Reading Time: < 1 minute
Delhi Police Recruitment 2025: ದೆಹಲಿ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ (ಅಸಿಸ್ಟೆಂಟ್ ವೈರ್ಲೈಸ್ ಆಫೀಸರ್-AWO) ಮತ್ತು ಟೆಲಿ ಪ್ರಿಂಟರ್ ಅಪರೇಟರ್ (TPO) ಹುದ್ದೆಗಳ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (SSC) ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.(Delhi Police Recruitment 2025)
ಪ್ರಮುಖ ದಿನಾಂಕಗಳು ಮತ್ತು ಪರೀಕ್ಷಾ ವಿವರ:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 15, 2025.
- ಕಂಪ್ಯೂಟರ್ ಆಧಾರಿತ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಇದು ಡಿಸೆಂಬರ್ 2025 ಮತ್ತು ಜನವರಿ 2026 ರ ಅವಧಿಯಲ್ಲಿ ಜರುಗಲಿದೆ.
ಹುದ್ದೆಗಳ ವಿವರ:
- ಒಟ್ಟು 552 ಹುದ್ದೆಗಳಿಗೆ ನೇಮತಾತಿ ನಡೆಯುತ್ತಿದೆ:
- ಪುರುಷ ಅಭ್ಯರ್ಥಿಗಳಿಗೆ 370 ಹುದ್ದೆಗಳು
- ಮಹಿಳಾ ಅಭ್ಯರ್ತಿಗಳಿಗೆ 182 ಹುದ್ದೆಗಳು
ಶೈಕ್ಷಣಿಕ ಮತ್ತು ತಾಂತ್ರಿಕ ಅರ್ಹತೆಗಳು:
ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು:
- ಅಂಗೀಕೃತ ಮಂಡಳಿಯಿಂದ ಪಿಯುಸಿ (ಹಿರಿಯ ಸೆಕೆಂಡರಿ) ಯಲ್ಲಿ ವಿಜ್ಞಾನ (Science) ಮತ್ತು ಗಣಿತ (Mathematics) ವಿಷಯಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ
- ಮೆಕ್ಯಾನಿಕಲ್ ಕಮ್ ಅಪರೇಟರ್, ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
ಹೆಚ್ಚುವರಿ ಕೌಶಲ್ಯಗಳು:
- ಕಂಪ್ಯೂಟರ್ ಬಗ್ಗೆ ಉತ್ತಮ ಜ್ಞಾನ/ಪ್ರಾವೀಣ್ಯತೆ ಕಡ್ಡಾಯ.
- ಟೈಪಿಂಗ್ ಕೌಶಲ್ಯ, ಇಂಗ್ಲಿಷ್ ಬೆರಳನ್ನುವಿನಲ್ಲಿ 15 ನಿಮಿಷಗಳಲ್ಲಿ 1000 ಕೀ ಡಿಪ್ರೆಷನ್ಗಳನ್ನು ಟೈನ್ ಮಾಡುವ ಸಾಮರ್ಥ್ಯ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಶುಲ್ಕ:
- ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಮತ್ತು ಮಾಪನ ಪರೀಕ್ಷೆ (PET & PST) ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ.
- ಅರ್ಜಿ ಶುಲ್ಕವಾಗಿ 100 ರೂ. ನಿಗದಿಪಡಿಸಲಾಗಿದೆ.
- ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಮಾಜಿ ಸೈನಿಕರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಜಾಲತಾಣಗಳನ್ನು ಸಂಪರ್ಕಿಸಬಹುದು.
- ಎಸ್ಎಸ್ಸಿ ಮುಖ್ಯ ಕಚೇರಿ (ನವದೆಹಲಿ) https://ssc.nic.in/
- ಎಸ್ಎಸ್ಸಿ ಕರ್ನಾಟಕ-ಕೇರಳ ಪ್ರದೇಶ www.ssckkr.kar.nic.in
ಅಲ್ಲದೆ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ಸಹಾಯವಾಣಿ ಸಂಖ್ಯೆ 080-25502520 ಗೆ ಕರೆ ಮಾಡಬಹುದು.(Delhi Police Recruitment 2025)
