾರ (Wages Definition): ಗ್ರಾಚ್ಯುಟಿ, ಪಿಂಚಣಿ ಮತ್ತು ಸಾಮಾಜಿಕ ಭದ್ರತಾ
ಪ್ರಯೋಜನಗಳನ್ನು ಲೆಕ್ಕ ಹಾಕಲು, ಒಟ್ಟು ವೇತನದ 50% (ಅಥವಾ ಸೂಚಿಸಲಾದ ಶೇಕಡಾವಾರು) ಅನ್ನು ‘ವೇತನದ’ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಇದರಿಂದ ಪ್ರಯೋಜನಗಳನ್ನು ಸ್ಥಿರವಾಗಿ ಮತ್ತು ಸಮರ್ಪಕವಾಗಿ ಲೆಕ್ಕ ಹಾಕಲು ಸಾಧ್ಯವಾಗುತ್ತದೆ.
- ಕೆಲಸದ ಸಮಯ, ಓವರ್ಟೈಮ್: ಹಳೆಯ ಪದ್ಧತಿಗೆ ಅಂತ್ಯ!
ಕೆಲಸದ ಅವಧಿ: ಪ್ರಸ್ತುತ 9 ಗಂಟೆಗಳಿಗೆ ಸೀಮಿತವಾಗಿದ್ದ ಶಿಷ್ಟ್ಯಗಳು, ಈಗ ದಿನಕ್ಕೆ 8 ರಿಂದ 12 ಗಂಟೆಗಳವರೆಗೆ ಇರಬಹುದು. ಆದರೆ, ವಾರದಲ್ಲಿ ಒಟ್ಟು ಕೆಲಸದ ಅವಧಿ 48 ಗಂಟೆಗಳನ್ನು ಮೀರಬಾರದು.
ಓವರ್ಟೈಮ್ (Overtime): ಓವರ್ಟೈಮ್ಗೆ ಸಾಮಾನ್ಯ ವೇತನಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಿನ ವೇತನ ನೀಡಬೇಕು. ಇದು ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭ ತರುತ್ತದೆ.
- ಗಿಗ್, ಪ್ಲಾಟ್ ಫಾರ್ಮ್ ಕಾರ್ಮಿಕರಿಗೆ ಭದ್ರತೆ (ಹೊಸ ಹೆಜ್ಜೆ);
ಸಾಂಪ್ರದಾಯಿಕ ಕಾರ್ಮಿಕ ಕಾನೂನುಗಳಲ್ಲಿ ಭದ್ರತೆ ಇಲ್ಲದ ‘ಗಿಗ್’ (ಉದಾ: ಸ್ವಿಗ್ಗಿ, ಜೊಮಾಟೋ ಡೆಲಿವರಿ ಏಜೆಂಟರು) ಮತ್ತು ‘ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಈ ಸಂಹಿತೆಗಳು ಮೊದಲ ಬಾರಿಗೆ ಗುರುತಿಸಿವೆ.
ಇವರಿಗಾಗಿ ವಿಶೇಷವಾಗಿ ಒಂದು ನಿಧಿಯನ್ನು ಸ್ಥಾಪಿಸಬೇಕೆಂದು ಕಾನೂನು ಹೇಳುತ್ತದೆ. ಈ ನಿಧಿಯ ಮೂಲಕ ಅವರಿಗೆ ಜೀವ ವಿಮೆ, ಅಂಗವೈಕಲ್ಯ ಆರೋಗ್ಯ ಮತ್ತು ವೃದ್ಧಾಪ್ಯ ಪ್ರಯೋಜನಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳು ದೊರೆಯುತ್ತವೆ.
- ಮನೆಯಿಂದ ಕೆಲಸ (Work From Home) ಅವಕಾಶ:
ಸೇವಾ ವಲಯದಲ್ಲಿ ಉದ್ಯೋಗಿಗಳ ಅನುಕೂಲಕ್ಕಾಗಿ, ಪರಸ್ಪರ ಒಪ್ಪಿಗೆಯ ಮೇರೆಗೆ ಮನೆಯಿಂದ ಕೆಲಸ’ ಮಾಡುವ ಅವಕಾಶವನ್ನು ಈ ಕೋಡ್ಗಳಲ್ಲಿ ಸೇರಿಸಲಾಗಿದೆ. ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿದ್ದ ಈ ವಿಧಾನ, ಈಗ ಅಧಿಕೃತವಾಗಿ ಕಾನೂನಿನ ಭಾಗವಾಗಿದೆ.
