Bengaluru Program: ಪರಂಪರೆ ಮತ್ತು ಪ್ರಗತಿಯ ಸಮತೋಲನವೇ ವಿಶ್ವಗುರು ಭಾರತದ ನಿಜವಾದ ಬಲ. ವಿಕಸಿತ ಭಾರತ 2027ರ ಗುರಿ, ವಿಶ್ವಗುರು ಭಾರತ ಶಾಶ್ವತ ಕನಸು ಎಂದು ABRSM ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗುಂತಾ ಲಕ್ಷ್ಮಣ್ ತಿಳಿಸಿದರು.
ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು HSR Layout ಮತ್ತು ABRSM Karnataka ಸಹಯೋಗದಲ್ಲಿ ನಡೆದ Great women warriors of bharatha Varsha ಎಂಬ ವಿಷಯ ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು(Bengaluru Program) ABRSM ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗುಂತಾ ಲಕ್ಷ್ಮಣ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು 2027ರ ಹೊತ್ತಿಗೆ ಭಾರತವು ಸಮಗ್ರ ಪ್ರಗತಿಯನ್ನು ಸಾಧಿಸಿ, ಆರ್ಥಿಕವಾಗಿ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮುವ ಗುರಿ ಹೊಂದಿದೆ. ತಂತ್ರಜ್ಞಾನ, ಕೃಷಿ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಸಮಾನವಾಗಿ ಬೆಳೆಯುವ ಮೂಲಕ, ಸ್ವಾವಲಂಬಿ ಹಾಗೂ ಶಾಶ್ವತ ಅಭಿವೃದ್ಧಿಯ ದಾರಿಗೆ ಭಾರತ ಹೆಜ್ಜೆಯಿಡುತ್ತಿದೆ.
ಇದನ್ನೂ ಓದಿ: Gold Rate: ಚಿನ್ನದ ಬೆಲೆ ಇಳಿಕೆಯತ್ತ, ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ಓಟಕ್ಕೆ ಬ್ರೇಕ್
ಗ್ರಾಮದಿಂದ ನಗರವರೆಗೂ ಸಮಾನ ಅವಕಾಶ, ಉದ್ಯೋಗ, ಮೂಲಸೌಕರ್ಯ ಒದಗಿಸುವುದು ವಿಕಸಿತ ಭಾರತದ ಕನಸು. ಭಾರತವು ತನ್ನ ಸಂಸ್ಕೃತಿ, ಪರಂಪರೆ, ಜ್ಞಾನ ಮತ್ತು ಮೌಲ್ಯಗಳಿಂದಲೇ ಪ್ರಾಚೀನ ಕಾಲದಿಂದ “ಜಗತ್ಗುರು” ಎಂದು ಕರೆಯಲ್ಪಟ್ಟಿದೆ. ಇಂದು ಯೋಗ, ಆಯುರ್ವೇದ, ತತ್ತ್ವಶಾಸ್ತ್ರ, ವಿಜ್ಞಾನ ಹಾಗೂ ಅಹಿಂಸೆ–ಸತ್ಯದ ಸಂದೇಶಗಳನ್ನು ಪ್ರಪಂಚಕ್ಕೆ ನೀಡುತ್ತಿರುವ ಭಾರತ, ಶೀಘ್ರದಲ್ಲೇ ಮರುಕಳಿಸಿ “ವಿಶ್ವಗುರು” ಸ್ಥಾನವನ್ನು ಪಡೆಯುತ್ತಿದೆ. ಪರಂಪರೆ ಮತ್ತು ಪ್ರಗತಿಯ ಸಮತೋಲನವೇ ವಿಶ್ವಗುರು ಭಾರತದ ನಿಜವಾದ ಬಲ. ವಿಕಸಿತ ಭಾರತ – 2027ರ ಗುರಿ, ವಿಶ್ವಗುರು ಭಾರತ – ಶಾಶ್ವತ ಕನಸು ಎಂದು ತಿಳಿಸಿದರು.
