Uttar Pradesh Viral News: ಪ್ರೀತಿ ಮತ್ತು ನಂಬಿಕೆಯೇ ಒಂದು ಸಂಬಂಧದ ಆಧಾರ. ಆದರೆ ಆ ನಂಬಿಕೆ ಮುರಿದಾಗ, ಜೀವನದ ದಾರಿ ಎಷ್ಟು ನೋವಿನಿಂದ ಕೂಡಿರುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಬಬ್ಲೂ ಎಂಬ ವ್ಯಕ್ತಿ, ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು ಕೊನೆಗೆ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಮದುವೆ ಮಾಡಿಕೊಟ್ಟ ಅತ್ಯಪರೂಪದ ಘಟನೆ ನಡೆದಿದೆ. ಈ ವಿಚಿತ್ರ ಮದುವೆಗೆ ಮೀರತ್ ನಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಕಾರಣವಾಗಿದೆ.
ಇದನ್ನೂ ಓದಿ: New OTT Movies: OTT ಹೊಸ ಸಿನಿಮಾಗಳ ಸಂಭ್ರಮ, Netflix, Prime, Z5, jio hotstar ನಲ್ಲಿ ಈ ಹೊಸ ಚಿತ್ರಗಳು ಲಭ್ಯ!
ಹೌದು ಉತ್ತರ ಪ್ರದೇಶದ(Uttar Pradesh) ದಾಂಗ್ಟಾ ಪೊಲೀಸ್ ಠಾಣೆ (Police Station) ವ್ಯಾಪ್ತಿಯ ಕಟಾರ್ ಮಿಶ್ರ ಗ್ರಾಮದ ಬಬ್ಲು ತನ್ನ ಪತ್ನಿ ರಾಧಿಕಾಳನ್ನು ಆಕೆಯ ಪ್ರಿಯಕರ ವಿಶಾಲ್ ಕುಮಾರ್ ಜೊತೆಗೆ ಮದುವೆ ಮಾಡಿಸಿದ್ದಾನೆ. ಬೇರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡುವ ಬಬ್ಲೂ, 2017ರಲ್ಲಿ ಗೋರಕ್ ಪುರ ಜಿಲ್ಲೆಯ ರಾಧಿಕಾಳನ್ನು ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಗ್ರಾಮಸ್ಥರು ಹೇಳುವಂತೆ ರಾಧಿಕಾ ಕಳೆದ ಒಂದುವರೆ ವರ್ಷದಿಂದಲೂ ಅದೇ ಗ್ರಾಮದ ವಿಶಾಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಬಬ್ಲುವಿಗೆ ತನ್ನ ಆಪ್ತರ ಮೂಲಕಈ ವಿಷಯ ತಿಳಿದುಕೊಂಡಿದ್ದಾನೆ. ಆದರೂ ಪತ್ನಿಗೆ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುವಂತೆ ಅನೇಕ ಬಾರಿ ಹೇಳಿದ್ದಾರೆ. ಆದರೆ ರಾಧಿಕಾ ಇದಕ್ಕೆ ಒಪ್ಪದೆ ಅನೇಕ ಬಾರಿ ಬಬ್ಲು ಜೊತೆ ಜಗಳವಾಡಿದ್ದರು. ಕೊನೆಗೆ ಇದರಿಂದ ಬೇಸತ್ತ ಬಬ್ಲು, ಪತ್ನಿಯನ್ನು ಆಕೆಯ ಇಚ್ಛೆಯಂತೆ ಪ್ರಿಯಕರೊಂದಿಗೆ ಮದುವೆ ಮಾಡಿಸಿದ್ದಾನೆ.
ಸೋಮವಾರ ದಂಗ್ವಾ ತೆಹಸೀಲ್ ನಲ್ಲಿ ರಾಧಿಕಾ ಮತ್ತು ವಿಶಾಲ್ ಮದುವೆಗೆ ಒಪ್ಪಿಕೊಂಡಿದ್ದು ಗ್ರಾಮಸ್ಥರ ಸಮುಖದಲ್ಲಿ ದೇವಸ್ಥಾನದಲ್ಲಿ ವಿವಾಹ ಮಾಡಿಸಲಾಗಿದೆ.
ಇದನ್ನೂ ಓದಿ: Gold Rate: ಚಿನ್ನದ ಬೆಲೆ ಇಳಿಕೆಯತ್ತ, ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಓಟಕ್ಕೆ ಬ್ರೇಕ್
ವಿಶಾಲನ ಜೊತೆಗೆ ಸಂಬಂಧ ಮುಗಿಸುವಂತೆ ಪದೇ ಪದೇ ಹೇಳಿದ್ದರು ರಾಧಿಕಾ ನಿರಾಕರಿಸುತ್ತಿದ್ದಳು. ಆದ್ದರಿಂದ ಮುಂದೆ ಯಾವುದೇ ದೊಡ್ಡ ಅನಾಹುತ ಆಗಬಾರದೆಂದು ಅವರ ಮದುವೆ ಮಾಡಿಸಲು ನಿರ್ಧರಿಸಿದೆ ಎಂದು ಬಬ್ಲು ಹೇಳಿಕೊಂಡಿದ್ದಾನೆ. ಇತ್ತೀಚೆಗೆ ಮೀರತ್ ನಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿತ್ತು, ಮುಸ್ಕಾನ್ ಎಂಬ ಮಹಿಳೆ ತನ್ನ ಪ್ರಿಯಕರ ಸಹಿಲ್ ಜೊತೆ ಸೇರಿ ತನ್ನ ಪತಿ ಸೌರಭನನ್ನು ಕೊಂದು ನೀರಿನ ಡ್ರಮ್ನಲ್ಲಿ ಹಾಕಿದರು. ಅಂತಹ ಪರಿಸ್ಥಿತಿ ನನ್ನ ಜೀವನದಲ್ಲಿ ಬಾರದಿರಲಿ ಎಂದು ನಾನು ಈ ನಿರ್ಧಾರ ತೆಗೆದುಕೊಂಡೆ ಎಂದು ಬಬ್ಲು ತಿಳಿಸಿದ್ದಾನೆ.
