Tumkur News:: ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ(SIT) ವಿದ್ಯಾರ್ಥಿಗಳು ಹೊಸದಾಗಿ ಯಕ್ಷಗಾನ ತರಬೇತಿ ಪಡೆದು ಶುಕ್ರವಾರ ನಡೆದ ‘ಸ್ಪಂದನ-2025’ ಕರ್ಯಕ್ರಮದಲ್ಲಿ ಮೊದಲಬಾರಿಗೆ ‘ಸುರ್ಶನ ರ್ವಭಂಗ’ ಎಂಬ ಯಕ್ಷಗಾನವನ್ನು ಪ್ರರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾದರು.
“ಬೇರೆಬೇರೆ ವಿಭಾಗಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿರುವ ವಿದ್ಯರ್ಥಿಗಳಿಗಾಗಿ ತುಮಕೂರಿನ ಯಕ್ಷದೀವಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಆರತಿ ಪಟ್ರಮೆ ಒಂದು ತಿಂಗಳ ಯಕ್ಷಗಾನ ಕರ್ಯಾಗಾರವನ್ನು ನಡೆಸಿ ತರಬೇತಿ ನೀಡಿದ್ದಾರೆ. ಯುವಜನರು ಸತತ ಅಭ್ಯಾಸ ಮಾಡಿ ಸಂಕರ್ಣ ಕಲೆಯೊಂದನ್ನು ರೂಢಿಸಿಕೊಂಡು ಪ್ರರ್ಶಿಸಿರುವುದು ಕಲೆಯ ಮೇಲಿನ ಶ್ರದ್ಧೆ ಹಾಗೂ ಬದ್ಧತೆ ತೋರಿಸುತ್ತದೆ” ಎಂದು ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕ ಡಾ. ಸಾಗರ್ ಟಿ.ಎಸ್. ತಿಳಿಸಿದರು.
ವಿವಿಧ ಅವತಾರಗಳಲ್ಲಿ ವಿಷ್ಣು ಮಾಡಿದ ಎಲ್ಲ ಸಾಧನೆಗಳಿಗೆ ಮೂಲತಃ ತಾನೇ ಕಾರಣ ಎಂದು ಅಹಂಕಾರದಿಂದ ಬೀಗುತ್ತಿದ್ದ ಸುರ್ಶನ ಚಕ್ರಕ್ಕೆ ವಾಸ್ತವದ ಅರಿವಾಗುವ ಕಥಾನಕವುಳ್ಳ ಸುರ್ಶನ ರ್ವಭಂಗ ಯಕ್ಷಗಾನವು ಭಾಗವತದ ಒಂದು ಪ್ರಸಂಗವಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ದೀಪಕ್ ತುಳುಪುಳೆ, ಚೆಂಡೆವಾದಕರಾಗಿ ಪೃಥ್ವಿ ಬಡೆಕ್ಕಿಲ, ಮದ್ದಳೆವಾದಕರಾಗಿ ಸಂವೃತ ರ್ಮಾ, ಚಕ್ರತಾಳ ಕಲಾವಿದರಾಗಿ ಪ್ರದೀಪ್ ಸಹಕರಿಸಿದರು.
ಮುಮ್ಮೇಳದಲ್ಲಿ ಇಂಜಿನಿಯರಿಂಗ್ ವಿದ್ಯರ್ಥಿಗಳಾದ ತೇಜು ವಿಘ್ನೇಶ್, ಮಹಿಮಾ ಭಟ್, ಸುಚಿತ್ರಾ ಬಿ.ಎಸ್., ಲಹರಿ ಟಿ.ಜೆ., ಅನನ್ಯ ವಿ., ನಾಗಪ್ರಿಯ ಕೆ.ಜಿ., ಕಾವ್ಯ ಸಿಂಚನಾ, ಗೌರಿ ಎಸ್., ಚಿಂತನಾ ಯು.ಎಸ್., ವಸುಧಾ ಸಿ.ಪಿ., ಸಂಜನಾ ಎಂ., ಶ್ರಾವ್ಯ ರಾಜೇಶ್ ನಿಂಜೂರ್, ಚೈತ್ರಾ ಎಸ್., ರಕ್ಷಿತಾ ಕೆ.ಎಸ್., ಸಹನಾ ಇ., ಭಾವನಾ ಬಿ.ಎಲ್., ರ್ಷಿತಾ, ಸೌಮ್ಯಾ ನಾಗೇಶ್ ದೇವಾಡಿಗ, ಇಂಪನಾ ವಿವಿಧ ಪಾತ್ರಗಳನ್ನು ಅಭಿನಯಿಸಿದರು.
