ಬೆಂಗಳೂರು: ತಂದೆಯ ಚಿಕಿತ್ಸೆಗೆ ಹಣ ಹೊಂದಿಸಲು ದಾರಿ ಕಾಣದೆ, ಬೈಕ್ ಕಳ್ಳನಾಗಿ ಮಾರ್ಪಟ್ಟಿದ್ದ (Bike Theft) ಯುವಕನನ್ನು ವೈಟ್ಫೀಲ್ಡ್ ಪೊಲೀಸರು(Write Filed Police) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಅನಂತಪುರ ಮೂಲದ 24 ವರ್ಷದ ಬಿ. ಫಿರೋಜ್ ಎಂದು ಗುರುತಿಸಲಾಗಿದ್ದು, ಈತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 20 ಕದ್ದ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫಿರೋಜ್ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ವೈಟ್ ಫೀಲ್ಡ್ ಬಳಿಯ ಅನುಗೊಂಡನಹಳ್ಳಿಯಲ್ಲಿ ವಾಸಿಸುತ್ತಿದ್ದ. ಆದರೆ ಅವರ ತಂದೆ ಮೊಹಮ್ಮದ್ ಪಾಷಾ ಅನಂತಪುರದಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ತಂದೆಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಿತ್ತು. ಹಣ ಹೊಂದಿಸಲು ಸಾಧ್ಯವಾಗದೆ ಫಿರೋಜ್ ಬೈಕ್ಗಳನ್ನು ಕದಿಯಲು ಆರಂಭಿಸಿದ್ದ. ಆರಂಭದಲ್ಲಿ ತಂದೆಯ ಚಿಕಿತ್ಸೆಗಾಗಿ ಒಂದು ಬೈಕ್ ಕದ್ದರೂ, ಕ್ರಮೇಣ ಇದು ಅವನ ವೃತ್ತಿಯಾಗಿ ಮಾರ್ಪಟ್ಟಿತ್ತು ಕಾಡುಗೋಡಿ, ವೈಟ್ ಫೀಲ್ಡ್ ಮತ್ತು ಮೆಟ್ರೋ ನಿಲ್ದಾಣಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ.(Bike Theft)
ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾದಾಗ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದರು. ಸ್ಥಳೀಯ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿದರು. ನಂತರ ಫಿರೋಜ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಕಥೆ ಬೆಳಕಿಗೆ ಬಂದಿದೆ.(Bike Theft)
ಆರೋಪಿ ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಕದ್ದ ಬೈಕ್ ಗಳಲ್ಲಿ ಐದನ್ನು ಮದ್ದೂರಿನಲ್ಲಿ ತನ್ನ ಸ್ನೇಹಿತನಿಗೆ ಮಾರಾಟ ಮಾಡಿದ್ದನು. ಒಂಬತ್ತು ಬೈಕ್ಗಳನ್ನು ಆಂಧ್ರಪುದೇಶದ(Andrapradesh) ತನ್ನ ಸಂಬಂಧಿಕರಿಗೆ ನೀಡಿದ್ದನು. ಉಳಿದ ಆರು ಬೈಕ್ ಗಳನ್ನು ವೈಟ್ ಫೀಲ್ಡ್ ನ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ. ಒಂದು ಕಡೆ ತಂದೆಯ ಜೀವ ಉಳಿಸಲು ಮಾಡಿದ ಪ್ರಯತ್ನ, ಇನ್ನೊಂದು ಕಡೆ ಅಪರಾಧದ ಹಾದಿ ಈ ಘಟನೆ ಕೇಳಿದವರಿಗೆ ಒಂದು ಕ್ಷಣ ನೋವು ಮತ್ತು ಕರುಣೆ ಎರಡೂ ಉಂಟಾಗುತ್ತದೆ.