ವಲಸೆ ಕಾರ್ಮಿಕರಿಗೆ (Migrant Workers) ಭದ್ರತೆ:
ಪ್ರಯಾಣ ಭತ್ಯೆ: ಅಂತರ-ರಾಜ್ಯ ವಲಸೆ ಕಾರ್ಮಿಕರಿಗೆ (ISMW) 12 ತಿಂಗಳಲ್ಲಿ ಒಮ್ಮೆ ತಮ್ಮ ಸ್ವಂತ ಸ್ಥಳಕ್ಕೆ ಹೋಗಲು ಒಂದು ದೊಡ್ಡ ಮೊತ್ತದ ವಾರ್ಷಿಕ ಪ್ರಯಾಣ ಭತ್ಯೆಯನ್ನು ನೀಡಬೇಕು.
ಸಾಮಾಜಿಕ ಭದ್ರತೆಯ ಪೋರ್ಟೆಬಿಲಿಟಿ: ವಿವಿಧ ರಾಜ್ಯಗಳಲ್ಲಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯುವ ಅವಕಾಶ ಇರುತ್ತದೆ.
ಸಹಾಯವಾಣಿ: ಅವರಿಗಾಗಿ ಟೋಲ್-ಫ್ರೀ ಸಹಾಯವಾಣಿ ಲಭ್ಯವಿರುತ್ತದೆ.
- ಕನಿಷ್ಠ ವೇತನ (Minimum Wages) ಭರವಸೆ:
ಸಂಘಟಿತ (Organized) ಅಥವಾ ಅಸಂಘಟಿತ (Unorganised) ವಲಯದಲ್ಲಿ ಕೆಲಸ ಮಾಡುವವರಾಗಲಿ – ಪ್ರತಿ ಕಾರ್ಮಿಕರಿಗೂ ಸರ್ಕಾರ ನಿರ್ಧರಿಸಿದ ಕನಿಷ್ಠ ವೇತನ ಕಡ್ಡಾಯವಾಗಿ ಅನ್ವಯಿಸುತ್ತದೆ.
ಫ್ಲೋರ್ ವೇಜ್ (Floor Wage): ದೇಶಾದ್ಯಂತ ಕನಿಷ್ಠ ಜೀವನ ಮಟ್ಟದ ಆಧಾರದ ಮೇಲೆ ಕೇಂದ್ರವು ಒಂದು ಫ್ಲೋರ್ ವೆಜ್ ಅನ್ನೋ ನಿರ್ಧರಿಸುತ್ತದೆ. ಯಾವುದೇ ರಾಜ್ಯವು ಈ ಮಟ್ಟಕ್ಕಿಂತ ಕಡಿಮೆ ಕನಿಷ್ಠ ವೇತನ ನಿಗದಿಪಡಿಸುವಂತಿಲ್ಲ.
- ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳು
ಸಮಾನ ವೇತನ: ಸಮಾನ ಕೆಲಸಕ್ಕೆ ಸ್ತ್ರೀ ಮತ್ತು ಪುರುಷರಿಗೆ ಸಮಾನ ವೇತನ ನೀಡುವುದು ಕಡ್ಡಾಯ
ರಾತ್ರಿ ಪಾಳಿಗಳು: ಸೂಕ್ತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ, ಮಹಿಳೆಯರು ರಾತ್ರಿ ಪಾಳಿ ಗಳಲ್ಲಿ ಕೆಲಸ ಮಾಡಲು ಅನುಮತಿ ಲಭಿಸುತ್ತದೆ.
ಪ್ರಸುತಿ ಪ್ರಯೋಜನಗಳು (Maternity Benefits): ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಸೇರಿದಂತೆ ಎಲ್ಲಾ ಮಹಿಳೆಯರಿಗೆ 26 ವಾರಗಳ ವೇತನ ಸಹಿತ ಪ್ರಶಸ್ತಿ ರಜೆಯನ್ನು ವಿಸ್ತರಿಸಲಾಗಿದೆ.
