ವಾಷಿಂಗ್ಟನ್ : ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಮನ್(John Bolman) ಅವರು, ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್(American President Donald Trump) ನಡುವಿನ ವೈಯಕ್ತಿಕ ಸಂಬಂಧ ಈಗ ಅಂತ್ಯವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ದೇಶದ ನಾಯಕರೊಂದಿಗಿನ ಅಮೆರಿಕ ಅಧ್ಯಕ್ಷರ(America President) ವೈಯಕ್ತಿಕ ಸಂಬಂಧಗಳು ಕಠಿಣ ಪರಿಸ್ಥಿತಿಗಳಲ್ಲಿ ರಕ್ಷಣೆಯಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಈ ಹೇಳಿಕೆಗಳು ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳು ಅತ್ಯಂತ ಸವಾಲಿನ ಹಂತವನ್ನು ಎದುರಿಸುತ್ತಿರುವ ಸಮಯದಲ್ಲಿ ಬಂದಿರುವುದು ಗಮನಾರ್ಹ. ಟ್ರಂಪ್ ಆಡಳಿತದ(Trump Era) ಸುಂಕ ನೀತಿಗಳು ಮತ್ತು ಭಾರತದ ಬಗೆಗಿನ ನಿರಂ ತರ ಟೀಕೆಗಳು ಈ ಸಂಬಂಧವನ್ನು ಮತ್ತಷ್ಟು ಹದಗೆಡಿಸಿವೆ.
ಬ್ರಿಟಿಷ್ ಮಾಧ್ಯಮ ಪೋರ್ಟಲ್ ಎಲ್ಬಿಸಿಗೆ ನೀಡಿದ ಸಂದರ್ಶನದಲ್ಲಿ ಬೋಲ್ಮನ್ ಅವರು ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ತಮ್ಮ ಸಂಬಂಧಗಳ ಕುರಿತಾಗಿ ಮಾತನಾಡಿದ್ದು, “ನನ್ನ ಪ್ರಕಾರ, ಟ್ರಂಪ್ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ಅವರ ವೈಯಕ್ತಿಕ ಬಾಂಧವ್ಯದ ಆಧಾರದ ಮೇಲೆ ನೋಡುತ್ತಾರೆ. ಉದಾಹರಣೆಗೆ, ವ್ಯಾಡಿಮಿರ್ ಪುಟಿನ್(Vladimir Putin) ಅವರೊಂದಿಗಿನ ಸಂಬಂಧ ಚೆನ್ನಾಗಿದ್ದರೆ, ಅಮೆರಿಕ ಮತ್ತು ರಷ್ಯಾ ನಡುವಿನ ಸಂಬಂಧವೂ ಉತ್ತಮವಾಗಿದೆ ಎಂದು ಅವರು ಭಾವಿಸುತ್ತಾರೆ, ಆದರೆ ವಾಸ್ತವ ಹಾಗಲ್ಲ” ಎಂದು ವಿವರಿಸಿದರು.
“ಟ್ರಂಪ್ (Donald Trump) ಅವರು ಮೋದಿ(Narendra Modi) ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಈಗ ಅದು ಕೊನೆಗೊಂಡಿದೆ ಎಂದು ನಾನು ನಂಬುತ್ತೇನೆ. ಇದು ಬ್ರಿಟನ್ (ಪ್ರಧಾನಿ) ಕೀರ್ ಸ್ಮಾರ್ಮರ್ ಸೇರಿದಂತೆ ಎಲ್ಲರಿಗೂ ಒಂದು ಪಾಠವಾಗಿದೆ. ವೈಯಕ್ತಿಕ ಸಂಬಂಧಗಳು ಕೆಲವೊಮ್ಮೆ ಸಹಾಯ ಮಾಡಬಹುದು, ಆದರ ಅವು ನಿಮ್ಮನ್ನು ಕೆಟ್ಟ ಸಂದರ್ಭಗಳಿಂದ ರಕ್ಷಿಸಲಾರವು,” ಎಂದು ಅವರು ಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಬೋಲ್ಡನ್ ಈ ಹಿಂದೆಯೇ, ಟ್ರಂಪ್ ಆಡಳಿತವು ಭಾರತದ ರಷ್ಯಾದ ತೈಲ ಖರೀದಿ ಮೇಲೆ ವಿಧಿಸಿದ ಸುಂಕಗಳು ಭಾರತವನ್ನು ರಷ್ಯಾ ಮತ್ತು ಚೀನಾಕ್ಕೆ ಮತ್ತಷ್ಟು ಹತ್ತಿರ ತಳ್ಳಿರಬಹುದು ಎಂದು ಹೇಳಿದ್ದರು. ಪ್ರಸ್ತುತ, ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಬ್ರಿಟನ್ ಗೆ ಭೇಟಿ ನೀಡುವ ಕಾರ್ಯಕ್ರಮವಿದೆ.