ಹೃದ್ರೋಗ ತಜ್ಞೆ ವಿಜಯಲಕ್ಷ್ಮಿ ಬಾಳೆಕುಂದ್ರಿಯವರು Great women warriors of bharatha Varsha ಎಂಬ ವಿಷಯ ಕುರಿತಾದ ಉಪನ್ಯಾಸ ನೀಡಿ ಕಿತ್ತೂರು ರಾಣಿ ಚೆನ್ನಮ್ಮ ಕಿತ್ತೂರಿನ ರಾಣಿ ಚೆನ್ನಮ್ಮವು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯೆಂದು ಹೆಸರಾಗಿದ್ದಾರೆ. 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಹಿಳೆಯರ ಧೈರ್ಯದ ಪ್ರತೀಕವಾಗಿ ನಿಂತರು. ತಮ್ಮ ಸಣ್ಣ ಸೇನೆಯೊಂದಿಗೆ ದೊಡ್ಡ ಸೇನೆಯನ್ನು ಎದುರಿಸಿದ ಅವರ ಸಾಹಸ ಇಂದಿಗೂ ಸ್ಫೂರ್ತಿದಾಯಕ. ರಾಣಿ ಅಬ್ಬಕ್ಕಾ ಚೌಟ ತುಳುನಾಡಿನ ರಾಣಿ ಅಬ್ಬಕ್ಕಾ ಚೌಟಾ 16ನೇ ಶತಮಾನದ ಧೀರ ರಾಣಿ. ಪೋರ್ಚುಗೀಸರ ಆಕ್ರಮಣವನ್ನು ತಡೆದು ನಾಡಿನ ಗೌರವವನ್ನು ಕಾಪಾಡಿದವರು. ಅಬ್ಬಕ್ಕಾ ರಾಣಿಯ ಶೌರ್ಯವನ್ನು ವಿದೇಶಿಯರೂ ಒಪ್ಪಿಕೊಂಡಿದ್ದಾರೆ. ಅವರು ಕರ್ನಾಟಕದ “ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ” ಎಂದೂ ಪ್ರಸಿದ್ಧರು.
ಇದನ್ನೂ ಓದಿ: Chandra Grahana 2025: ನಮ್ಮ ಮೇಲೆ ಚಂದ್ರ ಗ್ರಹಣದ ಪ್ರಭಾವ ಹಾಗೂ ಸೂಕ್ತ ಪರಿಹಾರಗಳು
ಅಹಿಲ್ಯಾಬಾಯಿ ಹೊಳ್ಕರ್ಮಾಲ್ವಾ ಪ್ರದೇಶದ ಅಹಿಲ್ಯಾಬಾಯಿ ಹೊಳ್ಕರ್ ಸಮರ್ಥ ಆಡಳಿತಗಾರ್ತಿ ಹಾಗೂ ಜನಪರ ನಾಯಕಿ. ನ್ಯಾಯಪ್ರಿಯತೆ, ಧರ್ಮನಿಷ್ಠೆ, ಜನರ ಸೇವಾಭಾವ ಇವರ ವೈಶಿಷ್ಟ್ಯ. ಅವರು ಅನೇಕ ದೇವಾಲಯಗಳನ್ನು, ಧಾರ್ಮಿಕ ಕೇಂದ್ರಗಳನ್ನು ಪುನರ್ ನಿರ್ಮಿಸಿ ಸಮಾಜದ ಸಂಸ್ಕೃತಿಯನ್ನು ಉಳಿಸಿದರು. ಈ ಮೂರು ಮಹಾನ್ ಮಹಿಳೆಯರು ಧೈರ್ಯ, ತ್ಯಾಗ ಮತ್ತು ಶಕ್ತಿಯ ಪ್ರತೀಕಗಳಾಗಿ ಭಾರತೀಯ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಮೌರ್ಯರ ಮಹಿಳೆಯರ ಸಾಹಸ ಧೈರ್ಯ ಪ್ರಾಚೀನ ಕಾಲಘಟ್ಟದಿಂದಲೂ ಸ್ಮರಣೀಯವಾದದ್ದು ಎಂದು ತಿಳಿಸಿದರು
ವಿರೋಧ ಪಕ್ಷದ ವಿಧಾನ ಪರಿಷತ್ ಉಪ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ ಭಾರತದ ಇತಿಹಾಸದಲ್ಲಿ ಮಹಿಳೆಯರು ಧೈರ್ಯ, ತ್ಯಾಗ ಮತ್ತು ಶಕ್ತಿಯ ಪ್ರತೀಕ. ಅವರ ಜೀವನವೇ ಪರಿಶ್ರಮ, ತ್ಯಾಗ ಮತ್ತು ಜನಪರ ಚಿಂತನೆಯ ಮಾದರಿ. ಸಮಾಜಮುಖಿ ಕಾರ್ಯಗಳಲ್ಲಿ ಅವರು ತೋರಿದ ಮುಂಚೂಣಿ ಪಾತ್ರವು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ..
