ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.(GST Reforms 2025) ಇದರ ಅನ್ವಯ, ₹2 ಕೋಟಿಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಸಣ್ಣ ಉದ್ಯಮಗಳು ಮತ್ತು ವೃತ್ತಿಪರರು ಇನ್ನು ಮುಂದೆ ವಾರ್ಷಿಕ ಜಿಎಸ್ಟಿ ರಿಟರ್ನ್ಸ್(GST Returns) ಸಲ್ಲಿಸುವ ಅಗತ್ಯವಿಲ್ಲ. ಈ ಬದಲಾವಣೆಯು ತೆರಿಗೆ ಪಾವತಿದಾರರಿಗೆ ದೊಡ್ಡ ಮಟ್ಟದ ಆಡಳಿತಾತ್ಮಕ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ ಎಂದು ಸರ್ಕಾರ ಹೇಳಿದೆ.
ಈ ಕುರಿತು ಸಪ್ಟೆಂಬರ್ 17, 2025 ರಂದು ಕೇಂದ್ರ ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಜಿಎಸ್ಟಿ ಕಾಯಿದೆ 2017ರ ಸೆಕ್ಷನ್ 44(1)ರ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಈ ನಿರ್ಧಾರವು 2024-25ರ ಹಣಕಾಸು ವರ್ಷದಿಂದಲೇ ಜಾರಿಗೆ ಬರಲಿದೆ. ಇದರೊಂದಿಗೆ, ಈವರೆಗೆ 25 ಕೋಟಿ ವರೆಗಿನ ವಹಿವಾಟು ಹೊಂದಿರುವ ತೆರಿಗೆದಾರರು ವಾರ್ಷಿಕ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿತ್ತು. ಇದೀಗ ₹2 ಕೋಟೆಗಿಂತ ಕಡಿಮೆ ವಹಿವಾಟು ಇರುವವರಿಗೆ ಈ ಕಡ್ಡಾಯ ನಿಯಮದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: Love Story: ಪ್ರೀತಿಯ ಮಾತುಗಳು-ಅವನ ಹೃದಯದ ಕವಿತೆ, ಅವಳ ನಗುವಿನ ಸಾಕ್ಷಿ
ಈ ಕುರಿತು ತೆರಿಗೆ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬದಲಾವಣೆಯು ಸಣ್ಣ ಉದ್ಯಮಿಗಳಿಗೆ ರಿಟರ್ನ್ಸ್ ಸಲ್ಲಿಸಲು ತಗಲುತ್ತಿದ್ದ ಸಮಯ ಮತ್ತು ಹಣವನ್ನು ಉಳಿಸಲಿದೆ ಎಂದು ಹೇಳಿದ್ದಾರೆ. ಆದರೂ, ಈ ಕ್ರಮದಿಂದ ಕೆಲವು ಅಪಾಯಗಳೂ ಇವೆ ಎಂದು ಎಚ್ಚರಿಕೆ ನೀಡಿದ್ದಾರೆ. ವಾರ್ಷಿಕ ರಿಟರ್ನ್ಸ್ ಸಲ್ಲಿಸುವುದನ್ನು ತಪ್ಪಿಸಿದರೆ, ಮಾಸಿಕ ಅಥವಾ ತ್ರೈಮಾಸಿಕ ರಿಟರ್ನ್ಸ್ನಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಭವಿಷ್ಯದಲ್ಲಿ ತೊಂದರೆಗಳಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Remove Stretch Marks Naturally: ಡೆಲಿವರಿ ನಂತರ ಬರುವ ಸ್ಟ್ರೆಚ್ ಮಾರ್ಕ್ಸ್ ಅನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್
ಒಟ್ಟಾರೆಯಾಗಿ, ಈ ಹೊಸ ನಿಯಮವು ಸಣ್ಣ ವ್ಯಾಪಾರಗಳಿಗೆ ದೊಡ್ಡ ನಿರಾಳತೆ ನೀಡಿದರೂ, ಅದರ ಸಾಧಕ-ಬಾಧಕಗಳ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ.
