New OTT Movies: ಸೆಪ್ಟೆಂಬರ್ ತಿಂಗಳ (September) ಆರಂಭ ಸಿನಿಪ್ರಿಯರಿಗೆ ಬಂಪರ್ ಕೊಡುಗೆ ನೀಡಿದೆ. ಕ್ರೈಂ ಥಿಲ್ಲರ್ಗಳಿಂದ ಹಿಡಿದು, ಭರ್ಜರಿ ಆಕ್ಷನ್ ಚಿತ್ರಗಳು ಮತ್ತು ಮನರಂಜನೆಯ ಹಾಸ್ಯಮಯ ಸಿನಿಮಾಗಳವರೆಗೆ, ಈ ವಾರ ಹಲವು ಭಾಷೆಗಳ ಬಹು ನಿರೀಕ್ಷಿತ ಚಿತ್ರಗಳು OTT ವೇದಿಕೆಗಳಲ್ಲಿ ಬಿಡುಗಡೆಯಾಗುತ್ತಿವೆ. ನೀವು ಸಸ್ಪೆನ್ಸ್, ಆ್ಯಕ್ಷನ್, ಅಥವಾ ಪ್ರಾದೇಶಿಕ ಕಥೆಗಳನ್ನು ಇಷ್ಟಪಡುವವರಾಗಿದ್ದರೆ, ಈ ವಾರ ಏನಾದರೊಂದು ಹೊಸ ಸಿನಿಮಾ ಖಂಡಿತಾ ಇರುತ್ತದೆ. ಹಾಗಾದರೆ, ಈ ವಾರ ಯಾವೆಲ್ಲಾ ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ ಎಂದು ನೋಡೋಣ.
ಇದನ್ನೂ ಓದಿ: Gold Rate: ಚಿನ್ನದ ಬೆಲೆ ಇಳಿಕೆಯತ್ತ, ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಓಟಕ್ಕೆ ಬ್ರೇಕ್
ಎಕ್ಕ (ekka) – ಜೀ5 – ಸೆಪ್ಟೆಂಬರ್ 5
ಯುವ ರಾಜ್ಕುಮಾರ್ ಅವರ ಮೊದಲ ಸಿನಿಮಾ ‘ಎಕ್ಕ, ಹಲವು ವರದಿಗಳ ಪ್ರಕಾರ ಜೀ5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತ ದಿನಾಂಕ ಇನ್ನೂ ಘೋಷಣೆಯಾಗಿಲ್ಲದಿದ್ದರೂ, OTTplay ವರದಿಯ ಪ್ರಕಾರ ಇಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ರೋಹಿತ್ ಪದಾಕಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಆ್ಯಕ್ಷನ್-ಡ್ರಾಮಾ ಸಿನಿಮಾ, ಯುವ ರಾಜ್ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಎಂಟ್ರಿ ಸಿಕ್ಕಂತಾಗಿದೆ.
‘ಸು ಫ್ರಂ ಸೊ’ (Su From So) – ಜಿಯೋ ಹಾಟ್ಸ್ಮಾರ್
ರಾಜ್ ಬಿ ಶೆಟ್ಟಿ ನಿರ್ಮಾಣದ ಕಾಮಿಡಿ ಚಿತ್ರ ‘ಸು ಫುಂ ಸೊ’ ಕೂಡ ಈ ವಾರ OTTಯಲ್ಲಿ ಬರಲಿದೆ. 2025ರಲ್ಲಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಪಡೆದಿರುವ ಈ ಸಿನಿಮಾ, ಇಂದು (ಸೆಪ್ಟೆಂಬರ್ 5) ಜಿಯೋ ಹಾಟ್ಸ್ಮಾರ್ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿತ್ರದ ಅಧಿಕೃತ ಪ್ರಕಟಣೆ ಇನ್ನೂ ಬಾಕಿ ಇದ್ದರೂ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶನೀಲ್ ಗೌತಮ್, ಮೈಮ್ ರಾಮದಾಸ್ ಮತ್ತು ಪ್ರಕಾಶ್ ತುಮಿನಾಡ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ: Chandra Grahana 2025: ನಮ್ಮ ಮೇಲೆ ಚಂದ್ರ ಗ್ರಹಣದ ಪ್ರಭಾವ ಹಾಗೂ ಸೂಕ್ತ ಪರಿಹಾರಗಳು
ಜೂನಿಯರ್ (Junior) – ಅಮೆಜಾನ್ ಪ್ರೈಮ್ ವಿಡಿಯೋ
ಕಿರಿಟಿ ರೆಡ್ಡಿ ಅವರ ಚೊಚ್ಚಲ ದ್ವಿಭಾಷಾ ಚಿತ್ರ ‘ಜೂನಿಯರ್’ ಕೂಡ ಸೆಪ್ಟೆಂಬರ್ ಆರಂಭದಲ್ಲೇ OTTಗೆ ಬರುತ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಲೀಲಾ, ಜೆನಲಿಯಾ ದೇಶಮುಖ್, ಮತ್ತು ವಿ ರವಿಚಂದ್ರನ್ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೆ, ತೆಲುಗಿನಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದ್ದು, OTTplay ವರದಿಯ ಪ್ರಕಾರ ಇಂದು ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆ ಇದೆ.
ಕಮ್ಮಟ್ಟಂ (Kammatam) – ಜೀ5- ಸೆಪ್ಟೆಂಬರ್ 5
ಈ ವಾರದ ಪ್ರಮುಖ OTT ಬಿಡುಗಡೆಗಳಲ್ಲಿ ‘ಕಮ್ಮಟ್ಟಂ’ ಕೂಡ ಒಂದು. ಇದು ಜೀ5 ನಲ್ಲಿ ಇಂದು ಬಿಡುಗಡೆಯಾಗಲಿದೆ. ರೋಚಕ ಮಲಯಾಳಂ ವೆಬ್ ಸರಣಿ. ಇನ್ಸ್ಪೆಕ್ಟರ್ ಆಂಟೋನಿಯೊ ಜಾರ್ಜ್, ಸ್ಯಾಮ್ಯುಯೆಲ್ ಎಂಬ ವ್ಯಕ್ತಿಯ ಸಾವಿನ ತನಿಖೆ ಆರಂಭಿಸುತ್ತಾನೆ. ಆರಂಭದಲ್ಲಿ ಇದು ಸಾಮಾನ್ಯ ಕೇಸ್ ಎಂದು ಅನಿಸಿದರೂ, ತನಿಖೆ ಮುಂದುವರಿದಂತೆ ಅದು ಒಂದು ಭೀಕರ ರಹಸ್ಯವಾಗಿ ಮಾರ್ಪಡುತ್ತದೆ. ಸುದೇವ್ ನಾಯರ್, ಜಿಯೋ ಬಿ ಬೇಬಿ, ಮತ್ತು ವಿವ್ಯಾ ಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