ಎಂದು ತಿಳಿಸಿದರು
ಶ್ರೀ ತಿಪ್ಪೇಸ್ವಾಮಿ ಎನ್ ಎ ಅವರ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೆಸರು ಮಾಡಿದವರು. ರಾಣಿ ಅಬ್ಬಕ್ಕಾ ತುಳುನಾಡಿನಲ್ಲಿ ಪೋರ್ಚುಗೀಸರ ಆಕ್ರಮಣವನ್ನು ತಡೆದು ಜನರ ಗೌರವವನ್ನು ಉಳಿಸಿದರು. ಅಹಿಲ್ಯಾಬಾಯಿ ಹೊಳ್ಕರ್ ನ್ಯಾಯಪ್ರಿಯ ಆಡಳಿತಗಾರ್ತಿಯಾಗಿ ಸಮಾಜಕ್ಕೆ ಶ್ರೇಷ್ಠ ಸೇವೆ ಸಲ್ಲಿಸಿದರು ಎಂದು ತಿಳಿಸಿದರು.
ಇದನ್ನೂ ಓದಿ: New OTT Movies: OTT ಹೊಸ ಸಿನಿಮಾಗಳ ಸಂಭ್ರಮ, Netflix, Prime, Z5, jio hotstar ನಲ್ಲಿ ಈ ಹೊಸ ಚಿತ್ರಗಳು ಲಭ್ಯ!
ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ರಾಗಿಣಿ ಎನ್ ಅವರು ಈ ಮೂರು ಮಹಾನ್ ಮಹಿಳೆಯರು ನಮಗೆ ನೀಡುವ ಪಾಠವೆಂದರೆ—ಧೈರ್ಯ, ತ್ಯಾಗ, ಆಡಳಿತ ಸಾಮರ್ಥ್ಯ ಮತ್ತು ದೇಶಪ್ರೇಮ ಯಾವುದೇ ಕಾಲಘಟ್ಟದಲ್ಲೂ ಶಾಶ್ವತ ಮೌಲ್ಯಗಳಾಗಿವೆ. ಇಂದಿನ ಪೀಳಿಗೆಯ ಯುವಕರು ಅವರ ಜೀವನದಿಂದ ಪ್ರೇರಣೆ ಪಡೆದು, ವಿಕಸಿತ ಭಾರತ ನಿರ್ಮಾಣದಲ್ಲಿ ತಮ್ಮ ಪಾತ್ರ ವಹಿಸಬೇಕು ಎಂಬುದು ನನ್ನ ಹಾರೈಕೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಲತಾ ನರಸಿಂಹಮೂರ್ತಿ, ಡಾ. ಸಂಗಪ್ಪ ಪ್ರೊ ರಾಜಶೇಖರ್ ಹೊಸಳ್ಳಿ ಡಾ ಶಿವ ಪೂಜಿ ಕೋಟಿ ಡಾ.ಶೈಲಜ. ಡಾ ನಿರ್ಮಲ ಡಾ. ರಘು ಡಾ. ಬೈರೇಗೌಡ ಶ್ರೀಮತಿ ರೇಷ್ಮಾ ಮಾಜಿ ಮತ್ತಿತರು ಉಪಸ್ಥಿತರಿದ್ದರು.
