Navapanchama Rajayoga: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಶಾರದಾ ನವರಾತ್ರಿಯ ಸಮಯದಲ್ಲಿ ಅನೇಕ ಶುಭಯೋಗಗಳು ರೂಪುಗೊಳ್ಳುತ್ತವೆ. ಈ ವರ್ಷ, ನವರಾತ್ರಿ ಮತ್ತು ದೀಪಾವಳಿ ಸಂದರ್ಭದಲ್ಲಿ, ಗ್ರಹಗಳ ರಾಜನಾದ ಸೂರ್ಯ ಮತ್ತು ಸೇನಾಧಿಪತಿಯಾದ ಮಂಗಳ ಗ್ರಹ ಸೇರಿಕೊಂಡು “ನವಪಂಚಮ ರಾಜಯೋಗ”ವನ್ನು(Navapanchama Rajayoga) ಸೃಷ್ಟಿಸುತ್ತಿವೆ. ವಿಶೇಷವಾಗಿ, ಅಕ್ಟೋಬರ್ 20 ರ ದೀಪಾವಳಿಯಂದು, ಶನಿ ಮತ್ತು ಬುಧ ಗ್ರಹಗಳೂ ಸೇರಿ 30 ವರ್ಷಗಳ ನಂತರ ಈ ಅಪರೂಪದ ಯೋಗವನ್ನು ನಿರ್ಮಿಸುತ್ತಿವೆ. ಈ ಕಾರಣದಿಂದ, ಕೆಲವು ರಾಶಿಗಳವರಿಗೆ ಮುಂದಿನ ದಿನಗಳಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರಿಗೂ ಇದು ಸುವರ್ಣಾವಕಾಶ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ನವಪಂಚಮ ರಾಜಯೋಗದಿಂದ (Navapanchama Rajayoga) ಯಾವ ರಾಶಿಗಳಿಗೆ ಶುಭ ಫಲಗಳು ದೊರೆಯಲಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಕರ್ಕಾಟಕ ರಾಶಿ:(Cancer)
ಕರ್ಕಾಟಕ ರಾಶಿಯವರಿಗೆ ಈ ಯೋಗದಿಂದ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ನಿಮ್ಮ ಹಲವು ದಿನಗಳ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರಸ್ಥರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದ್ದು, ಇದರಿಂದ ಭವಿಷ್ಯದಲ್ಲಿ ಲಾಭಗಳಿವೆ. ವ್ಯವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಲಿದೆ. ಜೊತೆಗೆ, ಹೊಸ ಆಸ್ತಿ ಅಥವಾ ಭೂಮಿ ಖರೀದಿ ಯೋಗವಿದೆ. ಹಣ ಉಳಿತಾಯದಲ್ಲಿಯೂ ಯಶಸ್ಸು ಕಾಣುವಿರಿ.
ಇದನ್ನೂ ಓದಿ: Bike Theft: ತಂದೆಯ ಜೀವ ಉಳಿಸಿಲು ಕಳ್ಳನಾದ ಮಗ, ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ
ವೃಷಭ ರಾಶಿ:(Taurus)
ನವರಾತ್ರಿ ಮತ್ತು ದೀಪಾವಳಿ ಸಂದರ್ಭದಲ್ಲಿ ರೂಪುಗೊಳ್ಳುವ ಈ ರಾಜಯೋಗ ವೃಷಭ ರಾಶಿಯವರಿಗೆ ಅದೃಷ್ಟ ತರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದ್ದು, ಹೊಸ ಗಳಿಕೆಯ ಮೂಲಗಳು ಸೃಷ್ಟಿಯಾಗುತ್ತವೆ. ನೀವು ಮಾಡಿದ ಹೂಡಿಕೆಗಳು ಉತ್ತಮ ಲಾಭ ತರಲಿವೆ. ನಿಮ್ಮ ಇಷ್ಟಾರ್ಥಗಳು ಪೂರೈಸುವ ಸಾಧ್ಯತೆ ಇದೆ ಮತ್ತು ಮಕ್ಕಳಿಂದಲೂ ಸಂತೋಷದ ಸುದ್ದಿ ಕೇಳುವಿರಿ. ವ್ಯಾಪಾರಸ್ಥರಿಗೆ ಇದು ಲಾಭದಾಯಕ ಸಮಯ.
ಕನ್ಯಾರಾಶಿ (Virgo)
ಕನ್ಯಾ ರಾಶಿಯವರಿಗೆ ಈ ನವಪಂಚಮ ರಾಜಯೋಗ ಹಲವು ಪ್ರಯೋಜನಗಳನ್ನು ತರಲಿದೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ಶುಭ ಫಲಗಳನ್ನು ಮತ್ತಷ್ಟು ಹೆಚ್ಚಿಸಲು “ಓಂ ಸೂರ್ಯಾಯ ನಮಃ” ಮಂತ್ರವನ್ನು ಜಪಿಸುವುದು ಉತ್ತಮ.
ಮಕರ ರಾಶಿ: (Capricorn)
ಮಕರ ರಾಶಿಯವರಿಗೆ ಈ ರಾಜಯೋಗದಿಂದ ಸಾಕಷ್ಟು ಪ್ರಯೋಜನಗಳು ದೊರೆಯಲಿವೆ. ವ್ಯಾಪಾರದಲ್ಲಿ ಉತ್ತಮ ಪುಗತಿ ಕಾಣುವಿರಿ. ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಆಸ್ತಿ ಅಥವಾ ವಾಹನ ಖರೀದಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬಹುದು. ನಿಮ್ಮ ವೈಯಕ್ತಿಕ ಜೀವನ ಸುಧಾರಿಸುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಗಳಿದ್ದು, ಸಹೋದ್ಯೋಗಿಗಳು ಬೆಂಬಲ ದೊರೆಯಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಬಲಗೊಳ್ಳಲಿದೆ.
ಧನುರಾಶಿ:(Sagittarius)
ಧನು ರಾಶಿಯವರು ಈ ಯೋಗದಿಂದ ಹೆಚ್ಚು ಲಾಭ ಪಡೆಯಲಿದ್ದಾರೆ. ನೀವು ಕೈ ಹಾಕಿದ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುವಿರಿ. ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿವೆ. ವ್ಯಾಪಾರದಲ್ಲಿ ಸ್ಪರ್ಧಾತ್ಮಕರ ಮೇಲೆ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದೆ ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ.
ಶ್ರೀಧರ್ ಶಾಸ್ತ್ರಿ, ತುಮಕೂರು
